ಸೈಕ್ಲಿಂಗ್ ಗೆ ಮೊರೆಹೋದ ದೇಶದ 40ಕ್ಕೂ ಹೆಚ್ಚು ನಗರಗಳು..!
ಸೈಕ್ಲಿಂಗ್ ನಿಂದ ಭಾರತೀಯ ಆರ್ಥಿಕತೆಗೆ ವಾರ್ಷಿಕ 1.8 ಟ್ರಿಲಿಯನ್ ಲಾಭ..!
Team Udayavani, Jun 9, 2021, 7:17 PM IST
ನವ ದೆಹಲಿ : ದೇಶದಲ್ಲಿ ಸೈಕ್ಲಿಂಗ್ ಉತ್ತೇಜಿಸಲು 40 ಕ್ಕೂ ಹೆಚ್ಚು ನಗರಗಳು ಆಸಕ್ತಿಯನ್ನು ಹೊಂದಿವೆ ಎಂದು ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸ್ ಪೋರ್ಟೇಶನ್ ಆ್ಯಂಡ್ ಡೆವಲಪ್ ಮೆಂಟ್ ಪಾಲಿಸಿ (ಐಟಿಡಿಪಿ) ಹೇಳಿದೆ.
ಮಾರ್ಚ್ 2020 ರಿಂದ ಭಾರತದಲ್ಲಿ ಲಾಕ್ ಡೌನ್ ನಿರ್ಬಂಧಗಳಿದ್ದು, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಸೈಕ್ಲಿಂಗ್ ನಲ್ಲಿ ಉತ್ಸಾಹವನ್ನು ಹೆಚ್ಚಿಸಲು ಕಾರಣವಾಗಿದೆ. ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿದ್ದರಿಂದ, ಸೈಕ್ಲಿಂಗ್ ಕಡಿಮೆ ದೂರದ ಪ್ರಯಾಣಕ್ಕೆ ವೈಯಕ್ತಿಕ, ಕೋವಿಡ್-ಸುರಕ್ಷಿತ ಪರ್ಯಾಯವೆಂದು ಸಾಬೀತಾಗಿದೆ.
ಇದನ್ನೂ ಓದಿ : ಉನ್ನತ ಹುದ್ದೆಯಲ್ಲಿದ್ದರೂ ಬೇಸಾಯದಲ್ಲಿ ಸಕ್ರಿಯ: K.M.ನಟರಾಜ್ ಅವರ ಕೆಲಸಕ್ಕೆ ಭಾರಿ ಮೆಚ್ಚುಗೆ
ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ ಸೌಲಭ್ಯಗಳು ನಿಂತಿದ್ದ ಕಾರಣ ನಗರ ಪ್ರದೇಶಗಳಲ್ಲಿ ಕೆಲವು ಉದ್ಯಮ ಕ್ಷೇತ್ರಗಳು ಕಾರ್ಯ ನಿರ್ವಹಿಸುತ್ತಿದ್ದಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಸಾರ್ವಜನಿಕ ಸಾರಿಗೆಗಳಿಗೆ ಅವಲಂಬಿಸದೆ ಸೈಕ್ಲಿಂಗ್ ಮೂಲಕವೇ ಕಚೇರಿಗೆ ತಲುಪುತ್ತಿರುವುದನ್ನು ಕೂಡ ವರದಿ ತಿಳಿಸಿದೆ.
ದೇಶದಲ್ಲಿ ಲಾಕ್ ಡೌನ್ ಆದಾಗಿನಿಂದ ಈ ಸೈಕ್ಲಿಂಗ್ ಕ್ರಾಂತಿ ವಾಯುಮಾಲಿನ್ಯ ನಿಯಂತ್ರಣಕ್ಕೂ ಕೂಡ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿದ್ದು, ದೇಶದಾದ್ಯಂತ ಅಂದಾಜು, 60,000 ಮಂದಿ ಸೈಕ್ಲಿಂಗ್ ಮಾಡುವುರನ್ನು ಸೈಕ್ಲಿಂಗ್ ನನ್ನು ಅತ್ಯಂತ ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ.
