ಎನ್‌ಜಿಒ ಕಾರ್ಯಕರ್ತೆಯರ ಮೇಲೆ ಗುಂಪು ಅತ್ಯಾಚಾರ
Team Udayavani, Jun 23, 2018, 6:00 AM IST
ರಾಂಚಿ: ವಲಸೆ ಹಾಗೂ ಮಾನವ ಕಳ್ಳಸಾಗಣೆ ಕುರಿತು ಜನಜಾಗೃತಿ ಮೂಡಿಸಲೆಂದು ತೆರಳಿದ್ದ ಸರ್ಕಾರೇತರ ಸಂಸ್ಥೆಯೊಂದರ ಐವರು ಕಾರ್ಯಕರ್ತೆಯರ ಮೇಲೆ ದುಷ್ಕರ್ಮಿಗಳ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಶುಕ್ರವಾರ ನಡೆದಿದೆ.
ಜಾರ್ಖಂಡ್‌ನ ಚೊಚಾಂಗ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 8 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಜಿಒಗೆ ಸೇರಿದ್ದ 11 ಮಂದಿ ಮಹಿಳೆಯರ ತಂಡವು ಈ ಗ್ರಾಮದಲ್ಲಿ ಮಾನವ ಕಳ್ಳಸಾಗಣೆ ಕುರಿತು ಬೀದಿನಾಟಕ ಮಾಡುತ್ತಿತ್ತು.
ಅಷ್ಟರಲ್ಲಿ ಅಲ್ಲಿಗೆ ಬಂದ ದುಷ್ಕರ್ಮಿಗಳು, ಗನ್ ತೋರಿಸಿ ಮಹಿಳೆಯರನ್ನು ಸಮೀಪದ ಅರಣ್ಯಕ್ಕೆ ಹೊತ್ತೂಯ್ದು, ಅವರ ಮೇಲೆ ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ಅಲ್ಲದೆ, ಈ ಕೃತ್ಯದ ವಿಡಿಯೋವನ್ನು ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅಶ್ವಿನಿ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗವು ಘಟನೆ ಕುರಿತು ತನಿಖೆ ನಡೆಸಿ ವರದಿ ನೀಡಲು ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಜತೆಗೆ, ಈ ಕುರಿತು ಸೂಕ್ತ ತನಿಖೆ ನಡೆಸಿ, ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಜಾರ್ಖಂಡ್ ಡಿಜಿಪಿಗೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Universities; ದೇಶದಲ್ಲಿನ 21 ನಕಲಿ ವಿವಿಗಳ ಬಗ್ಗೆ ಜಾಗೃತಿ ಮೂಡಿಸಿ: ಕೇಂದ್ರ
Begging-free ಇಂದೋರ್ ಗುರಿ: ಜ.1ರಿಂದ ಭಿಕ್ಷೆ ಕೊಟ್ಟರೆ ಶಿಕ್ಷೆ!
Pakistan ಶರಣಾದ ಚಿತ್ರ ಸೇನಾ ಕಚೇರಿಯಿಂದ ತೆರವು: ಕಾಂಗ್ರೆಸ್ ಕಿಡಿ
Farmers; ಬಟೋಂಗೆ ತೋ ಲುಟೋಂಗೆ: ಒಗ್ಗಟ್ಟಿಗೆ ಟಿಕಾಯತ್ ಕರೆ
T.M.Krishna ಅವರನ್ನು ಸುಬ್ಬುಲಕ್ಷ್ಮೀ ಪ್ರಶಸ್ತಿ ಪುರಸ್ಕೃತ ಎಂದು ಕರೆಯಬಾರದು: ಸುಪ್ರೀಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.