ಇರಾಕ್‌ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರ ಸಾವು: ಸುಷ್ಮಾ
Team Udayavani, Mar 20, 2018, 11:33 AM IST
ಹೊಸದಿಲ್ಲಿ : ಇರಾಕ್‌ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಂದು ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.
ಮೃತ ಭಾರತೀಯರ ಕಳೇಬರಗಳನ್ನು ಪಡೆಯಲು ಸಚಿವ ವಿ ಕೆ ಸಿಂಗ್ ಅವರು ಇರಾಕ್‌ಗೆ ತೆರಳಲಿದ್ದಾರೆ. ಇರಾಕ್‌ನಿಂದ ಮರಳುವಾಗ ಅವರು ಮೊದಲು ಅಮೃತ್‌ಸರದಲ್ಲಿ ಇಳಿಯುವರು. ಅನಂತರದಲ್ಲಿ ಇತರ ರಾಜ್ಯಗಳಿಗೆ ತೆರಳಿ ಶವಗಳನ್ನು ಸಂಬಂಧಿತರಿಗೆ ಒಪ್ಪಿಸುವರು ಎಂದು ಸ್ವರಾಜ್ ಹೇಳಿದರು.
ಇರಾಕ್ ನ ಸಾಮೂಹಿಕ ಗೋರಿಗಳಲ್ಲಿದ್ದ 39 ಭಾರತೀಯರ ಶವಗಳನ್ನು ಮೇಲೆತ್ತಿ ಗುರುತಿಸುವ ಗುರುತರ ಸವಾಲಿನ ಕೆಲಸವನ್ನು ಯಶಸ್ವಿಯಾಗಿ ನಡೆಸಿರುವ ಸಚಿವ ವಿ ಕೆ ಸಿಂಗ್ ಅವರಿಗೆ ನಾನು ಧನ್ಯವಾದ ಹೇಳಬಯಸುತ್ತೇನೆ ಎಂದು ಸ್ವರಾಜ್ ನುಡಿದರು.
ಮೃತ ಭಾರತೀಯ ಡಿಎನ್‌ಎ ಮಾದರಿ ಪಡೆಯಲು ನಾವು ನಾಲ್ಕು ರಾಜ್ಯಗಳಲ್ಲಿ ಹರಡಿಕೊಂಡಿರುವ ಅವರ ಕುಟುಂಬಗಳನ್ನು ಸಂಪರ್ಕಿಸಿ ಬಳಿಕ ಶವಗಳನ್ನು ಗುರುತಿಸುವುದಕ್ಕಾಗಿ ನಾವು ಅವರನ್ನು ಇರಾಕ್‌ಗೆ ಕಳುಹಿಸಿದೆವು ಎಂದು ಸ್ವರಾಜ್ ಹೇಳಿದರು.
ಇರಾಕ್‌ನ ಸಮರ ತ್ರಸ್ತ ಮೊಸುಲ್‌ನಲ್ಲಿ 2014ರಿಂದ 39 ಭಾರತೀಯರು ನಾಪತ್ತೆಯಾಗಿದ್ದು ಅವರು ಮೃತಪಟ್ಟಿರುವುದು ಅನಂತರ ದೃಢಪಟ್ಟಿತು ಎಂದು ಸ್ವರಾಜ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.