ಪಾಕ್ ನಿಂದ ಬಂದು ಕಳೆಯಿತು ಐದು ವರ್ಷ, ಇನ್ನಾದರೂ ಈಕೆಗೆ ತಾಯಿ ಯಾರೆಂದು ತಿಳಿಯುವುದೆ..?


Team Udayavani, Mar 11, 2021, 6:19 PM IST

5 Years After Her Rescue From Pak, Indian Woman May Have Found Her Family

ಮಹಾರಾಷ್ಟ್ರ : 2015 ರಲ್ಲಿ ಪಾಕಿಸ್ಥಾನದಿಂದ ಮರಳಿ ಬಂದಿದ್ದ ಬಾರತೀಯ ಮೂಲದ ಗೀತಾ(29) ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ ಎಂದು ಎನ್ ಜಿ ಒ ಹೇಳಿದೆ. ಗೀತಾ ತನ್ನ 9ನೇ ವಯಸ್ಸಿನಲ್ಲಿದ್ದಾಗ ನಾಪತ್ತೆಯಾಗಿ ಪಾಕಿಸ್ಥಾನವನ್ನು ಸೇರಿದ್ದರು.

ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಮಧ್ಯಪ್ರವೇಶದಿಂದ ಗೀತಾ ಅಕ್ಟೋಬರ್ 26, 2015 ರಲ್ಲಿ ಭಾರತಕ್ಕೆ ಬರಲು ಸಾಧ್ಯವಾಯಿತು. ಮನೆಯವರ ಸಂಪರ್ಕಿಸಲು ಸಾಧ್ಯವಾಗಿಲ್ಲದ ಕಾರಣದಿಂದ ಇಂದೋರ್ ಮೂಲದ ಎನ್ ಜಿ ಒ ಗೆ ಗೀತಾಳನ್ನು ಸೇರಿಸಲಾಗಿತ್ತು.

ಓದಿ : ನಟನನ್ನು ನೋಡಲು ನದಿಗೆ ಹಾರಿದ ಅಭಿಮಾನಿ…ವಿಡಿಯೋ ವೈರಲ್  

ಪಹಲ್ ಎನ್ನುವ ಶ್ರವಣ ಮತ್ತು ಮಾತಿನ ದುರ್ಬಲವುಳ್ಳವರ ವಿಶೇಷ ಎನ್ ಜಿ ಒ ಸಹಾಯದಿಂದ ಐದು ವರ್ಷಗಳ ನಿರಂತರವಾದ ಪ್ರಯತ್ನದ ಫಲವಾಗಿ ಮಹಾರಾಷ್ಟ್ರದ ಪರ್ಭಾನಿಯಲ್ಲಿ ಗೀತಾಳ ಕುಟುಂಬವನ್ನು ಹುಡುಕಲು ಸಾಧ್ಯವಾಗಿದೆ.

ಗೀತಾಳನ್ನು ಈಗ ಆನಂದ ಸರ್ವೀಸ್ ಸೋಸೈಟಿ ಎಂಬ ಎನ್ ಜಿ ಒ ಗೆ ಜುಲೈ 20, 2020 ರಲ್ಲಿ ಹಸ್ತಾಂತರಿಸಲಾಗಿದೆ ಎಂದು ಡಾ. ಆನಂದ್ ಸೆಲ್ಗಾಂವ್ಕರ್ ಸುದ್ದಿ ಸಂಸ್ಥೆ ಪಿ ಟಿ ಐ ಗೆ ತಿಳಿಸಿದ್ದಾರೆ.

ಐದು ವರ್ಷಗಳ ನಿರಂತರವಾಗಿ ಹುಡುಕಾಟದಲ್ಲಿ ಬಿಹಾರ್, ಉತ್ತರ ಪ್ರದೇಶ್, ತೆಲಂಗಾಣ, ರಾಜಸ್ಥಾನಗಳಲ್ಲಿ ಸುಮಾರು 10 ರಿಂದ 12 ಕುಟುಂಬಗಳು ಗೀತಾ ನಮ್ಮ ರಕ್ತ ಸಂಬಂಧಿ ಎಂದು ಹೇಳಿಕೊಂಡ ನಂತರ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಕೂಡ ಮಾಡಲಾಗಿತ್ತು.

