ನಿಲ್ಲುತ್ತಿಲ್ಲ ಅವಘಡ;ಹಳಿ ತಪ್ಪಿದ ಶಕ್ತಿಕುಂಜ್ ಎಕ್ಸ್‌ಪ್ರೆಸ್
Team Udayavani, Sep 7, 2017, 9:17 AM IST
ಲಕ್ನೋ: ದೇಶದಲ್ಲಿ ನಡೆಯುತ್ತಿರುವ ರೈಲು ಅವಘಡಗಳು ಮುಂದುವರಿದಿದ್ದು, ಗುರುವಾರ ಬೆಳಗ್ಗೆ ಉತ್ತರಪ್ರದೇಶದ ಸೋನ್‌ಭದ್ರಾದ ಓಬ್ರಾ ಬಳಿ ಹೌರಾ -ಜಬಲ್‌ಪುರ್ ನಡುವೆ ಸಂಚರಿಸುವ ಶಕ್ತಿಕುಂಜ್ ಎಕ್ಸ್‌ಪ್ರೆಸ್ ರೈಲಿನ 7 ಬೋಗಿಗಳು ಹಳಿ ತಪ್ಪಿವೆ.
ಬೆಳಗ್ಗೆ 6.30 ರ ವೇಳೆಗೆ ಅವಘಡ ನಡೆದಿದ್ದು, ಇದುವರೆಗೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಘಟನೆಯಿಂದ ಇತರ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಪ್ರಯಾಣಿಕರೆಲ್ಲರನ್ನು ಉಳಿದ ಬೋಗಿಗಳಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಯಾರೋಬ್ಬರು ಗಾಯಗೊಂಡಿಲ್ಲ ಎಂದು ರೈಲ್ವೇ ವಕ್ತಾರರು ತಿಳಿಸಿದ್ದಾರೆ.
ಇದು ಕಳೆದ 20 ದಿನಗಳ ಒಳಗೆ ದೇಶದಲ್ಲಿಐ ನಡೆದ ನಾಲ್ಕನೇ ರೈಲು ಅವಘಡವಾಗಿದೆ. ಪಿಯೂಷ್ ಗೋಯಲ್ ಅವರು ರೈಲ್ವೇ ಸಚಿವರಾಗಿ ಅಧಿಕಾರ ಸ್ವೀಕರಿಸಿದ ವಾರದ ಒಳಗೆ ಅವಘಡ ನಡೆದಿರುವುದು ಚಿಂತೆಗೀಡುಮಾಡಿದೆ. ನಿರಂತರ ರೈಲು ಅವಘಡವಾದ ಹಿನ್ನಲೆಯಲ್ಲಿ ರೈಲ್ವೇ ಖಾತೆಯನ್ನು ಸುರೇಶ್ ಪ್ರಭು ಅವರಿಂದ ಬದಲಾವಣೆ ಮಾಡಿಕೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
MUST WATCH
ಹೊಸ ಸೇರ್ಪಡೆ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.