Tamilnadu: ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು
ದುರಂತದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ.ಸ್ಟಾಲಿನ್ ಸಂತಾಪ
Team Udayavani, Jan 4, 2025, 1:24 PM IST
ಚೆನ್ನೈ(ತಮಿಳುನಾಡು): ಪಟಾಕಿ ತಯಾರಿಸುತ್ತಿದ್ದ ಘಟಕದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಆರು ಮಂದಿ ದಾರುಣವಾಗಿ ಸಾವ*ನ್ನಪ್ಪಿರುವ ಘಟನೆ ಶನಿವಾರ (ಜನವರಿ 04) ತಮಿಳುನಾಡಿನಲ್ಲಿ ನಡೆದಿರುವುದಾಗಿ ಪಿಟಿಐ ವರದಿ ತಿಳಿಸಿದೆ.
ವರದಿಯ ಪ್ರಕಾರ, ಘಟನೆಯಲ್ಲಿ ಹಲವಾರು ಕಾರ್ಮಿಕರು ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದ್ದು, ಸಂತ್ರಸ್ತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿ ವಿವರಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟಕ್ಕೆ ಕಾರಣ ಏನೆಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಪಟಾಕಿ ತಯಾರಿಸುವ ವೇಳೆ ಕೆಮಿಕಲ್ಸ್ ಮಿಶ್ರಣದ ಸಂದರ್ಭದಲ್ಲಿ ಸ್ಫೋಟ ಸಂಭವಿಸರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ.
ದುರಂತದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ.ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಇತ್ತೀಚೆಗಷ್ಟೇ ಸಿಎಂ ಸ್ಟಾಲಿನ್ ವಿರುದ್ವುನಗರಕ್ಕೆ ಭೇಟಿ ನೀಡಿ, ಪಟಾಕಿ ತಯಾರಿಕೆ ಕಾರ್ಖಾನೆ ಮಾಲೀಕರಲ್ಲಿ ದುರಂತಗಳು ನಡೆಯದಂತೆ ಮುನ್ನೆಚ್ಚರಿಕೆಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು.
ವಿರುದ್ವುನಗರದಲ್ಲಿ 1,150 ಪಟಾಕಿ ತಯಾರಿಕೆ ಕಾರ್ಖಾನೆಗಳಿದ್ದು, ಅಂದಾಜು 4 ಲಕ್ಷ ಕಾರ್ಮಿಕರಿದ್ದಾರೆ. ಶಿವಕಾಶಿವೊಂದರಲ್ಲೇ ದೇಶದ ಶೇ.70ರಷ್ಟು ಪಟಾಕಿ ಉತ್ಪಾದನೆಯಾಗುತ್ತದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಬಂಧನ
Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್ ರದ್ದು: ಸುಪ್ರೀಂ ಕೋರ್ಟ್
ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್ ಸರಕಾರ; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ನರೇಗಾದಿಂದ ಆಲೂರಿನ ಮಹಿಳೆಯ ಸ್ವಾವಲಂಬಿ ಬದುಕು
HMP ವೈರಸ್: ಜನರು ಭಯಪಡುವ ಅಗತ್ಯವಿಲ್ಲ-ಮಾಸ್ಕ್ ಬಗ್ಗೆ ಸಚಿವ ಗುಂಡೂರಾವ್ ಹೇಳಿದ್ದೇನು?
Andhra: ʼಗೇಮ್ ಚೇಂಜರ್ʼ ಈವೆಂಟ್‌ನಿಂದ ಮರಳುತ್ತಿದ್ದ ಅಭಿಮಾನಿಗಳು ರಸ್ತೆ ಅಪಘಾತಕ್ಕೆ ಬಲಿ
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.