![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Dec 11, 2022, 2:51 PM IST
ಬಿಹಾರ: ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಕಣ್ಣು – ಕಣ್ಣಿನ ನಡವಿನ ಭಾವ ಪ್ರೇಮ ಬಂಧಕ್ಕೆ ಕಾರಣವಾಗಬಹುದು. ಈ ಮಾತಿಗೆ ಇತ್ತೀಚೆಗಿನ ಉದಾಹರಣೆ ಶಿಕ್ಷಕರ ಹಾಗೂ ವಿದ್ಯಾರ್ಥಿನಿ ನಡುವಿನ ಪ್ರೇಮ ಕಥೆ.
22 ವಯಸ್ಸಿನ ವಿದ್ಯಾರ್ಥಿನಿ 42 ವರ್ಷದ ಶಿಕ್ಷಕನ ಜೊತೆ ಸಪ್ತಪದಿ ತುಳಿದಿರುವ ಘಟನೆ ಬಿಹಾರದ ಸಮಸ್ತಿಪುರದಲ್ಲಿ ಗುರುವಾರ (ಡಿ.8 ರಂದು) ನಡೆದಿದೆ.
ಕಾಲೇಜುವೊಂದರಲ್ಲಿ ಶಿಕ್ಷಕನಾಗಿರುವ ಮಾತುಕನಾಥ್ ಕೋಚಿಂಗ್ ಸೆಂಟರ್ ನಲ್ಲಿ ಇಂಗ್ಲಿಷ್ ಪಠ್ಯವನ್ನು ಹೇಳಿ ಕೊಡುತ್ತಿದ್ದರು. ಇವರ ಕೋಚಿಂಗ್ ಸೆಂಟರ್ ಗೆ ಅನೇಕ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಬರುತ್ತಿದ್ದರು. ಇದರಲ್ಲಿ ಜೂಲಿ ಎನ್ನುವ ವಿದ್ಯಾರ್ಥಿನಿಯೊಂದಿಗೆ ಮಾತುಕನಾಥ್ ಆತ್ಮೀಯವಾಗಿ ಇರುತ್ತಿದ್ದರು.
ದಿನ ಕಳೆದಂತೆ ಇಬ್ಬರು ನಡುವಿನ ಆತ್ಮೀಯತೆ ತುಸು ಹೆಚ್ಚೇ ಆಯಿತು. ಇಬ್ಬರು ಪರಸ್ಪರ ಮಾತುಕತೆ ನಡೆಸಿ ನಂಬರ್ ಗಳನ್ನು ಬದಲಾಯಿಸಿಕೊಂಡಿದ್ದರು. ಶಿಕ್ಷಕ ಮಾತುಕನಾಥ್ ಅವರ ಪತ್ನಿ ಹಲವು ವರ್ಷಗಳ ಹಿಂದೆ ತೀರಿ ಹೋಗಿದ್ದು, ಇದನ್ನು ವಿದ್ಯಾರ್ಥಿನಿಯ ಬಳಿಯೂ ಶಿಕ್ಷಕ ಹೇಳಿಕೊಂಡು, ಮದುವೆ ಪ್ರಸ್ತಾಪವನ್ನು ಮಾಡಿದ್ದರು.
ಗುರುವಾರದಂದು ದೇವಸ್ಥಾನದಲ್ಲಿ 42 ವರ್ಷದ ಶಿಕ್ಷಕ, 22 ವರ್ಷದ ತನ್ನ ವಿದ್ಯಾರ್ಥಿನಿಯನ್ನು ಬಾಳ ಸಂಗಾತಿಯನ್ನಾಗಿ ಆಯ್ದುಕೊಂಡು ವಿವಾಹವಾಗಿದ್ದಾರೆ. ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕೋಚಿಂಗ್ ಸೆಂಟರ್ ನ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಿಕ್ಷಕ – ವಿದ್ಯಾರ್ಥನಿಯ ವಿವಾಹ ಜರುಗಿದೆ. ಇಬ್ಬರು ಪ್ರಣಯ ಪಕ್ಷಿಗಳಂತೆ ಸುತ್ತಾಟ ನಡೆಸಿದ್ದು ಊರಿನಲ್ಲಿ ವೈರಲ್ ಆಗಿತ್ತು. ಮಾತುಕನಾಥನ್ ಅವರನ್ನು ಕೆಲವರನ್ನು ಲವ್ ಗುರು ಎಂದು ಕರೆಯುತ್ತಿದ್ದರು.
न उम्र की सीमा हो! बिहार के समस्तीपुर में 42 साल के टीचर को 20 साल की स्टूडेंट से प्रेम हो गया..दोनों ने राजी खुशी विवाह रचाया..वीडियो खूब वायरल हो रहा..लोग मटुकनाथ और जूली की प्रेम गाथा को याद कर रहे..वीडियो-श्री राजपूत..Edited By- @Sinhamegha8 pic.twitter.com/dVp0KfoJGW
— Prakash Kumar (@kumarprakash4u) December 10, 2022
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.