Pan masala ಪ್ಯಾಕ್‌ನ ಶೇ.50 ಜಾಗ ಎಚ್ಚರಿಕೆ ಬರಹವಿರಲಿ: ಹೈಕೋರ್ಟ್
Team Udayavani, Jul 12, 2024, 6:40 AM IST
ಹೊಸದಿಲ್ಲಿ: ಪಾನ್ ಮಸಾಲ ಪ್ಯಾಕೆಟ್‌ಗಳ ಮೇಲೆ 3 ಎಂಎಂ ಜಾಗದಲ್ಲಿ ಬರೆಯಲಾಗುತ್ತಿದ್ದ “ಆರೋಗ್ಯಕ್ಕೆ ಹಾನಿಕರ’ ಎನ್ನುವ ಎಚ್ಚರಿಕೆ ಬರಹವನ್ನು (ಶಾಸನ ವಿಧಿಸಿದ ಎಚ್ಚರಿಕೆ ಬರಹ) ಪ್ಯಾಕೆಟ್‌ನ ಶೇ.50ರಷ್ಟು ಜಾಗದವರೆಗೂ ವಿಸ್ತರಿಸುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ಎಸ್‌ಎಸ್‌ಎಐ) ನಿರ್ಧಾರವನ್ನು ದಿಲ್ಲಿ ಹೈಕೋರ್ಟ್ ಎತ್ತಿ ಹಿಡಿದಿದೆ. 2022ರ ಅಕ್ಟೋಬರ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಪಾನ್ ಮಸಾಲ ಪ್ಯಾಕೆಟ್‌ಗಳ ಮೇಲಿನ ಶೇ.50ರಷ್ಟು ಜಾಗದ ಪೂರ್ತಿ ಎಚ್ಚರಿಕೆ ಬರಹ ಪ್ರಕಟಿಸುವಂತೆ ಎಫ್ಎಸ್‌ಎಸ್‌ಎಐ ಉತ್ಪನ್ನದ ತಯಾರಕರಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಉತ್ಪಾದಕ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅರ್ಜಿ ಯನ್ನು ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾ| ಮನಮೋಹನ್ ಪೀಠ ವಜಾಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.