ಪಾಕ್ ಜೈಲಿನಲ್ಲಿ 308 ಭಾರತೀಯ ಕೈದಿಗಳು! ಭಾರತದ ಜೈಲಿನಲ್ಲಿ 417 ಪಾಕ್ ಕೈದಿಗಳು!
Team Udayavani, Jul 2, 2023, 8:00 AM IST
ನವದೆಹಲಿ: ಪಾಕಿಸ್ತಾನವು ತನ್ನ ಜೈಲುಗಳಲ್ಲಿರುವ 308 ಭಾರತೀಯ ಕೈದಿಗಳ ಪಟ್ಟಿಯನ್ನು ಶನಿವಾರ ಭಾರತೀಯ ಹೈ ಕಮಿಷನ್‌ಗೆ ನೀಡಿದೆ.
ಭಾರತ-ಪಾಕಿಸ್ತಾನದ ಒಪ್ಪಂದದ ಭಾಗವಾಗಿ ನೀಡಿರುವ ಈ ಪಟ್ಟಿಯಲ್ಲಿ 42 ನಾಗರಿಕರು ಹಾಗೂ 266 ಮಂದಿ ಮೀನುಗಾರರು ಇನ್ನೂ ಬಿಡುಗಡೆ ಹೊಂದದೇ ಇದ್ದಾರೆಂದು ಉಲ್ಲೇಖೀಸಲಾಗಿದೆ.
ಅದೇ ರೀತಿ ಭಾರತ ಕೂಡ ತನ್ನ ಜೈಲುಗಳಲ್ಲಿರುವ ಪಾಕಿಸ್ತಾನಿಗಳ ಪಟ್ಟಿ ಹಸ್ತಾಂತರಿಸಿದ್ದು, ಈ ಪೈಕಿ 343 ನಾಗರಿಕರು ಹಾಗೂ 74 ಮೀನುಗಾರರು ಸೇರಿದಂತೆ ಒಟ್ಟು 417 ಮಂದಿ ಇರುವುದಾಗಿ ತಿಳಿಸಿದೆ.
2008ರ ಉಭಯ ರಾಷ್ಟ್ರಗಳ ರಾಯಭಾರ ಒಪ್ಪಂದದ ಭಾಗವಾಗಿ ಪ್ರತಿವರ್ಷ ಜನವರಿ ಹಾಗೂ ಜುಲೈನಲ್ಲಿ ಈ ಪಟ್ಟಿಯನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೇಳೆ ಭಾರತ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಕೈದಿಗಳ ಬಿಡುಗಡೆಗೆ ಆಗ್ರಹಿಸಿದ್ದು, ಅವರ ಸುರಕ್ಷತೆ ಖಾತರಿ ಪಡಿಸುವಂತೆಯೂ ಕೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.