ಸುಕೇಶ್ ಚಂದ್ರಶೇಖರ್ ಕೇಸ್ ಗೆ ಹೊಸ ಟ್ವಿಸ್ಟ್: ಜೈಲಿನಲ್ಲಿ ಭೇಟಿಯಾಗಿದ್ದರು ನಾಲ್ವರು ನಟಿಯರು
Team Udayavani, Sep 15, 2022, 9:53 AM IST
ಹೊಸದಿಲ್ಲಿ: ಬಹುಕೋಟ್ಯಾಧಿಪತಿ, ವಂಚಕ ಸುಕೇಶ್ ಚಂದ್ರಶೇಖರ್ ಅವರನ್ನು ಒಳಗೊಂಡಿರುವ ಪ್ರಕರಣ ಇದೀಗ ಮತ್ತೊಂದು ಟ್ವಿಸ್ಟ್ ಪಡೆದಿದೆ. ಈ ಬಾರಿ ಸುಕೇಶ್ ಅವರು ಸಣ್ಣ ನಟಿಯರು ಮತ್ತು ಮಾಡೆಲ್‌ಗಳಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ.
ನಾಲ್ವರು ಸಣ್ಣ ಪ್ರಮಾಣದ ನಟಿಯರು ಮತ್ತು ಮಾಡೆಲ್ ಗಳಾದ ನಿಕಿತಾ ತಾಂಬೋಲಿ, ಚಾಹತ್ ಖನ್ನಾ, ಸೋಫಿಯಾ ಸಿಂಗ್ ಮತ್ತು ಅರುಷಾ ಪಾಟೀಲ್ ಅವರು ದೆಹಲಿ ಜೈಲಿನಲ್ಲಿದ್ದ ಸುಕೇಶ್ ಚಂದ್ರಶೇಖರ್ ಅವರನ್ನು ಭೇಟಿಯಾಗಿದ್ದಾರೆ ಎಂದು ಇಂಡಿಯಾ ಟುಡೇ ತಿಳಿಸಿದೆ.
ಈ ನಾಲ್ವರು ನಟಿಯರಾದ ಸಹವರ್ತಿ ಪಿಂಕಿ ಇರಾನಿ ಮೂಲಕ ಸುಕೇಶ್ ಭೇಟಿ ಮಾಡಲು ತಿಹಾರ್ ಜೈಲಿಗೆ ಹೋಗಿದ್ದರು ಎನ್ನಲಾಗಿದೆ.
ಪಿಂಕಿ ಇರಾನಿ ಈ ನಟಿಯರನ್ನು ವಿವಿಧ ಹೆಸರುಗಳಿಂದ ಸುಕೇಶ್ ಗೆ ಪರಿಚಯಿಸಿದರು. ಅವರ ಭೇಟಿಗಳ ವಿನಿಮಯವಾಗಿ ಅವರು ಸುಕೇಶ್‌ನಿಂದ ಗುಚ್ಚಿ, ಎಲ್‌ವಿ ಬ್ಯಾಗ್‌ಗಳು, ವರ್ಸೇಸ್ ವಾಚ್ ನಂತಹ ದುಬಾರಿ ಉಡುಗೊರೆಗಳನ್ನು ಮತ್ತು ಹಣ ಪಡೆದಿದ್ದಾರೆ.
ಈ ನಾಲ್ವರು ನಟರಲ್ಲಿ ಅರುಷಾ ಪಾಟೀಲ್ ಅವರು ಪಿಂಕಿ ಇರಾನಿ ಮೂಲಕ ತನಗೆ ಸುಕೇಶ್ ಚಂದ್ರಶೇಖರ್ ಪರಿಚಯವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ತಿಹಾರ್ ಜೈಲಿನಲ್ಲಿ ಅವರನ್ನು ಭೇಟಿಯಾಗಿರುವುದನ್ನು ನಿರಾಕರಿಸಿದರು. ಆದರೆ, ಆಕೆಯ ಬ್ಯಾಂಕ್ ಖಾತೆಗೆ ಸುಕೇಶ್ ನಿಂದ ಹಣ ಬಂದಿದೆ ಎಂದು ಇಡಿ ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿದೆ.
