ದೇಶಾದ್ಯಂತ ಶೀಘ್ರವೇ “5 ಜಿ’ ಹವಾ!
Team Udayavani, Mar 11, 2017, 3:45 AM IST
ನವದೆಹಲಿ: ನಗದುರಹಿತ ವಹಿವಾಟಿಗೆ ಕೈಹಾಕಿ, ಡಿಜಿಟಲೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಈಗ “5 ಜಿ’ ನೆಟ್‌ವರ್ಕ್ ಸ್ಥಾಪನೆಗೆ ಮುಂದಾಗಿದೆ. 5ಜಿ ಸ್ಪೆಕ್ಟ್ರಂನ ಹರಾಜು ಪ್ರಕ್ರಿಯೆ ಈ ವರ್ಷವೇ ಆಗಲಿದ್ದು, 700 ಮೆಗಾಹರ್ಟ್ಸ್ ತರಂಗಾಂತರದಿಂದ ಮಾರಾಟ ಪ್ರಕ್ರಿಯೆ ಆರಂಭಗೊಳ್ಳಲಿದೆ. 5 ಜಿ ನೆಟ್‌ವರ್ಕ್ ಒಂದು ಸೆಕೆಂಡಿಗೆ 10 ಗಿಗಾಬೈಟ್ಸ್ ರವಾನೆ ವೇಗವನ್ನು ಹೊಂದಿರುತ್ತವೆ. ಅಂದರೆ, ಇದು 4ಜಿ ಗಿಂತ 100 ಪಟ್ಟು ಅಧಿಕ ವೇಗ!
ಕೇಂದ್ರ ದೂರಸಂಪರ್ಕ ಇಲಾಖೆ “5 ಜಿ’ ಯೋಜನೆ ಜಾರಿಗೆ ಶೀಘ್ರವೇ ಟ್ರಾಯ್‌ಗೆ ಶಿಫಾರಸ್ಸು ಮಾಡಲಿದೆ. ಮೂಲಗಳ ಪ್ರಕಾರ, 800, 900, 1800, 2100, 2300 ಮತ್ತು 3400 ಮೆಗಾಹರ್ಟ್ಸ್ಗಳು ಮಾರಾಟಕ್ಕೆ ಸೂಕ್ತ ಎಂಬುದನ್ನು ಸರ್ಕಾರ ನಿರ್ಧರಿಸಿದೆ. ಅತಿವೇಗದ ತರಂಗಾಂತರಗಳಾದ 3,300 ಮತ್ತು 3,400 ಮೆಗಾಹರ್ಟ್ಸ್ಗಳು ಹೊಸ ತಲೆಮಾರಿನ ಬಹುತೇಕ ಸೇವೆಗಳನ್ನು ಪೂರೈಸಲಿವೆ. ಕೇಂದ್ರ ಸರ್ಕಾರದ ಉದ್ದೇಶಿತ ಸ್ಮಾರ್ಟ್‌ಸಿಟಿಯಲ್ಲಿ ಇರಲಿವೆ ಎನ್ನಲಾದ ವೇಗದ ಇಂಟರ್ನೆಟ್, ಮಶಿನ್‌ನಿಂದ ಮಶಿನ್‌ಗೆ ಸಂವಹನ, ಹೈ ರೆಸಲ್ಯೂಶನ್ ವಿಡಿಯೋ ಶೀಘ್ರವೇ ಡೌನ್‌ಲೋಡ್ ಮತ್ತು ವರ್ಗಾವಣೆ ಸೌಲಭ್ಯಗಳನ್ನು ಇವು ಒದಗಿಸಲಿವೆ.
ಈ ಹಿಂದೆ ಕೇಂದ್ರ ಸರ್ಕಾರ 700 ಮೆಗಾಹರ್ಟ್ಸ್ ಅನ್ನು 55 ಸಾವಿರ ಕೋಟಿ ರೂ.ಗೆ ಮಾರಲು ಮುಂದಾಗಿದ್ದಾಗ, ಅದರಲ್ಲಿ ತರಂಗಾಂತರ ದೋಷಗಳ ಕಾರಣಕ್ಕಾಗಿ ಹರಾಜು ವೈಫಲ್ಯ ಕಂಡಿತ್ತು.
ಜಾಗತಿಕವಾಗಿ 5ಜಿ ಈಗಾಗಲೇ ಚೀನಾದಂಥ ದೇಶಗಳಲ್ಲಿ ಜಾರಿಯಲ್ಲಿದ್ದರೂ, 2022ರ ವೇಳೆ ಭಾರತವೂ ಒಳಗೊಂಡಂತೆ 5ಜಿ ಸೌಲಭ್ಯವನ್ನು ಹೊಂದಿರಲಿವೆ. ಎರಿಕ್ಸನ್ ಮೊಬೈಲ್ ಕಂಪನಿಯ ಅಂದಾಜಿನಂತೆ, 2020ರೊಳಗೆ 5ಜಿ ಸೌಲಭ್ಯಕ್ಕೆ ಎಲ್ಲ ಮೊಬೈಲ್ ಸಂಸ್ಥೆಗಳು ಒಗ್ಗಿಕೊಳ್ಳಲಿವೆ. 2022ರ ವೇಳೆ ಜಗತ್ತಿನಾದ್ಯಂತ 55 ಕೋಟಿ 5ಜಿ ಗ್ರಾಹಕರು ಇರಲಿದ್ದಾರೆ. ಅಂದರೆ, ಒಟ್ಟು ಜನಸಂಖ್ಯೆಯ ಶೇ.10 ಮಂದಿ 5ಜಿ ತರಂಗಾಂತರ ಬಳಕೆ ಮಾಡಲಿದ್ದಾರೆ. ಸದ್ಯ ಇರುವ “4ಜಿ’ಯ ದತ್ತಾಂಶ ರವಾನೆ ವೇಗ ಪ್ರತಿ ಸೆಕೆಂಡಿಗೆ 100 ಎಂಬಿಯಿಂದ 1 ಜಿಬಿ ವರೆಗೆ ಏರಿಸಲಾಗಿದ್ದರೂ ಯುವಜನತೆ ಇನ್ನಷ್ಟು ವೇಗದ ನೆಟ್‌ವರ್ಕ್ ಅನ್ನು ಬಯಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.