ಅತ್ಯಾಚಾರ ಮುಚ್ಚಿಹಾಕಲು ʼಸರಪಂಚ್ʼ ನಿರ್ಣಯ; ರಾತ್ರಿಯಿಡೀ ಕಾಡಿನಲ್ಲಿ ಅಲೆದಾಡಿದ ಸಂತ್ರಸ್ತೆ
Team Udayavani, Oct 13, 2020, 3:52 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಗುಮ್ಲಾ: ಇಲ್ಲಿ ತಡರಾತ್ರಿ ನಡೆದ ಘಟನೆಯೊಂದು ದೇಶವನ್ನು ಮತ್ತೆ ಆಘಾತಕ್ಕೆ ತಳ್ಳಿದೆ. ಜಾರ್ಖಂಡ್‌ನ ಗುಮ್ಲಾದಲ್ಲಿ 5 ಬಾಲಕರು 5 ನೇ ತರಗತಿಯ ಬಾಲಕಿಯೊಂದಿಗೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ದುರ್ಘಟನೆಯಿಂದ ಗಾಯಗೊಂಡ ಸಂತ್ರಸ್ತೆ ರಾತ್ರಿಯಿಡೀ ಕಾಡಿನಲ್ಲಿ ಅಲೆದಾಡಿದ್ದಾಳೆ. ಆರೋಪಿಗಳು ಬಾಲಕಿಯನ್ನು ಮನೆಯಿಂದ ಅಪಹರಿಸಿ ಶನಿವಾರ ನಡೆದ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ ಮತ್ತು ರವಿವಾರ ಈ ಕೃತ್ಯವನ್ನು ಮುಚ್ಚಿಡಲು ಪ್ರಯತ್ನಿಸಲಾಗಿದೆ.
ಆದರೆ ಸಂತ್ರಸ್ತೆಯ ಸಹೋದರ ಇಬ್ಬರು ಆರೋಪಿಗಳ ಮೇಲೆ ಹಲ್ಲೆ ನಡೆಸಿದ ಬಳಿಕ ಈ ಘಟನೆ ಬಹಿರಂಗಗೊಂಡಿದೆ ಎಂದು ಹೇಳಲಾಗುತ್ತಿದೆ. ಆರೋಪಿಗಳ ಕೈ ಕಾಲುಗಳನ್ನು ಕತ್ತರಿಸಲು ಸಂತ್ರಸ್ತೆಯ ಸಹೋದರ ಪ್ರಯತ್ನಿಸಿದ್ದಾನೆ. ಗಾಯಗೊಂಡ ಆರೋಪಿಗಳಿಬ್ಬರೂ ಆಸ್ಪತ್ರೆಗೆ ದಾಖಲಾದಾಗ ಈ ಘಟನೆ ಬಹಿರಂಗವಾಗಿದೆ. ಸದ್ಯ ಪೊಲೀಸರು ಘಟನೆ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆಯ ಬಗ್ಗೆ ಗ್ರಾಮದಲ್ಲಿ ಪಂಚಾಯತ್ ನಡೆದಿದ್ದು ಪ್ರಕರಣ ದಾಖಲಿಸದಂತೆ ಆರೋಪಿ ಸಂತ್ರಸ್ತೆಯ ಕುಟುಂಬಕ್ಕೆ ಒತ್ತಡ ಹೇರಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬಾಲಕಿಯನ್ನು ಕೊಂದು ಮನೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದರೂ ಎಂಬ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿದೆ. ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿ, ಆಕೆ ಮತ್ತು ಸಹೋದರನಿಗೂ ವಿಷಯವನ್ನು ಬಹಿರಂಗಗೊಳಿಸಿದಂತೆ ಬೆದರಿಕೆ ಮತ್ತು ಹಲ್ಲೆ ನಡೆಸಲಾಗಿದೆ. ಬಳಿಕ ಅರೋಪಿಗಳು ಓಡಿಹೋದರು ಎನ್ನಲಾಗಿದೆ.
