China ಗಡಿಯಿಂದ ಕೇವಲ 50 ಕಿ.ಮೀ. ದೂರ; ಪಿತ್ರೋಗಢ ಏರ್‌ಪೋರ್ಟ್‌ಗೆ ಅನುಮತಿ
Team Udayavani, Jun 15, 2023, 7:18 AM IST
ಡೆಹ್ರಾಡೂನ್/ಹೊಸದಿಲ್ಲಿ: ಚೀನ ಗಡಿಯ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಿಂದ 50 ಕಿ.ಮೀ. ದೂರದಲ್ಲಿರುವ ಉತ್ತರಾಖಂಡದ ಪಿತ್ರೋಗಢ ಜಿಲ್ಲೆಯಲ್ಲಿರುವ ನೈನಿ ಸೈನಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಪರವಾನಿಗೆ ನೀಡಿದೆ. ಇದರಿಂದಾಗಿ ಚೀನ ಗಡಿ ಭಾಗಕ್ಕೆ ಹೊಂದಿಕೊಂಡುವ ಜಿಲ್ಲೆಯ ಜನರಿಗೆ ಅನುಕೂಲವೂ ಆಗಲಿದೆ.
ವಾಣಿಜ್ಯ ವಿಮಾನಗಳು ಹಾರಾಟ ನಡೆಸಿದರೂ ವ್ಯೂಹಾತ್ಮಕವಾಗಿ ಪ್ರಮುಖ ಪ್ರದೇಶದಲ್ಲಿರುವ ನೈನಿ ಸೈನಿ ವಿಮಾನ ನಿಲ್ದಾಣವನ್ನು ಐಎಎಫ್ಗೆ ಹಸ್ತಾಂತರಿಸಲು ಉತ್ತರಖಂಡ ಸಚಿವ ಸಂಪುಟ ಈ ಹಿಂದೆಯೇ ಅನುಮತಿ ನೀಡಿತ್ತು. 1991ರಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಕೇಂದ್ರ ಸರಕಾರಿ ಪವನ್ ಹನ್ಸ್ ಹೆಲಿ ಸರ್ವೀಸಸ್ ಬಳಕೆ ಮಾಡುತ್ತಿದ್ದು, ಹೆಲಿಕಾಪ್ಟರ್‌ಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡುತ್ತವೆ.
ವಿದ್ಯುತ್ ಸ್ಥಾವರ ಪ್ರಾಯೋಗಿಕ ಆರಂಭ: ಅರುಣಾಚಲ ಪ್ರದೇಶದ ಸುಬನ್ಸಿರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆಯಲ್ಲಿ ಪ್ರಾಯೋಗಿಕವಾಗಿ ವಿದ್ಯುತ್ ಉತ್ಪಾದನೆಯನ್ನು ಮುಂದಿನ ತಿಂಗಳಿಂದ ಆರಂಭ ಮಾಡಲಾಗುತ್ತದೆ.
2003ಲ್ಲಿ ಅದರ ಕಾಮಗಾರಿ ಶುರುವಾಗಿತ್ತು ಮತ್ತು ಕೇಂದ್ರ ಸರಕಾರ ವ್ಯಾಪ್ತಿಯ ರಾಷ್ಟ್ರೀಯ ಜಲವಿದ್ಯುತ್ ಆಯೋಗ ಅದರ ಹೊಣೆ ಹೊತ್ತುಕೊಂಡಿದೆ. ವಿದ್ಯುತ್ ಸ್ಥಾವರದ ಮೊದಲ ಘಟಕವನ್ನು ವರ್ಷಾಂತ್ಯಕ್ಕೆ ಲೋಕಾರ್ಪಣೆಗೊಳಿಸಲಾ ಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.