ಪೋಸ್ಟ್ ಮ್ಯಾನ್ ಗಳು, ಮಹಿಳೆಯರು, ಮಕ್ಕಳು ಇತರರನ್ನು ಒಳಗೊಂಡು ಭಾರತೀಯ ನಗರಗಳನ್ನು ಸೈಕ್ಲಿಂಗ್ ಸ್ನೇಹಿಯನ್ನಾಗಿ ಮಾಡುವ ಪ್ರಯತ್ನಗಳು ನಾಗರಿಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಸಮೀಕ್ಷೆಯೊಂದನ್ನು ಮಾಡಲಾಯಿತು. ಭಾರತದಾದ್ಯಂತ ಸುಮಾರು 60,000 ಜನರನ್ನು ಸಮೀಕ್ಷೆ ಮಾಡಲಾಗಿದೆ.
ನಾಸಿಕ್, ಬೆಂಗಳೂರು ಮತ್ತು ನ್ಯೂ ಟೌನ್ ಕೋಲ್ಕತಾ ಪ್ರದೇಶಗಳಲ್ಲಿ ಮಧ್ಯಮ ವಯಸ್ಸಿನ ಮಹಿಳೆಯರನ್ನೊಳಗೊಂಡು ಸೈಕ್ಲಿಂಗ್ ನನ್ನು ಒಪ್ಪಿಕೊಂಡಿದ್ದು, ಇದು ಸುಕ್ಷಿತ ಹಾಗೂ ಕಡಿಮೆ ವೆಚ್ಚದಾಯಕ ಎಂದು ಅಭೀಪ್ರಾಯ ಪಟ್ಟಿರುವುದಾಗಿ ಸಮೀಕ್ಷಾ ವರದಿ ತಿಳಿಸಿದೆ.
ಬಾರ್ಸಿಲೋನಾ ಮತ್ತು ಲಂಡನ್ ಗಳಲ್ಲಿ ಸೈಕ್ಲಿಂಗ್ ಗೆ ಉತ್ತೇಜನ :
ದೇಶದಲ್ಲಿ ಕೆಲವು ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಸೈಕಲ್ ಗಳನ್ನು ನೀಡುವುದರ ಮೂಲಕ ಕೋವಿಡ್ ನಿಯಂತ್ರಣದ ಕಾಳಜಿಯನ್ನು ವಹಿಸಿವೆ. ಮಾತ್ರವಲ್ಲದೇ, ಬಾರ್ಸಿಲೋನಾ ಮತ್ತು ಲಂಡನ್ ಗಳಲ್ಲಿ, ವಾಯು ಮಾಲಿನ್ಯವನ್ನು ತಡೆಟ್ಟುವ ಉದ್ದೇಶದಿಂದ ಹಾಗೂ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಣ ಮಾಡಲು ಸೈಕ್ಲಿಂಗ್ ಗೆ ಹೆಚ್ಚು ಒತ್ತು ನೀಡುತ್ತಿರುವುದಾಗಿ ತಿಳಿಸಿದೆ.
ಕಡಿಮೆ ದೂರದ ಪ್ರಯಾಣಕ್ಕೆ ಸೈಕ್ಲಿಂಗ್ ಮಾಡುವುದರಿಂದ ಭಾರತೀಯ ಆರ್ಥಿಕತೆಗೆ ವಾರ್ಷಿಕ 1.8 ಟ್ರಿಲಿಯನ್ ಲಾಭವಾಗುತ್ತದೆ. ಮತ್ತು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ವಿಶ್ವಾಸಾರ್ಹ ಪರಿಹಾರವಾಗಿದೆ ಎಂದು ಸಹ ಸಮೀಕ್ಷೆ ವರದಿ ತಿಳಿಸಿದೆ.
ಇನ್ನು, 2020 ರಲ್ಲಿ, ಭಾರತದಲ್ಲಿ ಸೈಕಲ್ ಮಾರಾಟವು ಶೇಕಡಾ 20 ರಷ್ಟು ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವರದಿ ಹೇಳುತ್ತದೆ.
ಇದನ್ನೂ ಓದಿ : ವಾಟ್ಸಾಪ್ ಗೆ ಟಕ್ಕರ್ ನೀಡಲಿದೆಯೇ ಭಾರತ ಸರ್ಕಾರದ ‘ಸಂದೇಶ್’
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.