ಬಿಜೆಪಿಗೆ ವರವಾಗಿ, ಎಸ್ಪಿಗೆ ಮುಳುವಾಗಿದ್ದೇನು?
Team Udayavani, Mar 10, 2017, 3:45 AM IST
ನವದೆಹಲಿ: ರಾಜಕೀಯ ತಂತ್ರಗಾರಿಕೆ, ಕಾಲೆಳೆಯುವ ಮಾತುಗಳು, ಪರಸ್ಪರ ವಾಗ್ಯುದ್ಧ, ಘಟಾನುಘಟಿಗಳ ರೋಡ್‌ಶೋ, ರ್ಯಾಲಿಗಳನ್ನು ಕಂಡ ಪಂಚರಾಜ್ಯಗಳ ಚುನಾವಣಾ ಫಲಿತಾಂಶವು ಶನಿವಾರ ಪ್ರಕಟವಾಗಲಿದೆ.
ಎಲ್ಲಕ್ಕಿಂತಲೂ ಮುಖ್ಯವಾಗಿ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶವನ್ನು ಹೇಗಾದರೂ ಮಾಡಿ ಬುಟ್ಟಿಗೆ ಹಾಕಿಕೊಳ್ಳಬೇಕು ಎಂಬ ಗುರಿ ಇಟ್ಟುಕೊಂಡು ಪ್ರಧಾನಿ ಮೋದಿ ಸೇರಿದಂತೆ ಅವರ ಸಂಪುಟದ ಬಹುತೇಕ ಸದಸ್ಯರು ಉತ್ತರಪ್ರದೇಶದಲ್ಲಿ ಠಿಕಾಣಿ ಹೂಡಿದ್ದರು. ಅದರ ಫಲವೆಂಬಂತೆ, ಬಿಜೆಪಿಯು ಅಭೂತಪೂರ್ವ ಜಯ ಸಾಧಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ. ಬಿಜೆಪಿ ಇಲ್ಲಿ ಸ್ಪಷ್ಟ ಬಹುಮತ ಖಚಿತ ಎಂದು ಕೆಲವು ಸಮೀಕ್ಷೆಗಳು ಹೇಳಿದರೆ, ಇನ್ನು ಕೆಲವು ಅತಂತ್ರ ವಿಧಾನಸಭೆಯ ಭವಿಷ್ಯವನ್ನೂ ನುಡಿದಿವೆ.
ಉತ್ತರಪ್ರದೇಶದ ಮೊದಲ ಹಂತದ ಮತದಾನದ ವೇಳೆ ಸಿಎಂ ಅಖೀಲೇಶ್ ಪರವೇ ಗಾಳಿ ಬೀಸಿತ್ತು. ತಂದೆ ಮುಲಾಯಂ ಸಿಂಗ್ ಯಾದವ್ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್‌ರನ್ನು ಎದುರುಹಾಕಿಕೊಂಡಿದ್ದು, ಸೈಕಲ್ ಚಿಹ್ನೆಗಾಗಿ ನಡೆದ ಹೋರಾಟ ಎಲ್ಲವೂ ಅಖೀಲೇಶ್ ಪರ ಮತದಾರರು ಮೃದುಧೋರಣೆ ತಾಳುವಂತೆ ಮಾಡಿತ್ತು. ಆದರೆ, ಯಾವಾಗ ಅವರು ಕಾಂಗ್ರೆಸ್‌ನೊಂದಿಗೆ ಮೈತ್ರಿ ಘೋಷಿಸಿದರೋ, ಅಖೀಲೇಶ್‌ಗೆ ಅದು ದೊಡ್ಡ ಪೆಟ್ಟು ನೀಡಿತು ಎನ್ನುವುದು ರಾಜಕೀಯ ತಜ್ಞರ ವಿಶ್ಲೇಷಣೆ.
