ಶೇ.40 ರಷ್ಟು ಭಾರತೀಯರ ಜೀವಿತಾವಧಿ 7 ವರ್ಷ ಕುಸಿತ
ವಾಯುಮಾಲಿನ್ಯದಿಂದಾಗಿ ಮನುಷ್ಯರ ಜೀವಕ್ಕೆ ಕುತ್ತು
Team Udayavani, Nov 1, 2019, 5:48 PM IST
ದೆಹಲಿಯ ಎನ್‌ಸಿಆರ್ ಪ್ರದೇಶ ಸೇರಿದಂತೆ ಭಾರತದ ಇತರ ರಾಜ್ಯಗಳಲ್ಲಿ ವಾಯು ಗುಣಮಟ್ಟ ಕುಸಿತ ಕಾಣುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಶೇ.40ರಷ್ಟು ಭಾರತೀಯರ ಸರಾಸರಿ ಜೀವಿತಾವಧಿ 7 ವರ್ಷ ಕಡಿಮೆಯಾಗುತ್ತದೆ ಎಂದು ವರದಿಯೊಂದು ಹೇಳಿದೆ.
ಜಾಗತಿಕ ಸಮಸ್ಯೆ
ಕುರಿತು ಚಿಕಾಗೊ ವಿಶ್ವವಿದ್ಯಾನಿಲಯ ಸಮೀಕ್ಷೆಯೊಂದನ್ನು ನಡೆಸಿದ್ದು, ವಾಯುಮಾಲಿನ್ಯ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದೆ.
ಕಳಪೆ ಗುಣಮಟ್ಟ
ಎನ್‌ಸಿಆರ್ ಪ್ರದೇಶದಲ್ಲಿ ಸತತವಾಗಿ ಮೂರನೇ ದಿನವೂ ವಾಯು ಗುಣಮಟ್ಟದ ಸೂಚ್ಯಂಕ ಕಳಪೆಯಾಗಿದ್ದು, ಗಾಳಿಯ ಗುಣಮಟ್ಟ 412 ಎಕ್ಯೂಐ ದಾಟಿದೆ. ಇದೇ ಪರಿಸ್ಥಿತಿ ಹರಿಯಾಣ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಕಂಡು ಬರುತ್ತಿದ್ದು, ನಾಸಾದ ಉಪಗ್ರಹ ಕಳೆದ ಎಂಟು ದಿಗಳಲ್ಲಿ ಆದ ಬದಲಾವಣೆಯ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.
ವಿಶ್ವದಲ್ಲಿ ಎರಡನೇ ಸ್ಥಾನ
ಅತೀ ಹೆಚ್ಚು ವಾಯುಮಾಲಿನ್ಯ ಉಂಟಾಗುವ ದೇಶಗಳ ಪೈಕಿ ಭಾರತವು ಸ್ಥಾನ ಪಡೆದುಕೊಂಡಿದ್ದು, 225 ದೇಶಗಳ ವಾಯು ಮಾಲಿನ್ಯ ಸೂಚ್ಯಂಕದಲ್ಲಿ ಭಾರತ 2ನೇ ದರ್ಜೆಯಲ್ಲಿದೆ.
ಸರಾಸರಿ ಜೀವಿತಾವಧಿಯಲ್ಲಿ ಇಳಿಕೆ
ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಶಕ್ತಿ ವಾಯು ಮಾಲಿನ್ಯಕ್ಕಿದ್ದು, ವರದಿಯ ಪ್ರಕಾರ ಇತರ ಯಾವುದೇ ಕಾಯಿಲೆ ಅಥವಾ ಕಾರಣಗಳಿಗಿಂತ ವಾಯು ಮಾಲಿನ್ಯವು ವೇಗವಾಗಿ ವ್ಯಕ್ತಿಯ ಸರಾಸರಿ ಜೀವಿತಾವಧಿಯನ್ನು ಕಡಿತಗೊಳಿಸುತ್ತದೆ.
ಶೇ.40 ರಷ್ಟು ಭಾರತೀಯರು ಬೇಗ ಸಾಯ್ತಾರೆ
ಭಾರತದ ಇಂಡೋ-ಗಂಗೆಟಿಕ್ ಪ್ಲೆ„ನ್ (ಐಜಿಪಿ) ಗ್ಯಾಸ್ ಚೇಂಬರ್ ಸಂಸ್ಥೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಭಾರತದ ಜನಸಂಖ್ಯೆಯ 40% ರಷ್ಟು ಬಾರತೀಯರು ಸರಾಸರಿ ಜೀವಿತಾವಧಿಗಿಂತ 7 ವರ್ಷ ಬೇಗನೆ ಸಾವನ್ನಪ್ಪುತ್ತಾರೆ ಎಂದು ಹೇಳಿದೆ.
ಟಾಪ್ 5 ವಾಯು ಮಾಲಿನ್ಯ ದೇಶಗಳು
ನೇಪಾಲ 55.16%
ಭಾರತ 54.18%
ಬಾಂಗ್ಲಾದೇಶ 53.23%
ಚೀನ 39.5
ಪಾಕಿಸ್ಥಾನ 37.01
ಟಾಪ್ 5 ವಾಯುಮಾಲಿನ್ಯ ರಾಜ್ಯಗಳು
ಹೊಸದಿಲ್ಲಿ
ಪಂಜಾಬ್
ಹರಿಯಾಣ
ಉತ್ತರಪ್ರದೇಶ
ಚಂಡೀಗಢ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.