ದಿಟ್ಟೆ ವರ್ಣಿಕಾ: ಒಂದು ವಾರದಲ್ಲಿ 60 ಸಂದರ್ಶನ!
Team Udayavani, Aug 12, 2017, 7:10 AM IST
ಚಂಡೀಗಢ: ಆಗಸ್ಟ್ 4ರ ಮಧ್ಯರಾತ್ರಿ. ಅಂದು ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದ ವರ್ಣಿಕಾ ಕುಂಡು ಎಂಬ ಯುವತಿಯನ್ನ ಬಿಜೆಪಿ ಮುಖಂಡರೊಬ್ಬರ 29ರ ಹರೆಯದ ಪುತ್ರ ಹಿಂಬಾಲಿಸಿ ಚುಡಾಯಿಸಿದ್ದಲ್ಲದೆ, ಆಕೆಯ ಅಪಹರಣಕ್ಕೆ ಯತ್ನಿಸಿದ್ದ. ಈ ಅನಿರೀಕ್ಷಿತ ಘಟನೆಯಿಂದ ಎದೆಗುಂದಿದರೂ ವರ್ಣಿಕಾ ಧೈರ್ಯಗೆಡಲಿಲ್ಲ.
ಮರು ದಿನ ಮಾಧ್ಯಮಗಳಲ್ಲಿ ವರ್ಣಿಕಾ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಾಣಿಸಿಕೊಂಡಿದ್ದರು. ಆದರೆ ನಂತರದ ದಿನ ತನ್ನ ಮುಖದ ಬಟ್ಟೆ ಕಳಚಿದ ದಿಟ್ಟ ಯುವತಿ, ಇಡೀ ದೇಶದ ಎದುರು ಕಾಣಿಸಿಕೊಂಡರು. ಘಟನೆ ನಡೆದಿರುವುದೇ ನಿಜವಾಗಿರುವಾಗ, ಚಾರಿತ್ರ್ಯ ಹಾಗೂ ಅವಮಾನಕ್ಕೆ ಅಂಜಿ ಮುಖ ಮುಚ್ಚಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದರಿತ ವರ್ಣಿಕಾ, ಆ ರಾಜಕಾರಣಿಯ ಪುತ್ರನ ಬಂಡವಾಳವನ್ನ ಬಯಲಿಗೆಳೆದಿದ್ದರು.
ಹೀಗೆ ಎರಡೇ ದಿನದಲ್ಲಿ ದೇಶದಾದ್ಯಂತ ಮನೆಮಾತಾದ ವರ್ಣಿಕಾ, ಕೇವಲ ಒಂದು ವಾರದಲ್ಲಿ ಮಾಧ್ಯಮಗಳಿಗೆ 60 ಸಂದರ್ಶನ ನೀಡಿದ್ದಾರೆ. ಟ್ವಿಟರ್ನಲ್ಲಿ ಫಾಲೋ ಮಾಡುವವರ ಸಂಖ್ಯೆ ಹತ್ತಾರು ಸಾವಿರ ಮೀರಿದೆ. ಈ ಮೂಲಕ ದೇಶಕ್ಕೆ ದೇಶವೇ ನೊಂದ ಯುವತಿಯ ಬೆನ್ನಿಗೆ ನಿಂತು ಧೈರ್ಯ ತುಂಬಿದೆ. ಆದರೆ “ತನಗೆ ಸಿಕ್ಕ ಈ ಅದ್ಭುತ ಬೆಂಬಲ ನೆನೆದು ವರ್ಣಿಕಾ ಕೆಲವೊಮ್ಮೆ ಕಣ್ಣೀರಾಗುತ್ತಾರೆ. ಪತ್ರಿಕೆಗಳಲ್ಲಿ ಬಂದ ತನ್ನದೇ ವರದಿಗಳನ್ನ ಓದಿ ಮೂರು ಬಾರಿ ಕುಸಿದು ಬಿದ್ದಿದ್ದಾರೆ,’ ಎಂದು ಅವರ ತಂಗಿ ಸಾತ್ವಿಕಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಾಸ್ ಜತೆ ಸೆ*ಕ್ಸ್ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್ಗಷ್ಟೇ ಅವಕಾಶ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.