ಬಿಜೆಪಿಯ ವಿಚಾರಕ್ಕೆ ಬಂದರೆ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಾಡಿದ ಟಿಕೆಟ್ ಹಂಚಿಕೆಯು ಸ್ಥಳೀಯ ನಾಯಕರ ಟೀಕೆಗೆ ಗುರಿಯಾಗಿತ್ತು. ಆದರೆ, ಆ್ಯಕ್ಸಿಸ್- ಮೈ ಇಂಡಿಯಾ ಸಮೀಕ್ಷೆಯು ನಿಜವೇ ಆದರೆ, ಮತ್ತೆ ಅಮಿತ್ ಶಾ ಅವರ ಕಾರ್ಯತಂತ್ರ ಸಫಲವಾಯಿತು ಎಂದೇ ಅರ್ಥ. ದೆಹಲಿ ಮತ್ತು ಬಿಹಾರ ಚುನಾವಣೆಯ ಬಳಿಕ ತಾನು ನಿಪುಣ ಕಾರ್ಯತಂತ್ರಗಾರ ಎಂಬುದನ್ನು ಸಾಬೀತುಪಡಿಸಬೇಕಿದ್ದರೆ ಅಮಿತ್ ಶಾಗೆ ಈ ಗೆಲುವು ಅನಿವಾರ್ಯವೂ ಆಗಿತ್ತು. ಇದಲ್ಲದೆ, ರಾಜ್ಯದಲ್ಲಿ ಬಿಜೆಪಿ ಜಯಗಳಿಸಿದರೆ, ಅದಕ್ಕೆ ಮತ್ತೂಂದು ಕಾರಣವೆಂದರೆ, ಯಾದವೇತರ ಒಬಿಸಿಗಳ ಬೆಂಬಲ. ಎಸ್ಪಿ ಸರ್ಕಾರದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದೇವೆ ಎಂದು ಆರೋಪಿಸಿದ್ದ ಇವರು, ಸಾಮೂಹಿಕವಾಗಿ ಬಿಜೆಪಿಯತ್ತ ಹೊರಳಿದ್ದರು.
ಇದಲ್ಲದೆ, ಆ್ಯಕ್ಸಿಸ್ ಸಮೀಕ್ಷೆ ಹೇಳುವ ಪ್ರಕಾರ, ಬಿಜೆಪಿಯು ಶೇ.57ರಷ್ಟು ಕುರ್ಮಿ ಮತಗಳನ್ನು, ಶೇ.63ರಷ್ಟು ಲೋಧ್, ಶೇ.60ರಷ್ಟು ಯಾದವೇತರ ಒಬಿಸಿ ಮತಗಳನ್ನು ಗಳಿಸಿದೆ. ಕಳೆದ ಚುನಾವಣೆಯಲ್ಲಿ ಇವರ ಮತಗಳೆಲ್ಲ ಎಸ್ಪಿಯ ಪಾಲಾಗಿತ್ತು.
ಉತ್ತರಪ್ರದೇಶ ಯಾರ ಪಾಲಿಗೆ?: 403 ಸದಸ್ಯಬಲದ ಉತ್ತರಪ್ರದೇಶದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಮೂರು ಸಮೀಕ್ಷೆಗಳು ಹೇಳಿವೆ. ಆದರೆ, ಬಿಜೆಪಿಯು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿಯು 185, ಎಸ್ಪಿ-ಕಾಂಗ್ರೆಸ್ 120 ಸೀಟುಗಳನ್ನು ಗಳಿಸಲಿವೆ ಎಂದು ಇಂಡಿಯಾ ನ್ಯೂಸ್ ಹೇಳಿದರೆ, ಟೈಮ್ಸ್ ನೌ ಬಿಜೆಪಿಗೆ 190ರಿಂದ 120, ಎಸ್ಪಿ-ಕಾಂಗ್ರೆಸ್ ಮೈತ್ರಿಗೆ 110-130 ಸ್ಥಾನಗಳು ಸಿಗಲಿವೆ ಎಂದು ಹೇಳಿದೆ. ಎಬಿಪಿ ಸಮೀಕ್ಷೆಯ ಪ್ರಕಾರ, ಬಿಜೆಪಿ 164-176, ಕಾಂಗ್ರೆಸ್-ಎಸ್ಪಿ 156-169 ಪಡೆಯಲಿವೆ. ಇನ್ನು ಇಂಡಿಯಾ ಟಿವಿ ಬಿಜೆಪಿಗೆ 155-167 ಮತ್ತು ಎಸ್ಪಿ-ಕಾಂಗ್ರೆಸ್‌ಗೆ 135-147 ಸ್ಥಾನಗಳು ಲಭ್ಯವಾಗುವುದಾಗಿ ಹೇಳಿವೆ.