ಆನಂದ ಸರ್ವಿಸ್ ಸೊಸೈಟಿ, ಮಗಳು ಕಳೆದುಕೊಂಡಿದ್ದ ಫರ್ಭಾನಿ ಜಿಲ್ಲೆಯ ಜಿಂತೂರ್ ಬಳಿರುವ ಮೀನಾ ವಾಗ್ಮೊರೆ(71) ಅವರಲ್ಲಿ ವಿಚಾರಿಸಿದಾಗ, ತಮ್ಮ ಮಗಳು ರಾಧಾ(ಗೀತಾ)ಳ ಹೊಟ್ಟೆಯಲ್ಲಿ ಸುಟ್ಟ ಗಾಯದ ಕಲೆಯಿದೆ ಎಂದು ಹೇಳಿದ್ದರು. ಅದನ್ನು ಪರಿಶೀಲಿಸಿದಾಗ ಹೊಟ್ಟೆಯಲ್ಲಿ ಸುಟ್ಟ ಗಾಯದ ಕಲೆ ಇರುವುದು ಕಂಡು ಬಂದಿದೆ ಎಂದು ಆನಂದ ಸರ್ವಿಸ್ ಸೊಸೈಟಿಯ ಮುಖ್ಯಸ್ಥ ಜ್ಞಾನೇಂದ್ರ ಪುರೋಹಿತ್ ಮಾಹಿತಿ ನೀಡಿದ್ದಾರೆ.

ಗೀತಾ ಪರ್ಭಾನಿಯನ್ನು ತಲುಪಿ ಸಚ್‌ ಖಂಡ್ ಎಕ್ಸ್‌ಪ್ರೆಸ್‌ನಲ್ಲಿ ಅಮೃತಸರಕ್ಕೆ ಹತ್ತಿದ ನಂತರ ದೆಹಲಿ-ಲಾಹೋರ್ ಸಂಜೌತಾ ಎಕ್ಸ್‌ಪ್ರೆಸ್‌ಗೆ ಹತ್ತಿದ ಸಾಧ್ಯತೆ ಇದೆ ಎಂದು ಸೆಲ್ಗಾಂವ್ಕರ್ ಹೇಳಿದ್ದಾರೆ.

ಗೀತಾಳನ್ನು ಹಲವು ವರ್ಷಗಳ ನಂತರ ಮೊದಲ ಬಾರಿಗೆ ನೊಡಿದಾಗ ಮೀನಾ ಅವರ ಕಣ್ತುಂಬಿತ್ತು. ಮೀನಾ ಅವರು ವ್ಯಕ್ತ ಪಡಿಸಿದ ಮಾತುಗಳನ್ನು ಗೀತಾ ಅರ್ಥೈಸಿಕೊಳ್ಳಲು ವಿಫಲಳಾದಳು. ಗೀತಾಳಿಗೆ ಮೂಕ ಭಾಷೆಯಲ್ಲಿ(ಸೈನ್ ಲ್ಯಾಂಗ್ವೇಜ್) ಮಾತ್ರ ಸಂವಹನ ಮಾಡಬಲ್ಲಳು ಎಂದು ಪುರೋಹಿತ್ ಹೇಳಿದ್ದಾರೆ.  ಗೀತಾ, ಪಹನ್ ಎನ್ ಜಿ ಒ ಅಲ್ಲಿ ಮೂಕ ಭಾಷೆಯನ್ನು ಕಲಿತುಕೊಂಡಿದ್ದಾಳೆ.