ಬಿಗ್ ಬಾಸ್ ಖ್ಯಾತಿಯ ನಿಕಿತಾ ತಾಂಬೋಲಿ ಹೇಳಿಕೆಯ ಪ್ರಕಾರ, ಪಿಂಕಿ ಇರಾನಿ ಆರೋಪಿ ಸುಕೇಶ್ ಚಂದ್ರಶೇಖರ್ ಅವರನ್ನು ‘ಶೇಖರ್’ ಎಂದು ಪರಿಚಯಿಸಿದ್ದರು. ಸುಕೇಶ್ ಚಂದ್ರಶೇಖರ್ ನನ್ನು ದಕ್ಷಿಣ ಭಾರತದ ನಿರ್ಮಾಪಕ ಮತ್ತು ಸ್ನೇಹಿತ ಪಿಂಕಿ ಇರಾನಿ ಎಂದು ಪರಿಚಯಿಸಿದ್ದ.
ಇದನ್ನೂ ಓದಿ:ಹಠಾತ್ ಹೃದಯ ಸ್ತಂಭನ: ಪಾಕಿಸ್ಥಾನದ ಮಾಜಿ ಅಂಪೈರ್ ಅಸದ್ ರವುಫ್ ನಿಧನ
“ಎರಡು ಸಂದರ್ಭಗಳಲ್ಲಿ ನಿಕಿತಾ ತಾಂಬೋಲಿ ಆರೋಪಿ ಸುಕೇಶ್ ಚಂದ್ರಶೇಖರ್ ನನ್ನು ಭೇಟಿಯಾಗಿದ್ದರು ಎಂದು ಬಹಿರಂಗವಾಗಿದೆ. 2018ರ ಏಪ್ರಿಲ್‌ನಲ್ಲಿ ನಡೆದ ಮೊದಲ ಭೇಟಿಯ ವೇಳೆ ಆರೋಪಿ ಪಿಂಕಿ ಇರಾನಿ ಸುಕೇಶ್ ಚಂದ್ರಶೇಖರ್ ಅವರಿಂದ 10 ಲಕ್ಷ ರೂಪಾಯಿ ನಗದು ಪಡೆದಿದ್ದು, ಅದರಲ್ಲಿ ನಿಕಿತಾ ತಾಂಬೋಲಿಗೆ 1.5 ಲಕ್ಷ ರೂ. ನೀಡಿದ್ದ. ಎರಡನೆ ಬಾರಿ, ಅಂದರೆ ಮೊದಲ ಭೇಟಿಯ ಎರಡು ಮೂರು ವಾರಗಳ ನಂತರ, ಅವಳು ಸುಕೇಶ್ ಚಂದ್ರಶೇಖರ್ ಅವರನ್ನು ಭೇಟಿಯಾಗಲು ಒಬ್ಬಂಟಿಯಾಗಿ ಹೋಗಿದ್ದಳು. ಅಲ್ಲಿ ಆಕೆಗೆ ಎರಡು ಲಕ್ಷ ರೂಪಾಯಿ ನಗದು ಮತ್ತು ಒಂದು ಗುಚ್ಚಿ ಬ್ಯಾಗನ್ನು ಆರೋಪಿ ಸುಕೇಶ್ ಚಂದ್ರಶೇಖರ್ ನೀಡಿದ್ದಾನೆ. ಎರಡು ಬಾರಿಯೂ ತಿಹಾರ್ ಜೈಲಿನಲ್ಲಿಯೇ ಈ ಭೇಟಿ ನಡೆದಿದೆ ಎಂದು ಇಡಿ ಆರೋಪಪಟ್ಟಿಯಲ್ಲಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.