ಬೆಂಕಿ ಅವಘಡ: ಬರ್ತ್‌ಡೇ ಹುಡುಗಿ ಸಹಿತ ಒಂದೇ ಕುಟುಂಬದ ನಾಲ್ವರ ಸಾವು
Team Udayavani, Jul 7, 2017, 4:51 PM IST
ಹೊಸದಿಲ್ಲಿ : ಇಲ್ಲಿನ ಸೀಮಾಪುರಿಯಲ್ಲಿ ನಾಲ್ಕು ಮಹಡಿಗಳ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಇಂದು ಶುಕ್ರವಾರ ನಸುಕಿನ 3 ಗಂಟೆಯ ವೇಳೆಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ, ಇಂದೇ ಹುಟ್ಟಹಬ್ಬ ಆಚರಿಸಲಿದ್ದ 12ರ ಹರೆಯದ ಬಾಲಕಿಯ ಸಹಿತ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ಮೃತರನ್ನು 12ರ ಹರೆಯದ ಹರ್‌ಷು, ಆಕೆಯ ತಂದೆ ಸಂಜಯ್ ವರ್ಮಾ 40, ಅಜ್ಜ ವಿಜಯ್ ವರ್ಮಾ 63, ಮತ್ತು ನಾಲ್ಕರ ಹರೆಯ ಸಹೋದರ ಚಿಕು ಎಂದು ಗುರುತಿಸಲಾಗಿದೆ. ಇವರೆಲ್ಲರೂ ತಮ್ಮ ಮನೆಯ ಹೊರಗೆ ಮಾಳಿಗೆ ಮೆಟ್ಟಲಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ನೂಟ್‌ನಿಂದ ಕಟ್ಟಡದ ಮೊದಲ ಅಂತಸ್ತಿನಲ್ಲಿ ಉಂಟಾದ ಬೆಂಕಿ ಕೂಡಲೇ ಇತರ ಮಹಡಿಗಳಿಗೂ ಹರಡಿತು. ಬೆಂಕಿ ಅಷ್ಟೇನೂ ದೊಡ್ಡದಾಗಿರಲಿಲ್ಲ; ವರ್ಮಾ ಕುಟುಂಬದವರು ತಮ್ಮ ಮನೆಯಿಂದ ಹೊರಗೆ ಬಾರದೇ ಬಾಲ್ಕನಿಯಲ್ಲೇ ಉಳಿದುಕೊಂಡಿದ್ದರೆ ಯಾರೂ ಸಾಯುತ್ತಿರಲಿಲ್ಲ ಎಂದು ಅಗ್ನಿಶಾಮಕ ದಳದವರು ಹೇಳಿದ್ದಾರೆ.
ಕಟ್ಟಡದಲ್ಲಿ ವಾಸವಾಗಿದ್ದವರಲ್ಲಿ ಹಲವರು ರೂಫ್ ಟಾಪ್ ಗೆ ಹೋಗಿ ಬಚಾವಾದರೆ ಇನ್ನು ಕೆಲವರು ತಮ್ಮ ತಮ್ಮ ಮನೆಯ ಬಾಲ್ಕನಿಯಲ್ಲೇ ಉಳಿದು ಬಚಾವಾದರು. ಈ ಕಟ್ಟಡದಲ್ಲಿ ಒಟ್ಟು 11 ಮನೆಗಳಿವೆ.
ಮೃತ ಬರ್ತ್‌ಡೇ ಹುಡುಗಿ ಹರ್‌ಷು ವಿನ ತಾಯಿ ಮೋನಾ 34 ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದನೇ ಮಹಡಿಯಿಂದ ಹಾರಿದ್ದ ಬಿನೇಶ್ ರತಿ 40 ಎಂಬಾಕೆಗೆ ಗಾಯಗಳಾಗಿದ್ದು ಆಕೆಯೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.