ಇರಾಕ್: ಅಪಹೃತ ಭಾರತೀಯರ ಹತ್ಯೆ
Team Udayavani, Mar 21, 2018, 6:00 AM IST
ಹೊಸದಿಲ್ಲಿ: ಆ ನತದೃಷ್ಟರ ಕುಟುಂಬದ ಸದಸ್ಯರು ಅವರಿಗಾಗಿ ಕಾದಿದ್ದು ಬರೋಬ್ಬರಿ ಮೂರು ವರ್ಷ. ಆದರೆ, ಆ ನಿರೀಕ್ಷೆಯ ನಂದಾದೀಪ ನಂದಿ ಹೋಗಿದೆ. ಒಂದಿಷ್ಟು ಕಾಸು ಸಂಪಾದಿಸಿ ತಮ್ಮ ಕುಟುಂಬದ ಜೀವನ ಮಟ್ಟ ಸುಧಾರಿಸಲೆಂದು, ತಾವು ಬೆಳೆದ ಹಳ್ಳಿ, ಊರುಗಳನ್ನು, ಬಂಧು-ಬಳಗ, ಸ್ನೇಹಿತರನ್ನು ತೊರೆದು ದೂರದ ಇರಾಕ್‌ಗೆ ಹೋಗಿದ್ದ ಅವರೆಲ್ಲರೂ ಹೇಳ ಹೆಸರಿಲ್ಲದಂತೆ ಅಳಿದುಹೋಗಿದ್ದಾರೆ. ಮನೆಗಳಿಂದ ತೆರಳುವಾಗ ನಗುಮೊಗದಲ್ಲಿ ಎಲ್ಲರಿಂದ ಬೀಳ್ಕೊಂಡ ಅವರು, ಕನಿಷ್ಠ ಪಕ್ಷ ಅವರ ಸಂಬಂಧಿಕರಿಗೆ ಶವಗಳಾಗಿಯೂ ಸಿಗದೆ ಕೇವಲ ಅಸ್ಥಿಪಂಜರಗಳ ರೂಪದಲ್ಲಿ ಪತ್ತೆಯಾಗಿರುವುದು ದುರಂತ.
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯಸಭೆಯಲ್ಲಿ ಮಂಗಳವಾರ ಸ್ವಯಂ ಪ್ರೇರಿತ ವಾಗಿ ಹೇಳಿಕೆ ನೀಡುವ ಸಂದರ್ಭದಲ್ಲಿಯೇ ಭಾರೀ ಕೋಲಾಹಲ ಉಂಟಾಗಿತ್ತು. ಆದರೆ ಲೋಕ ಸಭೆಯಲ್ಲಿ ಸುಷ್ಮಾ ಸ್ವರಾಜ್ ಮಾಹಿತಿ ನೀಡಲು ಎದ್ದು ನಿಲ್ಲುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಅಡ್ಡಿಪಡಿಸಿದರು. ಹೀಗಾಗಿ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು. ಏಕಾಏಕಿ ಸದನದಲ್ಲಿ ಸಾವಿನ ಸುದ್ದಿ ಪ್ರಕಟಿಸಿದ ಸರಕಾರದ ಕ್ರಮಕ್ಕೆ ವಿಪಕ್ಷಗಳು ಆಕ್ಷೇಪಿಸಿದವು. ರಾಜ್ಯಸಭೆಯಲ್ಲಿ ಗದ್ದಲದ ಹೊರತಾಗಿಯೂ ಮಾತನಾಡಿದ ಸುಷ್ಮಾ, ಪಂಜಾಬ್‌ನಿಂದ ಇರಾಕ್‌ಗೆ ತೆರಳಿದ್ದ 39 ಮಂದಿಯನ್ನು ಐಸಿಸ್ ಉಗ್ರರು ಕೊಂದಿದ್ದಾರೆ. ಆದರೆ ಯಾವಾಗ ಈ ಹೀನ ಕೃತ್ಯ ನಡೆಸಲಾಗಿದೆ ಎಂಬ ಮಾಹಿತಿ ಸಿಕ್ಕಿಲ್ಲ ಎಂದರು.
ರೇಡಾರ್ ಮೂಲಕ ಪತ್ತೆ: ನಾಪತ್ತೆಯಾಗಿದ್ದ ಭಾರತೀಯರನ್ನು ಪತ್ತೆ ಮಾಡಲು ಭಾರತ-ಇರಾಕ್ ಶ್ರಮಿಸುತ್ತಿದ್ದೆವು. ಕಳೆದ ವರ್ಷದ ಮಧ್ಯದಲ್ಲಿ ಬದೋಶ್‌ನಲ್ಲಿನ ಗುಡ್ಡದ ಮಣ್ಣಿನ ಪದರಗಳ ಅಡಿಯಲ್ಲಿ ಒಟ್ಟಿಗೇ 39 ಅಸ್ಥಿಪಂಜರಗಳು ಪತ್ತೆಯಾಗಿದ್ದವು. “ಡೀಪ್ ಪಿನಿಟ್ರೇಷನ್ ರೇಡಾರ್’ ಮೂಲಕ ಅಸ್ಥಿಪಂಜರಗಳನ್ನು ಪತ್ತೆ ಮಾಡಲಾಗಿತ್ತು. ಇವುಗಳನ್ನು ಬಗ್ಧಾದ್‌ನಲ್ಲಿ ಡಿಎನ್‌ಎ ಪರೀಕ್ಷೆಗೊಳ ಪಡಿಸಲಾಯಿತು. ಇದಾದ ಮೇಲೆ, ಕಳೆದ ಅಕ್ಟೋಬರ್‌ನಲ್ಲಿ, ಅಪಹೃತರ ಸಂಬಂಧಿಕರಿಂದ ಡಿಎನ್‌ಎ ಸ್ಯಾಂಪಲ್‌ಗಳನ್ನು ಪಡೆದು ಅವನ್ನು ಬಗ್ಧಾದ್‌ಗೆ ರವಾನಿಸಲಾಯಿತು. ರವಾನಿಸಿದ ಡಿಎನ್‌ಎ ಮಾದರಿಗಳು, ಅಸ್ಥಿಪಂಜರಗಳ ಡಿಎನ್‌ಎಗಳಿಗೆ ಹೋಲಿಕೆಯಾಗಿದ್ದರಿಂದ ಮೃತ ಪಟ್ಟವರು ಭಾರತೀಯ ಕೂಲಿ ಕಾರ್ಮಿಕರೇ ಎಂದು ತೀರ್ಮಾನಿಸಲಾಯಿತು ಎಂದು ಸುಷ್ಮಾ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.