ಸುಪ್ರೀಂ ಕೋರ್ಟ್: 40 ಲಕ್ಷ ಪ್ರಕರಣಗಳು ಬಾಕಿ
Team Udayavani, Oct 2, 2019, 5:52 AM IST
ಮಣಿಪಾಲ: ದೇಶದ ಕಾನೂನು ವ್ಯವಸ್ಥೆ ಬಲಿಷ್ಠವಾಗಿದೆ ನಿಜ. ಅದರ ಜತೆಗೆ ಅಷ್ಟೇ ಆಮೆಗತಿಯಿಂದ ಕೂಡಿದೆ. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು ಹಾಗೂ ಕೆಳ ನ್ಯಾಯಾಲಯಗಳಲ್ಲಿ ಹಲವು ದಶಕಗಳ ಪ್ರಕರಣಗಳು ಬಾಕಿ ಇವೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೋಗೋಯಿ ಅವರು ದೇಶದ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಲು ಪ್ರಧಾನಿಗಳಿಗೆ ಮನವಿ ಮಾಡಿದ್ದರು.
30 ಲಕ್ಷ
2015ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಬರೋಬ್ಬರಿ 30.93 ಲಕ್ಷ ಪ್ರಕರಣಗಳು ಇತ್ಯರ್ಥವಾಗದೇ ಇದ್ದವು. 2015ರಿಂದ 2019ರ ಈ ವರ್ಷಗಳಲ್ಲಿ 3.8 ಶೇಕಡ ಪ್ರಕರಣಗಳು ಮಾತ್ರ ಇತ್ಯರ್ಥವಾಗಿದೆ. ಈಗ ಆ ಸಂಖ್ಯೆ 31 ಲಕ್ಷಕ್ಕೆ ಏರಿಕೆಯಾಗಿದೆ.
43 ಲಕ್ಷ
ದೇಶದ 25 ಹೈಕೋರ್ಟ್ ಗಳಲ್ಲಿ ಸುಮಾರು 43.55 ಲಕ್ಷ ಪ್ರಕರಣಗಳು ಬಾಕಿ ಇದೆ. 8 ಲಕ್ಷ ಪ್ರಕರಣಗಳು ಸುಮಾರು ದಶಕಗಳಷ್ಟು ಹಳೆಯದು. ಇವುಗಳಲ್ಲಿ 18.75 ಲಕ್ಷ ಪ್ರಕರಣಗಳು ಸಿವಿಲ್ ಹಾಗೂ 12.5 ಲಕ್ಷ ಪ್ರಕರಣಗಳು ಕ್ರಿಮಿನಲ್ ಆಗಿದೆ.
26 ಲಕ್ಷ
ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ 43.5 ಲಕ್ಷ ಪ್ರಕರಣಗಳಲ್ಲಿ 26.76 ಲಕ್ಷ ಪ್ರಕರಣಗಳು ಇತ್ತೀಚಿನ 5 ವರ್ಷಗಳಲ್ಲಿ ದಾಖಲಾದವುಗಳಾಗಿವೆ. 8.44 ಲಕ್ಷ ಪ್ರಕರಣಗಳು 5-10 ವರ್ಷಗಳ ಹಳೆಯದು. 8.35 ಪ್ರಕರಣಗಳು ದಶಕಗಳ ಹಳೆದಾಗಿವೆ.
37 ಶೇ. ಸ್ಥಾನ ಖಾಲಿ
ಹೈಕೋರ್ಟ್‌ಗಳಲ್ಲಿ 43.5 ಲಕ್ಷ ಪ್ರಕರಣಗಳು ಬಾಕಿ ಉಳಿಯಲು ಜಡ್ಜ್ಗಳ ಕೊರತೆಯೇ ಮುಖ್ಯ ಕಾರಣ ಎಂದು ತಿಳಿದು ಬಂದಿದೆ. ವಿವಿಧ ರಾಜ್ಯಗಳಲ್ಲಿ ಸುಮಾರು 350ರಷ್ಟು ಜಡ್ಜ್ ಹುದ್ದೆ ಖಾಲಿ ಇದೆ.
7.26 ಲಕ್ಷ
ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ವೊಂದರಲ್ಲೇ ಸುಮಾರು 7 ಲಕ್ಷದ 26 ಸಾವಿರ ಪ್ರಕರಣಗಳು ಇನ್ನಷ್ಟೇ ಕೊನೆಗಾಣಬೇಕಿದೆ. ಇದು ದೇಶದಲ್ಲಿ ಇತ್ಯರ್ಥವಾಗದೇ ಇರುವ ಪ್ರಕರಣಗಳನ್ನು ಹೊಂದಿದ ಮೊದಲ ರಾಜ್ಯವಾಗಿದೆ. 4.49 ಸಾವಿರ ಪ್ರಕರಣಗಳ ಮೂಲಕ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ.
ಸ್ಥಳೀಯ ಕೋರ್ಟ್ ಗಳಲ್ಲಿ 30 ಲಕ್ಷ
ದೇಶದ ವಿವಿಧ ಸ್ಥಳೀಯ ಕೋರ್ಟ್ ಗಳಲ್ಲಿ ಸುಮಾರು 30 ಲಕ್ಷ ಪ್ರಕರಣಗಳು ಇತ್ಯರ್ಥ ವಾದೇ ಉಳಿದು ಕೊಂಡಿದೆ. 20.5 ಲಕ್ಷ ಪ್ರಕರಣಗಳು 2015ರ ಬಳಿಕ ದಾಖಲಾಗಿದೆ. ಇದರಲ್ಲಿ 2 ಪ್ರಕರಣಗಳು 1951ರಂದು ಎಂದು ರಾಷ್ಟ್ರೀಯ ವಾಹಿನಿಯೊಂದು ವರದಿ ಮಾಡಿತ್ತು.
ವಾರ್ಷಿಕ 13 ಲಕ್ಷ ಪ್ರಕರಣ ಇತ್ಯರ್ಥ
ಸ್ಥಳೀಯ ಕೋರ್ಟ್‌ಗಳಲ್ಲಿ ಪ್ರತಿ ವರ್ಷ 13 ಲಕ್ಷ ಪ್ರಕರಣಗಳನ್ನು ಇತ್ಯರ್ಥಮಾಡಲಾಗುತ್ತದೆ. ಆದರೆ ತ್ಯರ್ಥಗೊಂಡ ಪ್ರಕರಣಗಳಷ್ಟೇ ಸಂಖ್ಯೆಯ ಹೊಸ ದೂರುಗಳು ದಾಖಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.