5 ರೂ. ಕೊಟ್ರೆ ಮೋದಿ ಭೇಟಿ!
Team Udayavani, Nov 30, 2018, 11:42 AM IST
ಹೊಸದಿಲ್ಲಿ: ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಹಾಗೂ ಹೊಸ ಹೊಸ ಅಪ್ಲಿಕೇಶನ್‌ಗಳಲ್ಲಿ ರೆಫರಲ್ ಕೋಡ್ ಬಳಸಿದರೆ ನೂರಾರು ರೂಪಾಯಿ ರಿಯಾಯಿತಿ ಸಿಗುತ್ತದೆ. ಆದರೆ ಇದೇ ಥರದ ಒಂದು ರೆಫರಲ್ ಕೋಡ್ ಬಳಸಿ ನೀವು ಪ್ರಧಾನಿ ನರೇಂದ್ರ ಮೋದಿಯನ್ನೂ ಭೇಟಿ ಮಾಡಬಹುದು ಎಂದರೆ ನಂಬುತ್ತೀರಾ?
ಪ್ರಧಾನಿ ಮೋದಿ ಅಪ್ಲಿಕೇಶನ್ ನಮೋದಲ್ಲಿ ಒಂದು ಹೊಸ ಫೀಚರ್ ಅನ್ನು ಇತ್ತೀಚೆಗಷ್ಟೇ ಪರಿಚಯಿಸಲಾಗಿದೆ. ಇದರಲ್ಲಿ ಸಣ್ಣ ಮೊತ್ತದ ಡೊನೇಶನ್ ಮಾಡಬಹುದು. ಅಂದರೆ 5 ರೂ. ನಿಂದ 1 ಸಾವಿರ ರೂ.ವರೆಗೆ ಎಷ್ಟಾದರೂ ಪಾವತಿ ಮಾಡಿದರೆ ಒಂದು ಲಿಂಕ್ ಲಭ್ಯವಾಗುತ್ತದೆ. ಈ ಹಣ ಬಿಜೆಪಿ ಖಾತೆಗೆ ಸೇರುತ್ತದೆ. ಈ ಲಿಂಕ್ ಪಡೆದು ಇಮೇಲ್, ಎಸ್‌ಎಂಎಸ್ ಅಥವಾ ವಾಟ್ಸ್‌ಆ್ಯಪ್ ಮೂಲಕ ಸ್ನೇಹಿತರಿಗೆ ಅಥವಾ ಪರಿಚಿತರಿಗೆ ಕಳುಹಿಸಬಹುದು. ನೂರು ಜನರು ಈ ಕೋಡ್ ಬಳಸಿ ಬಿಜೆಪಿಗೆ ಹಣ ಕಳುಹಿಸಿದರೆ, ಆ ಲಿಂಕ್ ಕಳುಹಿಸಿದ ವ್ಯಕ್ತಿ ಮೋದಿ ಭೇಟಿ ಮಾಡಲು ಅವಕಾಶ ಪಡೆಯುತ್ತಾರೆ!
ಅಷ್ಟೇ ಅಲ್ಲ, ಕನಿಷ್ಠ 10 ಜನರನ್ನು ರೆಫರ್ ಮಾಡಿದರೆ ಮೋದಿ ಹೆಸರಿನ ಟಿ ಶರ್ಟ್, ಕಾಫಿ ಮಗ್ ಥರದ ಸಾಮಗ್ರಿಗಳನ್ನು ಪಡೆಯಬಹುದು. ಪಕ್ಷ ಹಾಗೂ ಮೋದಿ ಜೊತೆಗೆ ಜನರ ಸಂವಹನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲಾಗಿದೆ. ಸಣ್ಣ ಪ್ರಮಾಣದ ದೇಣಿಗೆ ನೀಡುವ ಅವಕಾಶವನ್ನು ಹಲವು ದಿನಗಳ ಹಿಂದೆಯೇ ಪರಿಚಯಿಸಲಾಗಿದೆ. ಸರಾಸರಿ ಒಬ್ಬ ವ್ಯಕ್ತಿಯು 300-400 ರೂ. ದೇಣಿಗೆ ನೀಡುತ್ತಾರೆ ಎಂಬುದು ಈವರೆಗಿನ ದತ್ತಾಂಶದಿಂದ ತಿಳಿದು ಬಂದಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.