
Maharastra: ಉದ್ಧವ್ ಠಾಕ್ರೆ ನಿವಾಸದಲ್ಲಿತ್ತು ನಾಲ್ಕು ಅಡಿ ಉದ್ದದ ನಾಗರ ಹಾವು: ವಿಡಿಯೋ…
Team Udayavani, Aug 7, 2023, 12:33 PM IST

ಮಹಾರಾಷ್ಟ್ರ: ಶಿವಸೇನಾ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮುಂಬೈ ನಿವಾಸದಲ್ಲಿ ನಾಲ್ಕು ಅಡಿ ಉದ್ದದ ನಾಗರಹಾವು ಪತ್ತೆಯಾಗಿದೆ.
ಬಾಂದ್ರಾದ ಕಲಾ ನಗರದಲ್ಲಿರುವ ಠಾಕ್ರೆ ಅವರ ಮಾತೋಶ್ರೀ ನಿವಾಸದ ಆವರಣದಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಭಾನುವಾರ ಮಧ್ಯಾಹ್ನ 1.30 ರ ಸುಮಾರಿಗೆ ಹಾವು ಕಂಡುಬಂದ ಹಿನ್ನೆಲೆಯಲ್ಲಿ ಉರಗ ರಕ್ಷಕ ಅತುಲ್ ಕಾಂಬ್ಳೆ ಅವರಿಗೆ ಕರೆ ಮಾಡಲಾಗಿದೆ ವಿಷಯ ತಿಳಿದು ಕೂಡಲೇ ಕಾರ್ಯಪ್ರವೃತ್ತರಾದ ಅವರು ತಮ್ಮ ತಂಡದೊಂದಿಗೆ ಠಾಕ್ರೆ ನಿವಾಸಕ್ಕೆ ಬಂದು ಮನೆಯೊಳಗಿದ್ದ ನಾಗರ ಹಾವನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದು. ವೀಡಿಯೊದಲ್ಲಿ, ಉದ್ಧವ್ ಠಾಕ್ರೆ ಅವರ ಕಿರಿಯ ಮಗ ತೇಜಸ್ ಠಾಕ್ರೆ ಕೂಡಾ ಸ್ಥಳದಲ್ಲಿ ಇದ್ದು. ಹಾವಿನ ರಕ್ಷಣಾ ಕಾರ್ಯಾಚರಣೆ ನಡೆಸಿದ ವೇಳೆ ತಂದೆ ಮಗ ಇಬ್ಬರೂ ಸ್ಥಳದಲ್ಲಿಯೇ ಇದ್ದು ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಣೆ ಮಾಡಿದ್ದಾರೆ. ವನ್ಯಜೀವಿ ಸಂಶೋಧಕರಾಗಿರುವ ತೇಜಸ್ ಠಾಕ್ರೆ ಅವರು ಹಾವಿನ ರಕ್ಷಣೆಯ ಪ್ರಯತ್ನದ ಸಮಯದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಕೂಡಾ ಕಂಡುಬಂದಿದೆ.
ಕೆಲವು ದಿನಗಳ ಹಿಂದೆ ಭಾಂಡೂಪ್‌ನಲ್ಲಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ನಿವಾಸದಲ್ಲಿ ಹಾವು ಕಂಡುಬಂದಿತ್ತು ಇದೀಗ ಉದ್ಧವ್ ಠಾಕ್ರೆ ನಿವಾಸದಲ್ಲಿ ಹಾವು ಕಾಣಿಸಿಕೊಂಡಿದೆ.
ಇದನ್ನು ಓದಿ: ರಾಹುಲ್ ಅನರ್ಹತೆ ವಾಪಸ್ ಪಡೆದ ಲೋಕಸಭೆ ಸ್ಪೀಕರ್… ಇಂದಿನ ಕಲಾಪದಲ್ಲಿ ಭಾಗಿ
Dangerous cobra was found in #Matoshree‘s parking slot. #snake #cobra #Mumbai #Maharashtra #UddhavThackeray @OfficeofUT @UdhavThackeraypic.twitter.com/AfTQsIKLrr
— Priyathosh Agnihamsa (@priyathosh6447) August 7, 2023
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.