ಲಕ್ನೋ: ಮಂಟಪದಲ್ಲೇ ಅಪ್ಪನ 5ನೇ ಮದುವೆ ತಡೆದ ಮಕ್ಕಳು!
Team Udayavani, Sep 3, 2022, 7:40 AM IST
ಲಕ್ನೋ: ಕೆಲವೊಂದು ಘಟನೆಗಳು ಕೇವಲ ಸಿನಿಮಾದಲ್ಲಿ ನಡೆಯುತ್ತವೆ ಅಂದುಕೊಂಡಿರುತ್ತೇವೆ. ಇಂತಹ ಸಿನಿಮಾಗಳು ನಿಜಜೀವನವನ್ನು ಆಧರಿಸಿಯೇ ಸಿದ್ಧವಾಗಿರುತ್ತವೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.
ಉತ್ತರಪ್ರದೇಶದ ಸೀತಾಪುರದ ಕೋಟ್ ಕೋಜಿಯಾರೆಯಲ್ಲಿ ಶಫಿ ಅಹ್ಮದ್ 5ನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ. ಇನ್ನೇನು ಮದುವೆಯಾಗಬೇಕೆನ್ನುವಾಗ ಹಿಂದಿನ ನಾಲ್ವರು ಪತ್ನಿಯರ ಮಕ್ಕಳು ಬಂದು ಸ್ಥಳದಲ್ಲಿ ಗಲಾಟೆ ಮಾಡಿದ್ದಾರೆ. ಜನರಿಗೆ ವಿಷಯ ಗೊತ್ತಾದ ತಕ್ಷಣ 55 ವರ್ಷದ ಶಫಿಗೆ ಚೆನ್ನಾಗಿ ಬಾರಿಸಿದ್ದಾರೆ. ಈ ಗಲಾಟೆಯಲ್ಲಿ 5ನೇ ಮದುವೆಗೆ ಸಿದ್ಧವಾಗಿದ್ದ ವಧು ಪರಾರಿಯಾಗಿದ್ದಾಳೆ!
ಶಫಿ ಅಹ್ಮದ್ ಮಕ್ಕಳನ್ನು ಸಾಕುತ್ತಿರಲಿಲ್ಲ. ಹಾಗೆಯೇ ಹಿಂದೆ ನಾಲ್ಕು ಬಾರಿ ಮದುವೆಯಾಗಿದ್ದಾನೆನ್ನುವುದೂ ಮಕ್ಕಳಿಗೆ ಗೊತ್ತಿರಲಿಲ್ಲ. ಸದ್ಯ ಶಫಿ ಬಂಧನದಲ್ಲಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.