Kerala; ಚೂರಲ್‌ವುಲ ಸೇತುವೆ ಕುಸಿತದಿಂದ 400 ಕುಟುಂಬಗಳಿಗೆ ಸಂಪರ್ಕ ಕಡಿತ!
Team Udayavani, Jul 31, 2024, 6:02 AM IST
ವಯನಾಡ್: ಮೆಪ್ಪಾಡಿ ಗುಡ್ಡಗಾಡು ಪ್ರದೇಶದಲ್ಲಿ ಸಂಭವಿಸಿದ ಭೂ ಕುಸಿತದ ಪರಿಣಾಮವಾಗಿ ಚೂರಲ್‌ವುಲ ಪಟ್ಟಣಕ್ಕೆ ಪಟ್ಟಣಕ್ಕೆ ಸಂಪರ್ಕ ಒದಗಿಸುತ್ತಿದ್ದ ಏಕೈಕ ಸೇತುವೆ ನಾಶಗೊಂಡಿದೆ. ಹೀಗಾಗಿ ಅಲ್ಲಿನ 400 ಕುಟುಂಬ ಪರದಾಡುವಂತಾಗಿದೆ. ಜತೆಗೆ ಚೂರಲ್‌ವುಲ, ಮುಂಡಕೈ, ಅಟ್ಟಮಲ, ನೂಲ್‌ಪುಳಗಳಿಗೆ ಸಂಪರ್ಕವೂ ಕಡಿತಗೊಂಡಿದೆ.
ಪ್ರವಾಹದ ಬಳಿಕ ಈ ಎಲ್ಲೆಲ್ಲಿಯೂ ಮಣ್ಣಿನ ರಾಶಿ, ಕಲ್ಲಿನ ರಾಶಿಗಳೇ ಕಾಣುತ್ತಿವೆ. ಈ ಮಣ್ಣಿನ ರಾಶಿಯಡಿ ಹಲವಾರು ಮನೆಗಳು ಸಿಲುಕಿಕೊಂಡಿವೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣ ಪಡೆಗಳು ಹರಸಾಹಸ ಪಡುತ್ತಿವೆ. ನೀರಿನ ಹರಿವು ಸಹ ಇದ್ದು, ಬೃಹತ್ ಬಂಡೆಗಳು, ಮರಗಳ ಸಹಾಯ ಪಡೆದು ಅವಶೇಷಗಳ ಬಳಿ ರಕ್ಷಣ ಪಡೆಗಳು ತೆರಳುತ್ತಿವೆ.
ತಾತ್ಕಾಲಿಕ ಸೇತುವೆ ನಿರ್ಮಾಣ: ಗ್ರಾಮಗಳಲ್ಲಿ ಸಿಲುಕಿಕೊಂಡಿರುವ ಜನರ ರಕ್ಷಣೆಗಾಗಿ ಎನ್‌ಡಿಆರ್‌ಎಫ್ ತಂಡ ತ್ವರಿತ ಕಾರ್ಯಾಚರಣೆ ನಡೆಸುತ್ತಿದೆ. ವೃದ್ಧರು ಮತ್ತಿತರ ತುರ್ತು ಸಂಪರ್ಕ ಬೇಕಾದವರಿಗಾಗಿ ತಾತ್ಕಾಲಿಕ ಲೋಹದ ಸೇತುವೆ ನಿರ್ಮಾಣ ಮಾಡಲಾಗಿದೆ.
ಅವರು ಕರೆದರೂ ಬರಲೇ ಇಲ್ಲ!
