ಅಕ್ಕಿಗೆ ಚೊಚ್ಚಲ ರಾಷ್ಟ್ರ ಪ್ರಶಸ್ತಿ; ರಾಜ್ಯಕ್ಕೆ ಆರು ಪ್ರಶಸ್ತಿ
Team Udayavani, Apr 8, 2017, 3:45 AM IST
ನವದೆಹಲಿ: 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶುಕ್ರವಾರ ಘೋಷಣೆಯಾಗಿದ್ದು, ರುಸ್ತುಮ್ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆಯುವ ಮೂಲಕ ನಟ ಅಕ್ಷಯ್ ಕುಮಾರ್, ವೃತ್ತಿ ಜೀವನದ ಮೊಟ್ಟಮೊದಲ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಸೋನಂ ಕಪೂರ್ ಅಭಿನಯದ ನೀರ್ಜಾಗೆ ಅತ್ಯುತ್ತಮ ಹಿಂದಿ ಚಿತ್ರ ಗೌರವ ಸಂದಿದೆ. ಅಮಿತಾಭ್ ಬಚ್ಚನ್ ಅಭಿನಯದ ಪಿಂಕ್ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರವಾಗಿ ಆಯ್ಕೆಯಾದರೆ,ಮಿನ್ನಾಮಿನಿಂಗು ಚಿತ್ರದ ಅಭಿನಯಕ್ಕಾಗಿ ಸುರಭಿ ಲಕ್ಷ್ಮಿ ಅತ್ಯುತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಉಳಿದಂತೆ ಹಿಂದಿಯ ಧನಕ್ ಅತ್ಯುತ್ತಮ ಮಕ್ಕಳ ಚಿತ್ರ, ರಾಜೇಶ್ ಮಪುಸ್ಕರ್ (ವೆಂಟಿಲೇಟರ್) ಅತ್ಯುತ್ತಮ ನಿರ್ದೇಶಕ, ಮನೋಜ್ ಜೋಶಿ (ದಶ್‌ಕ್ರಿಯಾ) ಅತ್ಯುತ್ತಮ ಪೋಷಕ ನಟ, ಝಾಯಿರಾ ವಾಸಿಮ್ (ದಂಗಲ್) ಅತ್ಯುತ್ತಮ ಪೋಷಕ ನಟಿ,ಶಿವಾಯ್ ಅತ್ಯುತ್ತಮ ಸ್ಪೆಷಲ್ ಎಫೆಕ್ಟ್, ಸುಂದರ ಅಯ್ಯರ್ ಅತ್ಯುತ್ತಮ ಹಿನ್ನೆಲೆ ಗಾಯಕ, ಎಮಾನ್ ಚಕ್ರವರ್ತಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ರಾಜ್ಯಕ್ಕೆ ಐದು ಪ್ರಶಸ್ತಿ
ಕನ್ನಡ, ತುಳು, ಕೊಂಕಣಿ ಚಿತ್ರಗಳು ಸೇರಿ ಈ ಬಾರಿ ಐದು ರಾಷ್ಟ್ರ ಪ್ರಶಸ್ತಿಗಳು ಕರ್ನಾಟಕದ ಪಾಲಾಗಿವೆ. ನಿಖೀಲ್ ಮಂಜು ನಿರ್ದೇಶನದ ರಿಸರ್ವೇಷನ್ ಅತ್ಯುತ್ತಮ ಕನ್ನಡ ಚಿತ್ರವಾಗಿ ಆಯ್ಕೆಯಾಗಿದ್ದು, ಚೇತನ್ ಮುಂಡಾಡಿ ನಿರ್ದೇಶನದ ಮದಿಪುಅತ್ಯುತ್ತಮ ತುಳು ಚಿತ್ರ ಹಾಗೂ ಡಿ ಝರಾ ಝರಾ ಅತ್ಯುತ್ತಮ ಕೊಂಕಣಿ ಚಿತ್ರ ಗೌರವಕ್ಕೆ ಪಾತ್ರವಾಗಿದೆ. ಇನ್ನೊಂದೆಡೆ ಟಿ.ಎಸ್. ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಅಲ್ಲಮ ಚಿತ್ರದ ಹಾಡಿಗಾಗಿ ಬಾಪು ಪದ್ಮನಾಭ ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಅತ್ಯುತ್ತಮ ಮೇಕಪ್‌ಗಾಗಿ ಎನ್.ಕೆ.ರಾಮಕೃಷ್ಣನ್ ಅವರಿಗೆ ರಾಷ್ಟ್ರಪ್ರಶಸ್ತಿ ಲಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.