ಪೊಲೀಸರು-ನಕ್ಸಲರ ನಡುವೆ ಗುಂಡಿನ ಕಾಳಗ: ಸಬ್ ಇನ್ಸ್ ಪೆಕ್ಟರ್ ಹುತಾತ್ಮ, 4 ನಕ್ಸಲರ ಹತ್ಯೆ
Team Udayavani, May 9, 2020, 8:51 AM IST
ಛತ್ತೀಸ್ ಗಢ: ಶುಕ್ರವಾರ ಪೊಲೀಸರು ಮತ್ತು ಮಾವೋವಾದಿಗಳ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುತಾತ್ಮರಾಗಿ , ನಾಲ್ವರು ನಕ್ಷಲರನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದ ಘಟನೆ ರಾಜ್ನಂದ್ ಗೌನ್ ಎಂಬ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಮನ್ ಪುರ್ ಪೊಲೀಸ್ ಠಾಣೆ ಸರಹದ್ದಿನ ಪರ್ದೊನಿ ಗ್ರಾಮದ ಸಮೀಪ ಈ ಎನ್ ಕೌಂಟರ್ ನಡೆದಿದೆ.
ನಾಲ್ವರು ನಕ್ಸಲೀಯರ ಶವಗಳು, 1 ಎಕೆ-47 ರೈಫಲ್, 1 ಎಸ್ ಎಲ್ ಆರ್ ಶಸ್ತ್ರಾಸ್ತ್ರ ಮತ್ತು ಎರಡು ಬೋರ್ ರೈಫಲ್ ಗಳನ್ನು ಎನ್ ಕೌಂಟರ್ ನಡೆದ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ನಂದ್ ಗೌನ್ ಎಎಸ್ಪಿ ಜಿ ಎನ್ ಬಗ್ಹೆಲ್ ತಿಳಿಸಿದ್ದಾರೆ.
ಜುಲೈ 12, 2009 ರಂದು ಇದೇ ಪ್ರದೇಶದಲ್ಲಿ ನಡೆದ ನಕ್ಷಲರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಪೊಲೀಸ್ ಅಧೀಕ್ಷಕ ವಿ.ಕೆ.ಚೌಬೆ ಸೇರಿದಂತೆ ಇಪ್ಪತ್ತೊಂಬತ್ತು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.