ಉಗ್ರ ನಂಟು: ಜಾಲಂಧರದಲ್ಲಿ 4 ವಿದ್ಯಾರ್ಥಿಗಳು arrest,ಶಸ್ತ್ರಾಸ್ತ ವಶ
Team Udayavani, Oct 10, 2018, 5:00 PM IST
ಹೊಸದಿಲ್ಲಿ : ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಕನಿಷ್ಠ ನಾಲ್ಕು ವಿದ್ಯಾರ್ಥಿಗಳನ್ನು ಪೊಲೀಸರು ಜಾಲಂಧರದಲ್ಲಿ ಬಂಧಿಸಿದ್ದಾರೆ.
ಬಂಧಿತ ವಿದ್ಯಾರ್ಥಿಗಳನ್ನು ಝಹೀದ್ ಗುಲ್‌ಜಾರ್, ಮೊಹಮ್ಮದ್ ಇದ್ರಿಸ್ ಶಾ, ನದೀಮ್ ಮತ್ತು ಯೂಸುಫ್ ರಫೀಕ್ ಭಟ್ ಎಂದು ಗುರುತಿಸಲಾಗಿದೆ.
ಪಂಜಾಬ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ನಡೆಸಿರುವ ಈ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಫೋಟಕಗಳನ್ನು ವಶಪಡಿಕೊಳ್ಳಲಾಗಿದೆ.
ಬಂಧಿತ ವಿದ್ಯಾರ್ಥಿಗಳಿಗೆ ಅನ್ಸಾರ್ ಗಝವತ್ ಉಲ್ ಹಿಂದ್ ಮತ್ತು ಜೈಶ್ ಎ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಗಳೊಂದಿಗೆ ನಂಟಿರುವುದು ಗೊತ್ತಾಗಿದೆ ಎಂದು “ದಿ ಕಾಶ್ಮೀರ್ ಮಾನಿಟರ್’ ವರದಿ ಮಾಡಿದೆ.
ಜಮ್ಮು ಕಾಶ್ಮೀರದ ಈ ಜಾಲದ ನಿರ್ವಾಹಕನನ್ನು ಕೂಡ ಬಂಧಿಸಿದ್ದು ಆತನನ್ನು ಈಗ ತೀವ್ರವಾಗಿ ಪ್ರಶ್ನಿಸಲಾಗುತ್ತಿದೆ.
ಜಮ್ಮು ಕಾಶ್ಮೀರ ಪೊಲೀಸರು ಟ್ವಿಟರ್‌ನಲ್ಲಿ ಈ ದಾಳಿ ಕಾರ್ಯಾಚರಣೆ, ಬಂಧನ ಇತ್ಯಾದಿಗಳನ್ನು ದೃಢೀಕರಿಸಿದ್ದಾರೆ.
ಪೊಲೀಸರ ಈ ಜಂಟಿ ದಾಳಿಯು ಇಂದು ಬುಧವಾರ ನಸುಕಿನ ವೇಲೆ ನಡೆದಿದ್ದು ಸುಮಾರು 90 ಪೊಲೀಸರು ಇದರಲ್ಲಿ ಭಾಗಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.