ಗೀತಾ ಈಗ ಪರ್ಭಾನಿಯಲ್ಲಿ ಸುಮಾರು ಒಂದೂವರೆ ತಿಂಗಳು ಕಳೆದಿದ್ದಾರೆ ಮತ್ತು ಆಗಾಗ್ಗೆ ಮೀನಾ ಭೇಟಿಯಾಗುತ್ತಾರೆ, ಅವರು ಮರಾಠವಾಡ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

“ಡಿ ಎನ್‌ ಎ ಪರೀಕ್ಷೆಯನ್ನು ಯಾವಾಗ ನಡೆಸಬೇಕೆಂದು ಸರ್ಕಾರಿ ಅಧಿಕಾರಿಗಳು ನಿರ್ಧರಿಸಬೇಕು. ಅಲ್ಲಿಯವರೆಗೆ ಗೀತಾ ಪಹಾಲ್‌ ನಲ್ಲಿ ತರಬೇತಿ ಪಡೆಯುವುದನ್ನು ಮುಂದುವರಿಸುತ್ತಾರೆ” ಎಂದು ಸೆಲ್ಗಾಂವ್ಕರ್ ಹೇಳಿದರು.

ಇನ್ನು, ವಿಶ್ವ ಪ್ರಸಿದ್ಧ ಎಡಿ ವೆಲ್ಫೇರ್ ಟ್ರಸ್ಟ್ ನನ್ನು ನಡೆಸುತ್ತಿರುವ ಮತ್ತು ಗೀತಾ ಅವರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡ ದಿವಂಗತ ಅಬ್ದುಲ್ ಸತ್ತಾರ್ ಎಧಿಯವರ ಪತ್ನಿ ಬಿಲ್ಕೀಸ್ ಎಧಿ, ​​ಭಾರತೀಯ ಹುಡುಗಿ ಗೀತಾ ಅಂತಿಮವಾಗಿ ಮಹಾರಾಷ್ಟ್ರದಲ್ಲಿ ತನ್ನ ತಾಯಿಯ ಆಶ್ರಯವನ್ನು ಕಂಡುಕೊಂಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಆಕೆ ನನ್ನೊಂದಿಗೆ ಆಪ್ತಳಾಗಿದ್ದಳು ಕೊನೆಗೂ ಸಿಹಿ ಸುದ್ದಿಯನ್ನು ನೀಡಿದ್ದಾಳೆ ಎಂದು ಬಿಲ್ಕೀಸ್ ಎಧಿ ಹೇಳಿದ್ದಾರೆ.  ಗೀತಾಳನ್ನು ಸುಮಾರು 11-12 ವರ್ಷದವಳಿದ್ದಾಗ ರೈಲ್ವೆ ನಿಲ್ದಾಣವೊಂದರಲ್ಲಿ ಅನಾಥಳಾಗಿ ಸಿಕ್ಕಿದ್ದಳು. ಕರಾಚಿಯಲ್ಲಿರುವ ಅವರ ಸಂಸ್ಥೆಯಲ್ಲಿ ಗೀತಾಲಿಗೆ ಆಶ್ರಯ ನೀಡಿದ್ದರು.

ಆಕೆ ಪಾಕಿಸ್ಥಾನದಲ್ಲಿ ಕೆಲ ಕಾಲ ಒಂಟಿಯಾಗಿದ್ದಳು, ನಮಗೆ ಆಕೆ ಕರಾಚಿಯಲ್ಲಿ ಅನಾಥಳಾಗಿ ಕಂಡು ಬಂದಾಗ ಆಕೆ ತಮ್ಮಲ್ಲಿ ನೋವನ್ನು ಹೇಳಿಕೊಂಡಳು ಮತ್ತು ಆಶ್ರಯವನ್ನು ಬಯಸಿದ್ದಳು ಎಂದು ಎಧಿ ವಿವರಿಸಿದ್ದಾರೆ.

ಓದಿ : ಈ ಶಿವಲಿಂಗಕ್ಕೆ ವರ್ಷದ ಎರಡು ಬಾರಿ ಮಾತ್ರ ಪೂಜೆ! ಸೀತಾನದಿಯಲ್ಲಿದೆ ಪುರಾಣ ಪ್ರಸಿದ್ದ ಶಿವಲಿಂಗ

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.