ಅಪ್ಪ ಯಾರೆಂದು ತಿಳಿಯಲು ಮಗ ಒತ್ತಾಯ : ಅತ್ಯಾಚಾರವಾದ 27 ವರ್ಷಗಳ ನಂತ್ರ ಮಹಿಳೆ ದೂರು!
27 ವರ್ಷಗಳ ನಂತ್ರ ಮಹಿಳೆ ದೂರು ದಾಖಲಿಸಿದ ಅತ್ಯಾಚಾರ ಸಂತ್ರಸ್ತೆ
Team Udayavani, Mar 9, 2021, 1:40 PM IST
ಷಹಜಾನ್ ಪುರ : ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಯಲ್ಲಿ ಎಂತೆಂತಹ ಕೇಸ್ ಗಳು ದಾಖಲಾಗುತ್ತವೆ ಎಂಬುದನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಯಾಕಂದ್ರೆ 27 ವರ್ಷ ಹಿಂದೆ ನಡೆದಿದ್ದ ಅನ್ಯಾಯದ ವಿರುದ್ಧ ಮಹಿಳೆಯೊಬ್ಬಳು ಇತ್ತೀಚೆಗೆ ದೂರು ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಷಹಜಾನ್ ಪುರದಲ್ಲಿ ಮಹಿಳೆಯೊಬ್ಬರ ಮೇಲೆ 27 ವರ್ಷಗಳ ಹಿಂದೆ ಅತ್ಯಾಚಾರವಾಗಿದೆ. ಆಕೆಗೆ ಈಗ 40 ವರ್ಷವಾಗಿದ್ದು, ಆಕೆಯ ಮಗ ನನ್ನ ತಂದೆ ಯಾರು ಎಂಬ ಮಾಹಿತಿ ನನಗೆ ಗೊತ್ತಾಗ ಬೇಕು ಎಂದು ತಾಯಿಯ ಬಳಿ ಕೇಳಿದ್ದಾನೆ. ಈ ಕಾರಣದಿಂದ ಮಹಿಳೆಯು ತನ್ನ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳ ಮೇಲೆ ದೂರು ನೀಡಿದ್ದಾಳೆ.
ದೂರಿನಲ್ಲಿ ಮಹಿತಿ ನೀಡರುವ ಮಹಿಳೆ, ನಾನು 13 ವರ್ಷದವಳಿದ್ದಾಗ ನನ್ನ ಸಂಬಂಧಿಕ ಮನೆಯಲ್ಲಿ ಇದ್ದೆ. ಈ ವೇಳೆ ನನ್ನ ಮೇಲೆ ಅತ್ಯಾವಾರವಾಗಿತ್ತು. ಮರ್ಯಾದೆಗೆ ಹೆದರಿದ್ದ ನಾನು ಈ ವಿಚಾರವನ್ನು ಯಾರ ಬಳಿಯೂ ಹೇಳಿರಲಿಲ್ಲ. ಆದ್ರೆ ಈಗ ನನ್ನ ಮಗ ತನ್ನ ಅಪ್ಪನ ಬಗ್ಗೆ ಮಾಹಿತಿ ಕೇಳಿದ್ದು, ದೂರು ದಾಖಲಿಸಿದ್ದೇನೆ ಎಂದಿದ್ದಾರೆ.
ದೂರುದಾರ ಮಹಿಳೆ ಮನೆಯ ಹತ್ತಿರ ವಾಸವಿದ್ದ ನಾಕಿ ಹಸನ್ ಎಂಬಾತ ಆಕೆಯ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅತ್ಯಾಚಾರ ನಡೆಸಿರುವುದಾಗಿ ಮಹಿಳೆ ದೂರಿನಲ್ಲಿ ದಾಖಲಿಸಿದ್ದಾರೆ ಎಂದು ಎಸ್ ಪಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಇನ್ನು ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆದ ನಂತರ ಆಕೆಯ ಆರೋಗ್ಯದಲ್ಲಿ ಏರು ಪೇರಾಗಿದ್ದನ್ನು ಗಮನಿಸಿದ ಕುಟುಂಬದವರು ಆಕೆಯನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದಾರೆ. ಅಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಮಗುವನ್ನು ದತ್ತು ನೀಡಲಾಗಿತ್ತು ಎನ್ನಲಾಗಿದೆ.
ಅದಾದ ನಂತ್ರ ತಾಯಿ ಮತ್ತು ಮಗ ಜೊತೆಯಾಗಿದ್ದು, ಆ ಸಂದರ್ಭದಲ್ಲಿ ತನ್ನ ತಂದೆ ಯಾರು ಎಂದು ಮಗ ತನ್ನ ಅಮ್ಮನನ್ನು ಕೇಳಿದಾಗ ಕೇಸ್ ದಾಖಲಿಸಲು ನಿರ್ಧರಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.