ಇದು ಯೂಟ್ಯೂಬ್ ಗ್ರಾಮ! ಕಣ್ಣು ಹಾಯಿಸಿದಲ್ಲೆಲ್ಲ ಕಾಣಸಿಗುತ್ತಾರೆ ಕ್ರಿಯೇಟರ್‌ಗಳು
ಬೀದಿಬೀದಿಗಳಲ್ಲೂ ಶೂಟಿಂಗ್
Team Udayavani, Aug 31, 2022, 8:15 AM IST
ರಾಯ್ಪುರ: ಛತ್ತೀಸ್‌ಗಢದ ಈ ಊರಿಗೆ “ಯೂಟ್ಯೂಬ್ ಹಬ್’ ಎಂದೇ ಬಿರುದಿದೆ. ಇಲ್ಲಿ ಪ್ರತಿ ಬೀದಿಯಲ್ಲಿ ಕ್ರಿಯೇಟರ್‌ಗಳು ಸಿಗುತ್ತಾರೆ. ಪ್ರತಿದಿನ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ.
ರಾಯ್ಪುರ ಜಿಲ್ಲೆಯ ತುಸ್ಲಿ ಗ್ರಾಮ ಈ ರೀತಿ ಕ್ರಿಯೇಟರ್‌ಗಳನ್ನು ಸೃಷ್ಟಿಸಿರುವ ಗ್ರಾಮ. ಎಸ್‌ಬಿಐನಲ್ಲಿ ಇಂಟರ್‌ನೆಟ್ ಇಂಜಿನಿಯರ್ ಆಗಿದ್ದ ಜ್ಞಾನೇಂದ್ರ ಶುಕ್ಲಾ ಹಾಗೂ ಶಿಕ್ಷಕನಾಗಿದ್ದ ಜೈ ವರ್ಮಾ ಈ ಗ್ರಾಮದ ಮೊದಲ ಯೂಟ್ಯೂಬರ್‌ಗಳು.
ಇಬ್ಬರೂ 2011-12ರ ಸಮಯದಲ್ಲಿ ಕೆಲಸ ತ್ಯಜಿಸಿ ಯೂಟ್ಯೂಬ್ ಸೇರಿಕೊಂಡಿದ್ದಾರೆ. ಮೊದ ಮೊದಲಿಗೆ ಅವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವುದೆಂದರೆ ಮುಜುಗರವಾಗುತ್ತಿತ್ತಂತೆ. ಆದರೆ ಗ್ರಾಮದ ಯುವ ಜನತೆ ಅವರನ್ನು ಪ್ರೋತ್ಸಾಹಿಸಿದ ಹಿನ್ನೆಲೆ ಅವರು ಹಿಂಜರಿಕೆ ಬಿಟ್ಟು ಎಲ್ಲೆಡೆ ಚಿತ್ರೀಕರಣ ಮಾಡಲಾರಂಭಿಸಿದ್ದಾರೆ.
ಇವರಿಬ್ಬರ ಚಾನೆಲ್ ಪ್ರಸಿದ್ಧತೆ ಪಡೆದುಕೊಂಡಿದೆ. ಅದರಿಂದ ಸ್ಫೂರ್ತಿ ಪಡೆದ ಗ್ರಾಮದ ಉತ್ಸಾಹಿತ ಜನರೆಲ್ಲರೂ ತಮ್ಮದೇ ಆದ ಯೂಟ್ಯೂಬ್ ಚಾನೆಲ್‌ಗಳನ್ನು ತೆರೆದಿದ್ದಾರೆ. ಈ ಗ್ರಾಮದವರದ್ದು ಈಗ ಕನಿಷ್ಠ 40 ಯೂಟ್ಯೂಬ್ ಚಾನೆಲ್‌ಗಳಿವೆ. ಇರುವ 3000 ಜನರಲ್ಲಿ ಕನಿಷ್ಠ ಶೇ.40 ಮಂದಿ ಯೂಟ್ಯೂಬ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಮಹಿಳೆಯರಿಗೆ ಸ್ವಾತಂತ್ರ್ಯ:
ನಕ್ಸಲರ ಕಾಟವಿದ್ದಿದ್ದರಿಂದ ನಮ್ಮೂರಿನಲ್ಲಿ ಹೆಣ್ಣು ಮಕ್ಕಳಿಗೆ ಮನೆಯಿಂದ ಹೊರಗೆ ಬರುವುದಕ್ಕೆ ಅವಕಾಶವಿರಲಿಲ್ಲ. ಆದರೆ ಯೂಟ್ಯೂಬ್ ಚಾನೆಲ್‌ಗಳನ್ನು ಆರಂಭಿಸಿದಾಗಿನಿಂದ ನಾವೂ ಮನೆಯಿಂದ ಹೊರಗೆ ಸ್ವತಂತ್ರವಾಗಿ ಓಡಾಡುತ್ತಿದ್ದೇವೆ ಎನ್ನುತ್ತಾರೆ ಯುಟ್ಯೂಬ್ ಚಾನೆಲ್ ಮಾಡಿಕೊಂಡಿರುವ ತುಸ್ಲಿ ಗ್ರಾಮಸ್ಥೆ ಪಿಂಕು ಸಾಹು.
ಹೆಚ್ಚಿನ ಗಳಿಕೆ:
“ಎಂ.ಎಸ್ಸಿ ಪದವೀಧರನಾದ ನಾನು ಕಾಲೇಜೊಂದರಲ್ಲಿ ಪಾರ್ಟ್ ಟೈಮ್ ಪ್ರಾಧ್ಯಾಪಕನಾಗಿದ್ದೆ. ನನ್ನದೇ ಆದ ಕೋಚಿಂಗ್ ಸೆಂಟರ್ ತೆರೆದುಕೊಂಡಿದ್ದೆ. ಆದರೆ ಆಗ ನನಗೆ ಸಿಗುತ್ತಿದ್ದದ್ದು ಮಾಸಿಕ 12-15 ಸಾವಿರ ರೂ. ಮಾತ್ರ. ಆದರೆ ಈಗ ಯೂಟ್ಯೂಬ್‌ನಿಂದ ತಿಂಗಳಿಗೆ 30-40 ಸಾವಿರದವರೆಗೆ ದುಡಿಯುತ್ತಿದ್ದೇನೆ’ ಎನ್ನುವುದು ಯೂಟ್ಯೂಬರ್ ಜೈ ವರ್ಮಾ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.