Kashmir; ಈ ವರ್ಷ ಜಂಟಿ ಕಾರ್ಯಾಚರಣೆಯಲ್ಲಿ 31 ಭಯೋತ್ಪಾದಕರ ಅಂತ್ಯ
ಕಳೆದ ವರ್ಷ ದಾಖಲಾದ ಸಕ್ರಿಯ ಭಯೋತ್ಪಾದಕರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ
Team Udayavani, Sep 28, 2023, 4:23 PM IST
ಶ್ರೀನಗರ : ಯಶಸ್ವಿ ಜಂಟಿ ಕಾರ್ಯಾಚರಣೆಗಳ ಗಳಲ್ಲಿ 2023 ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಒಟ್ಟು 31 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಘಟಿತ ಪ್ರಯತ್ನಗಳು ಕೇಂದ್ರಾಡಳಿತ ಪ್ರದೇಶದ ವಿವಿಧ ಸ್ಥಳಗಳಲ್ಲಿ BSF, ಪೊಲೀಸ್, SSB ಮತ್ತು CRPF ಪಡೆಗಳು ಕಾರ್ಯಾಚರಣೆ ನಡೆಸಿದ್ದವು.
ಈ ಜಂಟಿ ಕಾರ್ಯಾಚರಣೆಗಳ ಸಮಗ್ರ ವಿವರವನ್ನು ನೀಡಿದ ಜೆ & ಕೆ ಹಿರಿಯ ಪೋಲೀಸ್ ಅಧಿಕಾರಿ ಪೊಲೀಸ್, ಈ ತಿಂಗಳ ಆರಂಭದಲ್ಲಿ, ಕೋಕರ್‌ನಾಗ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಉನ್ನತ ಉಗ್ರ ಕಮಾಂಡರ್ ಉಜಿರ್ ಖಾನ್ ಸೇರಿದಂತೆ ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ಕಣಿವೆಯಲ್ಲಿ ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ, ಇದು ಸುಮಾರು 7 ದಿನಗಳವರೆಗೆ ನಡೆದಿದ್ದು, ಆರ್ಮಿ ಕರ್ನಲ್, ಯೋಧ ಮತ್ತು ಪೊಲೀಸ್ ಉಪ ಅಧೀಕ್ಷಕ ಸೇರಿ ಮೂವರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.
ಜೆ & ಕೆ ಕೇಂದ್ರಾಡಳಿತ ಪ್ರದೇಶದಲ್ಲಿ ಇದುವರೆಗೆ ಒಟ್ಟು 47 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದು, ಈ ವರ್ಷ ಸೆಪ್ಟೆಂಬರ್ 26 ರ ವೇಳೆಗೆ 204 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ವರದಿ ಮಾಡಿವೆ. ಅಂಕಿಅಂಶಗಳು ಜನವರಿ 1 ಮತ್ತು ಸೆ. 26, 2023 ರ ನಡುವೆ 47 ಮಂದಿಯಲ್ಲಿ 38 ವಿದೇಶಿ ಭಯೋತ್ಪಾದಕರು ಮತ್ತು ಒಂಬತ್ತು ಸ್ಥಳೀಯ ಉಗ್ರಗಾಮಿಗಳು ಎಂದು ವಿವರ ಬಹಿರಂಗಪಡಿಸಲಾಗಿದೆ. 2022 ರಲ್ಲಿ 187 ಉಗ್ರರನ್ನು ಹೊಡೆದುರುಳಿಸಲಾಗಿತ್ತು. 57 ವಿದೇಶಿ ಭಯೋತ್ಪಾದಕರು ಮತ್ತು 130 ಸ್ಥಳೀಯರಾಗಿದ್ದರು.
ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರದಲ್ಲಿ 111 ಸಕ್ರಿಯ ಭಯೋತ್ಪಾದಕರು ನೆಲೆಸಿದ್ದಾರೆ, 71 ವಿದೇಶಿ ಮತ್ತು 40 ಸ್ಥಳೀಯರು, ಕಳೆದ ವರ್ಷ ದಾಖಲಾದ 137 ಸಕ್ರಿಯ ಭಯೋತ್ಪಾದಕರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.