ಮೆನೆಗ ಬಂದು ದಾಳಿ ನಡೆದ ಬಳಿ ಸಂತ್ರಸ್ತೆಯ ಸಹೋದರ ಆರೋಪಿಗಳಿಬ್ಬರನ್ನೂ ಹುಡುಕಿಕೊಂಡು ಹೋಗಿ ಹಲ್ಲೆ ನಡೆಸಿದ್ದಾನೆ ಎಂದು ಎಸ್‌ಡಿಪಿಒ ಕುಲ್ದೀಪ್ ಕುಮಾರ್ ಹೇಳಿದ್ದಾರೆ. ಎರಡೂ ಆರೋಪಿಗಳ ಕೈ ಕಾಲುಗಳನ್ನು ಕತ್ತರಿಸಲು ಸಹೋದರ ಪ್ರಯತ್ನಿಸಿದ್ದಾನೆ. ಘಟನೆಯ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸೋಮವಾರ ರಾತ್ರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇತರ ಇಬ್ಬರು ಆರೋಪಿಗಳನ್ನು ಮಂಗಳವಾರ ಬೆಳಗ್ಗೆ ಬಂಧಿಸಲಾಗಿದೆ. ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಗುಮ್ಲಾ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತೆಯ ಗಾಯಗೊಂಡ ಸಹೋದರ ಮತ್ತು ಇಬ್ಬರು ಆರೋಪಿಗಳನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಐವರು ಆರೋಪಿಗಳು ನನ್ನ ಸ್ನೇಹಿತರು ಎಂದು 14 ವರ್ಷದ ಸಂತ್ರಸ್ತೆ ಹೇಳಿದ್ದಾರೆ
ಹುಡುಗಿ ರಾತ್ರಿಯಿಡೀ ಕಾಡಿನಲ್ಲಿ ಅಲೆದಾಡುತ್ತಿದ್ದಳು
ಐದು ಆರೋಪಿಗಳು ಹುಡುಗಿಯನ್ನು ಕಾಡಿಗೆ ಕರೆದೊಯ್ದಿದ್ದರು.ರಾತ್ರಿ 10ರ ವರೆಗೆ ಅವಳನ್ನು ಅತ್ಯಾಚಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬಳಿಕ ಅವಳನ್ನು ಕಾಡಿನಲ್ಲೇ ಬಿಟ್ಟು ಆರೋಪಿಗಳು ಮನೆಗೆ ವಾಪಾಸಾಗಿದ್ದಾರೆ.ಸಂತ್ರಸ್ತೆ ರಾತ್ರಿಯಿಡೀ ಅಲೆದಾಡಿದ್ದು, ಮಗಳಿಗಾಗಿ ಮನೆಯವರು ಹುಡುಕಾಡುತ್ತಿದ್ದರು. ರವಿವಾರ ಮನೆಗೆ ತಲುಪಿ ತಾಯಿ ಮತ್ತು ಸಹೋದರನಿಗೆ ಘಟನೆ ಬಗ್ಗೆ ಸಂತ್ರಸ್ತೆ ಮಾಹಿತಿ ನೀಡಿದ್ದಾರೆ. ಆದರೆ ಕುಟುಂಬವು ಈ ಘಟನೆಯನ್ನು ಯಾರೊಂದಿಗೂ ಹಂಚಿಕೊಂಡಿಲ್ಲ. ಆದರೆ ಸೋಮವಾರ ಬೆಳಗ್ಗೆ ಗ್ರಾಮದಲ್ಲಿ ಪಂಚಾಯತ್ ಕರೆದು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗಿದೆ. ಆದರೆ ಗ್ರಾಮಸ್ಥರು ಸಂತ್ರಸ್ತೆಯ ಪರವಾಗಿ ನಿಂತು ನ್ಯಾಯಕ್ಕಾಗಿ ಹೋರಾಡಲು ಬೆಂಬಲ ನೀಡಿದ ಬಳಿಕ ಕುಟುಂಬ ಮುಂದಡಿಯಿಟ್ಟಿದೆ.
ಪಂಚಾಯತ್ ಮುಗಿದ ಬಳಿಕ ಮನಗೆ ಬಂದ ಆರೋಪಿಗಳು
ಇಬ್ಬರು ಆರೋಪಿಗಳು ಮನೆಗೆ ಬಂದು ಪ್ರಕರಣ ದಾಖಲಿಸದಂತೆ ಒತ್ತಡ ಹೇರಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಇಡೀ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ. ಇದೇ ಸಂದರ್ಭ ಇಬ್ಬರು ಆರೋಪಿಗಳು ಸಂತ್ರಸ್ತೆಯ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಗಾಯಗೊಂಡ ಸಹೋದರ ಆರೋಪಿ ಇಬ್ಬರನ್ನೂ ಆಯುಧದಿಂದ ಕೈ ಕಾಲುಗಳನ್ನು ಕತ್ತರಿಸಲು ಪ್ರಯತ್ನಿಸಿದ್ದ. ಈ ವೇಳೆ ಗಲಾಟೆ ಹೆಚ್ಚಾದ ಪರಿಣಾಮ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ʼದೈನಿಕ್ ಬಾಸ್ಕರ್ʼ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.