48 ಬೆಸ್ಟ್ ಬಸ್ಸುಗಳಿಗೆ ಹಾನಿ, 150 ಪ್ರತಿಭಟನಕಾರರು ವಶಕ್ಕೆ
Team Udayavani, Jan 3, 2018, 3:21 PM IST
ಮುಂಬಯಿ : ಮುಂಬಯಿಯಯಲ್ಲಿಂದು ಬುಧವಾರ ನಡೆದಿರುವ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ 48 ಬೆಸ್ಟ್ ಬಸ್ಸುಗಳು ಹಾನಿಗೊಂಡಿವೆ; ನಾಲ್ಕು ಡ್ರೈವರ್ಗಳು ಗಾಯಗೊಂಡಿದ್ದಾರೆ; 150 ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪುಣೆಯ ಕೋರೇಗಾಂವ್ -ಭೀಮಾ ಹಿಂಸೆಯ ವಿರುದ್ಧ ಮಹಾರಾಷ್ಟ್ರದ ಆದ್ಯಂತ ದಲಿತ ಸಂಘಟನೆಗಳು ನೀಡಿದ ಬಂದ್ ಕರೆಯಲ್ಲಿ ಭುಗಿಲೆದ್ದ ಹಿಂಸೆ, ಸಾರ್ವಜನಿಕ ಸೊತ್ತು ನಾಶ, ನಷ್ಟದಿಂದ ಮುಂಬಯಿ ಸಾಮಾನ್ಯ ಜೀವನ ತೀವ್ರವಾಗಿ ಬಾಧಿತವಾಗಿದೆ.
ಕೋರೇಗಾಂವ್ – ಭೀಮಾ ಹಿಂಸೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಅಧಿಕಾರಿಗಳು ಉಳಿದ ಎ/ಸಿ ಲೋಕಲ್ ಸೇವೆಗಳನ್ನು ಅಮಾನತುಗೊಳಿಸಿದರು.
ಎಲ್ಫಿನ್ಸ್ಟನ್ ರೋಡ್, ಗೋರೇಗಾಂವ್, ದಾದರ್, ಮಲಾಡ್ ಮತ್ತು ಇತರ ಕಡೆಗಳಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಕಾರಣ ಇತರ ಹೊರವಲಯದ ಸೇವೆಗಳನ್ನು ಬಿಟ್ಟು ಬಿಟ್ಟು ಕೈಗೊಳ್ಳಲಾಗುತ್ತಿದೆ. ಆದರೆ ದೂರದ ಪ್ರದೇಶಗಳಿಗೆ ಹೋಗುವ ರೈಲುಗಳನ್ನು ರದ್ದು ಪಡಿಸಲಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಪರಿಸ್ಥಿತಿ ಹೀಗಿದ್ದರೂ ಮೇಲಾ ಜಂಕ್ಷನ್, ವೋರ್ಲಿಯಲ್ಲಿ ವಾಹನ ದಟ್ಟನೆಯನ್ನು ತಿಳಿಗೊಳಿಸಲಾಗಿದೆ. ಸೀ ಲಿಂಕ್ ಕಡೆಗೆ ಸುಗಮ ವಾಹನ ಸಂಚಾರವಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಾಜಿ ಅಲಿಯಿಂದ ವಾಹನ ಸಂಚಾರವನ್ನು ಮಹಾಲಕ್ಷ್ಮೀ/ಸೇನಾಪತಿ ಬಾಪಟ್ ಮಾರ್ಗವಾಗಿ ತಾತ್ಕಾಲಿಕವಾಗಿ ತಿರುಗಿಸಲಾಗಿದೆ.
ಔರಂಗಾಬಾದ್ನಲ್ಲಿ ಪ್ರತಿಭಟನಕಾರರು ವಾಹನಗಳ ಮೇಲೆ ಕಲ್ಲೆಸೆದು ಹಿಂಸೆಯಲ್ಲಿ ತೊಡಗಿಕೊಂಡ ಕಾರಣ ಅಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ವೆಸ್ಟರ್ನ್ ಎಕ್ಸ್ಪ್ರೆಸ್ ಹೈವೇಯಲ್ಲಿನ ಅಂಧೇರಿಯಲ್ಲಿ ಇಂದು ಬೆಳಗ್ಗೆ ರಾಸ್ತಾ ರೋಕೋ ನಡೆಸಲಾಗಿತ್ತು. ಹಾಗಿದ್ದರೂ ಅನಂತರ ದಹೀಸರ್ ನಾಕಾ ಮತ್ತು ಆರೇ ಜಂಕ್ಷನ್ನಲ್ಲಿ ವಾಹನ ದಟ್ಟನೆಯನ್ನು ತಿಳಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.