ಕೇರಳದಲ್ಲಿಂದು 31,445 ಕೋವಿಡ್ ಕೇಸ್| ಮೂರು ತಿಂಗಳ ಬಳಿಕ ಗರಿಷ್ಠ ಪ್ರಕರಣ
Team Udayavani, Aug 25, 2021, 8:20 PM IST
ತಿರುವನಂತಪುರ: ಮೂರು ತಿಂಗಳ ಬಳಿಕ ಕೇರಳದಲ್ಲಿ ಕೋವಿಡ್ ಪ್ರಕರಣ ಒಂದೇ ದಿನ 30 ಸಾವಿರದ ಗಡಿ ದಾಡಿದೆ. ಇಂದು (ಆ.25) ಸಂಜೆ ಬಿಡುಗಡೆಯಾಗಿರುವ ವರದಿಗಳ ಪ್ರಕಾರ 31,445 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ 215 ಜನರು ಮೃತಪಟ್ಟಿದ್ದಾರೆ.
ಈ ಹಿಂದೆ ಮೇ 20 ರಂದು ಕೇರಳದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 30 ಸಾವಿರ ದಾಟಿತ್ತು. ಇದೀಗ ಒಂದೇ ದಿನ 31,445 ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ ಪಾಸಿಟಿವಿಟಿ ದರ ಶೇ 19 ದಾಟಿದೆ.
ಓಣಂ ಹಬ್ಬದ ಬಳಿಕ ಪಾಸಿಟಿವಿಟಿ ದರ ಶೇ 20 ದಾಟಬಹುದು ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದರು. ಬಕ್ರೀದ್ ಸಂದರ್ಭದಲ್ಲಿ ಕೆಲವು ದಿನಗಳ ಮಟ್ಟಿಗೆ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಜುಲೈ ಕೊನೆಗೆ ಪ್ರತಿ ದಿನ ಕೋವಿಡ್ ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿ ದಾಟಲು ಆರಂಭವಾಗಿತ್ತು.ಬುಧವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 20,271 ಸೋಂಕಿತರು ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 36,92,628 ಮಂದಿ ಗುಣಮುಖರಾದಂತಾಗಿದೆ.
ಸದ್ಯ ಕೇರಳದಲ್ಲಿ 1,70,292 ಸಕ್ರಿಯ ಪ್ರಕರಣಗಳಿವೆ. 24 ಗಂಟೆ ಅವಧಿಯಲ್ಲಿ 1,65,273 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ಒಟ್ಟು 3,06,19,046 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಎರ್ನಾಕುಲಂನಲ್ಲಿ ಅತಿಹೆಚ್ಚು, ಅಂದರೆ 4,048 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ, ತ್ರಿಶೂರ್‌ನಲ್ಲಿ 3,865, ಕೋಯಿಕ್ಕೋಡ್‌ನಲ್ಲಿ 3,680, ಮಲಪ್ಪುರಂನಲ್ಲಿ 3,502, ಪಾಲಕ್ಕಾಡ್‌ನಲ್ಲಿ 2,562, ಕೊಲ್ಲಂನಲ್ಲಿ 2,479, ಕೊಟ್ಟಾಯಂನಲ್ಲಿ 2,050, ಕಣ್ಣೂರಿನಲ್ಲಿ 1,930, ಆಲಪ್ಪುಳದಲ್ಲಿ 1,874, ತಿರುವನಂತಪುರದಲ್ಲಿ 1,700, ಇಡುಕ್ಕಿಯಲ್ಲಿ 1,166, ಪತ್ತನಂತಿಟ್ಟದಲ್ಲಿ 1,008, ವಯನಾಡ್‌ನಲ್ಲಿ 962 ಪ್ರಕರಣಗಳು ವರದಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Casual Attire: ಡ್ರೆಸ್‌ಕೋಡ್ ಉಲ್ಲಂಘನೆ… ಡಿಸಿಎಂ ಉದಯನಿಧಿಗೆ ಹೈಕೋರ್ಟ್ ನೋಟಿಸ್
Online Shopping Effect: ದೇಶದಲ್ಲಿ 2 ಲಕ್ಷ ಕಿರಾಣಿ ಅಂಗಡಿಗಳು ಬಂದ್
ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್
Amritsar; ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ
Chandni Chowk: ಫ್ರೆಂಚ್ ರಾಯಭಾರಿಯ ಮೊಬೈಲನ್ನೇ ಎಗರಿಸಿದ ಕಳ್ಳರು… ನಾಲ್ವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.