ವಯನಾಡು ಭೂ ಕುಸಿತವು ಹಲವು ಹೃದಯವಿದ್ರಾವಕ ಘಟನೆಗಳಿಗೆ ಸಾಕ್ಷಿಯಾಗಿವೆ. ಈ ಬಗ್ಗೆ ಭೂ ಕುಸಿತದಿಂದ ಕ್ಷಣಾರ್ಧದಲ್ಲಿ ಪಾರಾದ ದಂಪತಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ರಾತ್ರಿ 11 ಗಂಟೆಯ ಸುಮಾರಿಗೆ ಮಣ್ಣು ಮಿಶ್ರಿತ ನೀರು ಹರಿದುಬರುತ್ತಿರು ವುದನ್ನು ಗಮನಿಸಿದೆವು. ಅಪಾಯದ ಮುನ್ಸೂಚನೆಯನ್ನು ಅರಿತ ನಾವು ಎತ್ತರದ ಪ್ರದೇಶಕ್ಕೆ ತೆರಳಲು ನಿರ್ಧರಿಸಿ, ಪಕ್ಕದ ಮನೆಯವರಿಗೂ ಎಚ್ಚೆರಿಸಿದೆವು. ಇದನ್ನು ನಿರಾಕರಿಸಿದ ಅವರು ರಾತ್ರಿ 1 ಗಂಟೆಯ ಸುಮಾರಿಗೆ ಬರುವುದಾಗಿ ತಿಳಿದಿದರು. ಆದರೆ ಅವರು ಬರಲು ಸಾಧ್ಯವಾಗಲೇ ಇಲ್ಲ. ಬೆಳಿಗ್ಗೆ ಊರಿಗೆ ಮರಳಿದಾಗ ಎಲ್ಲವೂ ನಾಶವಾಗಿತ್ತು ಎಂದು ವೃದ್ಧ ದಂಪತಿ ಕಣ್ಣೀರಾದರು.
ಎಲ್ಲೆಲ್ಲೂ ಹೂಳು, ಕಲ್ಲುಗಳ ರಾಶಿ
ಚೂರಲ್‌ವುಲ, ಮುಂಡಕೈ, ಅಟ್ಟಮಲ, ನೂಲ್‌ಪುಳ ಎಂಬ ಗ್ರಾಮಗಳ ವ್ಯಾಪ್ತಿಯಲ್ಲಿ ಈಗ ಎಲ್ಲೆಲ್ಲೂ ಹೂಳು ತುಂಬಿದ ಪ್ರದೇಶಗಳೇ ಕಾಣುತ್ತಿವೆ. ಎಲ್ಲೆಂದರಲ್ಲಿ ಉರುಳಿ ಬಿದ್ದ ವಾಹನಗಳು, ಮರಗಳು ದುರಂತದ ಕತೆಯನ್ನು ಹೇಳುತ್ತವೆ.
ಮಗು ಜತೆ ತಾಯಿ ನಾಪತ್ತೆ
ಮತ್ತೂಬ್ಬ ಮಹಿಳೆ ಭೂಕುಸಿತದ ಭೀಕರತೆಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿರು. “ನನ್ನ ಸಂಬಂಧಿಯೊಬ್ಬರು ರಾತ್ರಿ ಕರೆ ಮಾಡಿ ಮಗುವಿನೊಂದಿಗೆ ಬೇರೆ ಸ್ಥಳಕ್ಕೆ ಹೋಗುತ್ತಿದ್ದೇವೆ” ಎಂದು ಹೇಳಿದರು. ಆದರೆ, ಸ್ವಲ್ಪ ಹೊತ್ತು ಬಳಿಕ ಅವರು ನಾಪತ್ತೆಯಾ ದರು. ಫೋನ್ ಕರೆ ಹೋಗುವುದು ನಿಂತಿತು ಎಂದು ಮಹಿಳೆ ಹೇಳಿದರು. ಆ ಕುಟುಂಬವನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ.
ಕೊಚ್ಚಿ ಹೋದ 200 ಮನೆಗಳು
ಚೂರಲ್‌ವುಲ ಗ್ರಾಮದ ಸುಮಾರು 200 ಮನೆಗಳು ಕೊಚ್ಚಿ ಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುಂಡಕೈನಲ್ಲಿ ಈಗಲೂ ಅಲ್ಲಲ್ಲಿ ಸಣ್ಣಪುಟ್ಟ ಭೂಕುಸಿತಗಳು ಸಂಭವಿಸುತ್ತಿವೆ!
ನೂರಾರು ಜನರು ಕಣ್ಮರೆ
ಮುಂಡಕೈನಲ್ಲಿ ಸಂಭವಿಸಿದ ಭೀಕರ ಭೂ ಕುಸಿತಕ್ಕೆ ಪುನಿಚಿರಿಮಟ್ಟಂನಲ್ಲಿ ನೂರಾರು ಜನರು ಕಣ್ಮರೆಯಾಗಿದ್ದಾರೆ. ಈಗಲೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ ಎಂದು ರೆಸಾರ್ಟ್ ಒಂದರ ಉದ್ಯೋಗಿಯೊಬ್ಬರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.