ಪಂಜಾಬ್‌ನಲ್ಲಿ ಬಿಗ್ ಫೈಟ್ : ಪಂಜಾಬ್ ವಿಚಾರಕ್ಕೆ ಬಂದಾಗ ವಿವಿಧ ಚಾನೆಲ್‌ಗಳು ವಿಭಿನ್ನ ಫಲಿತಾಂಶವನ್ನು ನೀಡಿವೆ. ಇಂಡಿಯಾ ಟುಡೇ-ಆ್ಯಕ್ಸಿಸ್ ಸಮೀಕ್ಷೆಯು 62-71 ಸ್ಥಾನಗಳಿಂದ ಕಾಂಗ್ರೆಸ್ ಮುನ್ನಡೆಯಲ್ಲಿದೆ ಎಂದರೆ, ಇಂಡಿಯಾ ಟಿವಿ ಸಮೀಕ್ಷೆಯು 59-67 ಸ್ಥಾನಗಳನ್ನು ಗಳಿಸಿ ಆಪ್ ಅಧಿಕಾರಕ್ಕೇರಲಿದೆ ಎಂದಿದೆ. ಇದೇ ವೇಳೆ, ಇಂಡಿಯಾ ನ್ಯೂಸ್ ಕಾಂಗ್ರೆಸ್ ಮತ್ತು ಆಪ್ ತಲಾ 54 ಸ್ಥಾನಗಳನ್ನು ಗಳಿಸಿ, ಸಮಬಲ ಸಾಧಿಸಲಿವೆ ಎಂದಿದೆ. ಇನ್ನು ಇಲ್ಲಿನ ಆಡಳಿತಾರೂಢ ಬಿಜೆಪಿ-ಅಕಾಲಿದಳ ಮೈತ್ರಿಕೂಟ ಹೇಳಹೆಸರಿಲ್ಲದಂತೆ ಧೂಳೀಪಟವಾಗಿದೆ.
ಉತ್ತರಾಖಂಡ, ಮಣಿಪುರ, ಗೋವಾ ಬಿಜೆಪಿಗೆ: 70 ಸದಸ್ಯಬಲದ ಉತ್ತರಾಖಂಡದಲ್ಲಿ ಬಿಜೆಪಿ ಐತಿಹಾಸಿಕ ಜಯ ಗಳಿಸಲಿದೆ ಎಂದು ಮೂರು ಸಮೀಕ್ಷೆಗಳು ಹೇಳಿವೆ. ವಿಶೇಷವೆಂದರೆ, ಒಂದು ಸಮೀಕ್ಷೆ ಮಾತ್ರ ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಟೈ ಆಗಲಿದೆ ಎಂದು ಹೇಳಿದೆ. ಇದೇ ವೇಳೆ, ಗೋವಾದಲ್ಲಿ ಬಿಜೆಪಿಯೇ ಮುನ್ನಡೆಯಲ್ಲಿದೆ ಎಂದು ಮೂರು ಸಮೀಕ್ಷೆಗಳು ತಿಳಿಸಿವೆ. ಮಣಿಪುರದಲ್ಲಿ ಕೂಡ ಓಕ್ರಾಂ ಇಬೋಬಿ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ, ಅಧಿಕಾರಕ್ಕೇರುವಲ್ಲಿ ಬಿಜೆಪಿ ಸಫಲವಾಗುವುದು ಬಹುತೇಕ ಖಚಿತ ಎಂದಿವೆ ಸಮೀಕ್ಷೆಗಳು.
ಸಮೀಕ್ಷೆಗಳು
ನಿಜವಾಗಿದ್ದವೇ?
