ನಾಲ್ಕು ತಿಂಗಳ ಶಿಶುವಿನ ಅತ್ಯಾಚಾರ, ಕೊಲೆ
Team Udayavani, Apr 23, 2018, 6:00 AM IST
ಜಮ್ಮು/ಇಂದೋರ್/ಕೋಲ್ಕತ್ತಾ: ದೇಶದ ಹಲವೆಡೆ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣಗಳು ಆಕ್ರೋಶಕ್ಕೆ ಕಾರಣವಾಗಿರುವ ನಡುವೆಯೇ, ಮಧ್ಯಪ್ರದೇಶದಲ್ಲಿ 4 ತಿಂಗಳ ಶಿಶುವನ್ನು ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ, ಹತ್ಯೆಗೈದಿದ್ದಾನೆ. ಆರೋಪಿಯನ್ನು ಇಂದೋರ್ನ ಕೋರ್ಟ್ಗೆ ಹಾಜರುಪಡಿಸುವ ವೇಳೆ ಆಕ್ರೋಶಭರಿತ ಜನರು ಆತನ ಮೇಲೆ ಹಲ್ಲೆ ನಡೆಸಿದ್ದು, ಕೂಡಲೇ ಪೊಲೀಸರು ಆತನನ್ನು ರಕ್ಷಿಸಿದ್ದಾರೆ. ಇದೇ ವೇಳೆ, ಆರೋಪಿ ನವೀನ್ ಗಾಡೆjಯನ್ನು 2 ದಿನ ಪೊಲೀಸ್ ವಶಕ್ಕೆ ನೀಡಲಾಗಿದೆ.
ಆರೋಪಿ ನವೀನ್ ಶಿಶುವಿನ ತಾಯಿಯ ಸಂಬಂಧಿಯಾಗಿದ್ದು, ಶುಕ್ರವಾರ ಅವರ ಮನೆಗೆ ಹೋಗಿ ಶಿಶುವನ್ನು ಅಪಹರಿಸಿದ್ದ. ಆತ ಮಗುವನ್ನು ಹೊತ್ತುಕೊಂಡು ಕಟ್ಟಡವೊಂದರ ನೆಲಮಾಳಿಗೆಗೆ ಹೋಗಿ, ಅತ್ಯಾಚಾರವೆಸಗಿ, ನಂತರ ಮಗುವನ್ನು ಅದೇ ಕಟ್ಟಡದ ಮೇಲಿಂದ ಬಿಸಾಕಿ ಕೊಂದು ಹಾಕಿದ್ದ. ಆತ ಶಿಶುವನ್ನು ಎತ್ತಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶಿಕ್ಷಕನಿಂದಲೇ ಹೀನಕೃತ್ಯ: ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯಲ್ಲಿ 4ನೇ ತರಗತಿಯ ಇಬ್ಬರು ಮಕ್ಕಳ ಮೇಲೆ ಶಾಲಾ ಶಿಕ್ಷಕನೇ ಅತ್ಯಾಚಾರ ಎಸಗಿದ್ದಾನೆ. ಶಾಲಾ ಕೊಠಡಿಯಲ್ಲೇ ಸತತ 4 ದಿನಗಳ ಕಾಲ ಅತ್ಯಾಚಾರ ಎಸಗಲಾಗಿದೆ. ಈ ಪೈಕಿ ಒಬ್ಬಳು ವಿದ್ಯಾರ್ಥಿಯು ಶಾಲೆಗೆ ಹೋಗುವುದಿಲ್ಲವೆಂದು ಹಠ ಮಾಡಿದಾಗ, ವಿಚಾರ ಬೆಳಕಿಗೆ ಬಂದಿದೆ. 35 ವರ್ಷದ ಶಿಕ್ಷಕ ತಲೆಮರೆಸಿಕೊಂಡಿದ್ದಾನೆ.
ರೇಪ್ ಆಗಿಲ್ಲ ಎನ್ನುವುದು ಸುಳ್ಳು: ಜಮ್ಮು ಕಾಶ್ಮೀರದ ಕಥುವಾದಲ್ಲಿ ಹತ್ಯೆಗೀಡಾದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆಗಿರಲಿಲ್ಲ ಎಂಬ ವರದಿಗಳು ಸುಳ್ಳು ಎಂದು ಜಮ್ಮು-ಕಾಶ್ಮೀರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.