ಉರ್ಮಿಳಾ ವಿರುದ್ಧ ಅಶ್ಲೀಲ ಪೋಸ್ಟ್; 57 ರ ವ್ಯಕ್ತಿ ಮೇಲೆ ಕೇಸ್
Team Udayavani, May 28, 2019, 2:03 PM IST
ಪುಣೆ: ಖ್ಯಾತ ನಟಿ, ಪರಾಜಿತ ಕಾಂಗ್ರೆಸ್ ನಾಯಕಿ ಉರ್ಮಿಳಾ ಮಾಂತೋಡ್ಕರ್ ವಿರುದ್ಧ ಸಾಮಾಜಿಕ ತಾಣದಲ್ಲಿ ಅಶ್ಲೀಲ ಪೋಸ್ಟ್ ಮಾಡಿದ ಆರೋಪದಲ್ಲಿ 57 ರ ಹರೆಯದ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಧನಂಜಯ್ ಕುಡ್ತಾರ್ಕರ್ ಎನ್ನುವ ವ್ಯಕ್ತಿಯ ವಿರುದ್ಧ ವಿಶ್ರಮ್ಬಾಗ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಧನಂಜಯ್ ಎಂಎನ್ಎಸ್ ಪಕ್ಷದ ಮುಖಂಡ ಎಂದು ತಿಳಿದು ಬಂದಿದೆ.
ಕುಡ್ತಾರ್ಕರ್ ವಿರುದ್ಧ ಸೆಕ್ಷನ್ 354 (ಎ)1 (4)(ಲೈಂಗಿಕ ಕಿರುಕುಳ ನೀಡಿದುದಕ್ಕೆ ಸಮನಾದ ಕೇಸ್) ರ ಅನ್ವಯ ಐಟಿ ಕಾಯಿದೆ ಅಡಿ ಕೇಸು ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ತನಿಖೆ ನಡೆಯುತ್ತಿದ್ದು ಇದುವರೆಗೆ ಯಾರನ್ನೂ ಬಂಧಿಸಿಲ್ಲ.
ಮುಂಬಯಿ ಉತ್ತರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಉರ್ಮಿಳಾ ಅವರು ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.