37 ಸಾವಿರ ಬಾಕ್ಸ್ ನಕಲಿರೂಪ್‌ಮಂತ್ರ ಪತ್ತೆ
Team Udayavani, Oct 29, 2017, 11:56 AM IST
ನವದೆಹಲಿ: ಇತ್ತೀಚೆಗೆ ದೆಹಲಿಯ ಕನಿಕ ಇಂಪಾಟ್ಸ್ ಕಚೇರಿ ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿದ ಸ್ಥಳೀಯ ಆಯುಕ್ತೆ ನಿಧಿ ಸಿದನ ಹಾಗೂ ನಯಮತ್ ಸಿಸ್ತನಿ ಅವರ ತಂಡ 37 ಸಾವಿರ “ರೂಪ್ ಅಲ್ಟ್ರಾ’ ಹೆಸರಿನ ನಕಲಿ ರೂಪ್ ಮಂತ್ರ ಉತ್ಪನ್ನಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ.
ಖ್ಯಾತ ಆಯುರ್ವೇದ ಉತ್ಪನ್ನಗಳ ತಯಾರಕ ಸಂಸ್ಥೆ ದಿವಿಸಾ ಹರ್ಬಲ್‌ರವರ ಚರ್ಮ ಆರೋಗ್ಯ ರಕ್ಷಿಸುವ ಪರಿಣಾಮಕಾರಿ ಉತ್ಪನ್ನ “ರೂಪ್ ಮಂತ್ರ’ ಕ್ರೀಮ್‌ನ ನಕಲಿ ಉತ್ಪನ್ನವನ್ನು ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಕನಿಕ ಇಂಪಾಟ್ಸ್ ಉತ್ಪಾದಿಸುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳೀಯ ಆಯುಕ್ತೆ ನಿಧಿ ಸಿದನ ಮತ್ತು ನಯಮತ್ ಸಿಸ್ತನಿ ತಂಡ ದಾಳಿ ನಡೆಸಿದೆ.
ಕನಿಕ ಇಂಪಾಟ್ಸ್ ಬೃಹತ್ ಪ್ರಮಾಣದಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಿಟ್ಟಿದ್ದ ಪಿಪ್ಪಾಲಿ ಲೇನ್, ಮೋತಿ ಖಾನ್ ಹಾಗೂ ಸದ್ದಾರ್ ಬಜಾರ್ ಗೋದಾಮಗಳಲ್ಲಿದ್ದ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ ಎಂದು ಕಂಪೆನಿಯ ಡಾ. ವಿಜಯ್ ಕಿಮಟಾ ತಿಳಿಸಿದ್ದಾರೆ.
ಜನಪ್ರಿಯ ರೂಪ್‌ಮಂತ್ರ ಮಾರುಕಟ್ಟೆಯನ್ನು ಕಂಡು ಸಹಿಸಲಾರದ ನಕಲಿ ಕಂಪನಿಗಳು ಇಂತಹ ಹೀನ ಕೃತ್ಯ ಎಸಗಿದ್ದಾರೆ. ಸಾರ್ವಜನಿಕರಿಂದ ನಕಲಿ ರೂಪ್‌ಮಂತ್ರದ ದೂರುಗಳು ನಮಗೆ ಬರುತ್ತಿದ್ದವು. ಅವುಗಳ ಆಧಾರ ಮೇಲೆ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದೇವು.
ನ್ಯಾಯಾಲಯದ ಆದೇಶದಂತೆ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಕಂಪನಿಯು ಇತ್ತೀಚಿನ ದಿನಗಳಲ್ಲಿ ಜನತೆಯಲ್ಲಿ ನಮ್ಮ ಸಂಸ್ಥೆಯ ಉತ್ಪನ್ನಗಳ ಹಾಗೂ ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ನಕಲಿ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.