ರಾಜಸ್ಥಾನದಲ್ಲಿ 616.50 ಕಿಲೋ ಬೆಳ್ಳಿ ಪತ್ತೆ; ಆರು ಮಂದಿ ವಶಕ್ಕೆ
Team Udayavani, Apr 10, 2019, 5:15 PM IST
ಜೈಪುರ : ರಾಜಸ್ಥಾನದ ರಾಜಾಸಮಂದ್ ಮತ್ತು ಸಿರೋಹಿ ಜಿಲ್ಲೆಯ ಚೆಕ್ ಪೋಸ್ಟ್ಗಳಲ್ಲಿ ನಡೆಸಲಾದ ತಪಾಸಣೆಯಲ್ಲಿ 616.50 ಕಿಲೋ ಬೆಳ್ಳಿ ಪತ್ತೆಯಾಗಿದ್ದು ಆರು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಥದ್ವಾರ – ಜೈಪುರ ರಾಜ್ಯ ಹೆದ್ದಾರಿಯಲ್ಲಿ ಐವರು ಇದ್ದ ಕಾರೊಂದನ್ನು ಪೊಲೀಸರು ತಡೆದು ತಪಾಸಣೆ ಮಾಡಿದಾಗ ಅದರೊಳಗೆ 600 ಕೆಜಿ ಬೆಳ್ಳಿ ಪತ್ತೆಯಾಯಿತು. ಉಗ್ರನಿಗ್ರಹ ದಳದವರು ಕಾರೊಳಗೆ ಅಕ್ರಮ ಬೆಳ್ಳಿ ಸಾಗಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದರು.
ಸಿರೋಹಿ ಚೆಕ್ ಪೋಸ್ಟ್ ನಲ್ಲಿ ಖಾಸಗಿ ಬಸ್ ತಪಾಸಣೆ ಮಾಡುತ್ತಿದ್ದಾಗ ಪ್ರಯಾಣಿಕನೋರ್ವನ ಬಳಿ 16.5 ಕಿಲೋ ಬೆಳ್ಳಿ ಪತ್ತೆಯಾಯಿತು. ಆರೋಪಿ ಪ್ರಕಾಶ್ ಸೋನಿ (32) ಬೀವಾರ್ ನಿಂದ ಈ ಬಸ್ಸಿನಲ್ಲಿ ದಾಖಲೆ ಪತ್ರ ಇಲ್ಲದ ಬೆಳ್ಳಿಯೊಂದಿಗೆ ಪ್ರಯಾಣಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.