ರೈಲು ನಿಲ್ದಾಣದಲ್ಲಿ ಸ್ಫೋಟ: ಆರು ಸಿಆರ್ ಪಿಎಫ್ ಸಿಬ್ಬಂದಿಗೆ ಗಾಯ
Team Udayavani, Oct 16, 2021, 12:15 PM IST
ರಾಯ್ ಪುರ: ಇಲ್ಲಿನ ರೈಲು ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ನಡೆದ ಸ್ಪೋಟದಲ್ಲಿ ಆರು ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಸಿಬ್ಬಂದಿ ಗಾಯಗೊಂಡಿದ್ದಾರೆ.
ಸಿಆರ್ ಪಿಎಫ್ ನ 211 ಬೆಟಾಲಿಯನ್ ನ ಯೋಧರು ಇಂದು ಬೆಳಗ್ಗೆ ಜಮ್ಮುವಿಗೆ ವಿಶೇಷ ರೈಲಿನಲ್ಲಿ ಹೊರಟಿದ್ದರು. ಈ ವೇಳೆ ಬಾಕ್ಸ್ ನಲ್ಲಿರಿಸಿದ್ದ ಡಿಟೋನೇಟರ್ಸ್ ಸ್ಪೋಟವಾಗಿದೆ.
ಒರಿಸ್ಸಾದ ಝರ್ಸುಗುಡಾದಿಂದ ಜಮ್ಮುವಿಗೆ ಈ ವಿಶೇಷ ರೈಲು ತೆರಳುತ್ತಿತ್ತು. ಬೆಳಗ್ಗೆ 6.30ರ ಸುಮಾರಿಗೆ ರಾಯ್ ಪುರ ರೈಲು ನಿಲ್ಧಾಣದಲ್ಲಿ ಸ್ಫೋಟವಾಗಿದೆ ಎಂದು ರಾಯ್ ಪುರ ಎಸ್ ಪಿ ಪ್ರಶಾಂತ್ ಅಗರ್ವಾಲ್ ಹೇಳಿದರು.
ಇದನ್ನೂ ಓದಿ:ಸುಬ್ರಹ್ಮಣ್ಯ: ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಕಡವೆ; ಸವಾರ ಮೃತ್ಯು
ಬೆಟಾಲಿಯನ್ ಪಡೆಯು ನಿಲ್ದಾಣದಲ್ಲಿ ಸ್ಫೋಟಕಗಳನ್ನು ತುಂಬಿದ್ದ ಬಾಕ್ಸ್ ಗಳನ್ನು ರೈಲಿನಲ್ಲಿ ಇರಿಸುವಾಗ ಆಕಸ್ಮಿಕವಾಗಿ ಬಾಕ್ಸ್ ಕೆಳಕ್ಕೆ ಬಿದ್ದಿದೆ. ಇದರಿಂದ 29 ಡಿಟೋನೇಟರ್ಸ್ ಗಳು ಸ್ಫೋಟವಾಗಿದೆ. ಇದರಿಂದ ಸಿಬ್ಬಂದಿ ಗಾಯಗೊಂಡರು ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
MUST WATCH
ಹೊಸ ಸೇರ್ಪಡೆ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?
Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.