ಫಲಿತಾಂಶಕ್ಕೂ ಮುನ್ನವೇ ಪ್ರಕಟವಾಗುವ ಮತಗಟ್ಟೆ ಸಮೀಕ್ಷೆಗಳು ಜನರ ಕುತೂಹಲವನ್ನು ತಣಿಸುವುದೇನೋ ನಿಜ. ಆದರೆ, ಅವುಗಳು ಪಕ್ಕಾ ಆಗಿರುತ್ತದೆಯೇ ಅಥವಾ ಸಮೀಕ್ಷೆಗೆ ಹೊರತಾದ ಫಲಿತಾಂಶ ಬಂದಿದ್ದಿದೆಯೇ? ಕಳೆದ ವರ್ಷ ಚುನಾವಣೆಯನ್ನು ಕಂಡ 5 ರಾಜ್ಯಗಳನ್ನು ಉದಾಹರಣೆಯಾಗಿಟ್ಟುಕೊಂಡು ನೋಡೋಣ. ಅಸ್ಸಾಂ, ಕೇರಳ, ಪುದುಚೇರಿ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗಳು ನಡೆದಿದ್ದವು. ಈ ಪೈಕಿ ಮೊದಲ 4 ರಾಜ್ಯಗಳ ಸಮೀಕ್ಷೆಗಳು ಬಹುತೇಕ ವಾಸ್ತವಕ್ಕೆ ಹತ್ತಿರವಿದ್ದವು. ಆದರೆ, ತಮಿಳುನಾಡಿನ ವಿಚಾರದಲ್ಲಿ ಸಮೀಕ್ಷೆ ಸುಳ್ಳಾದವು. ಆಡಳಿತ ವಿರೋಧಿ ಅಲೆಯು ಜಯಾ ಸರ್ಕಾರವನ್ನು ಉರುಳಿಸಿ, ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಬಹುದು ಎಂದೇ ಎಲ್ಲ ಸಮೀಕ್ಷೆಗಳೂ ನುಡಿದಿದ್ದವು. ಆದರೆ, ಜಯಲಲಿತಾರ ಎಐಎಡಿಎಂಕೆ 136 ಸೀಟುಗಳಲ್ಲಿ ಗೆದ್ದು, ಅಧಿಕಾರಕ್ಕೆ ಬಂದಿತು.
ಸೋಲೊಪ್ಪಿಕೊಂಡರೇ ಅಖೀಲೇಶ್?
ಸಮೀಕ್ಷೆಗಳು ಪ್ರಕಟವಾಗುತ್ತಿದ್ದಂತೆಯೇ ಉತ್ತರಪ್ರದೇಶ ಸಿಎಂ ಅಖೀಲೇಶ್ ಅವರು ಮಹಾಮೈತ್ರಿಯ ಮಾತುಗಳನ್ನಾಡಿದ್ದು, ಇದು ಅವರು ಸೋಲೊಪ್ಪಿಕೊಂಡರೇ ಎಂಬ ಪ್ರಶ್ನೆಯನ್ನು ಮೂಡಿಸಿದೆ. ಬಿಬಿಸಿ ಹಿಂದಿ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಅಖೀಲೇಶ್, “”ಸ್ಪಷ್ಟ ಬಹುಮತ ಗಳಿಸುತ್ತೇವೆಂಬ ವಿಶ್ವಾಸವಿದೆ. ಒಂದು ವೇಳೆ, ಅತಂತ್ರ ಪರಿಸ್ಥಿತಿ ಎದುರಾಗಿ ರಾಷ್ಟ್ರಪತಿ ಆಳ್ವಿಕೆ ಹೇರುವಂತಾದರೆ, ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧ. ಬಿಜೆಪಿಯು ರಿಮೋಟ್ ಕಂಟ್ರೋಲ್ ಮೂಲಕ ರಾಜ್ಯವನ್ನು ಆಳಲು ಬಿಡುವುದಿಲ್ಲ. ಅದಕ್ಕಾಗಿ ಏನನ್ನು ಬೇಕಾದರೂ ಮಾಡುತ್ತೇನೆ,” ಎಂದಿದ್ದಾರೆ.
ಪಂಜಾಬ್‌ನಲ್ಲಿ ಗೆಲ್ಲುವ ಭರವಸೆಯಿದೆ. ಉತ್ತರಾಖಂಡದಲ್ಲಿ ಹೆಗಲೆಣೆಯ ಪೈಪೋಟಿಯಿದ್ದರೂ ಅಧಿಕಾರ ಉಳಿಸಿಕೊಳ್ಳು ತ್ತೇವೆ. ಉತ್ತರಪ್ರದೇಶದಲ್ಲೂ ಗೆಲವು ಖಚಿತ.
– ಆರ್ ಪಿ ಎನ್ ಸಿಂಗ್, ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.