BJP ಸ್ವೀಪ್‌ಗೆ ಕಾರಣವಾದ ಶೇ.7 ಮತ! ; ಕಾಂಗ್ರೆಸ್‌ಗೆ ವರವಾದ ಶೇ.2 ಮತ!

ಮ.ಪ್ರದೇಶದಲ್ಲಿ ಬಿಜೆಪಿ ಮತ ಹಂಚಿಕೆ ಹೆಚ್ಚಳ... ಸಿಂಧಿಯಾ ಪ್ರಾಬಲ್ಯದ ಪ್ರದೇಶಗಳಲ್ಲಿ ಲಾಭ

Team Udayavani, Dec 5, 2023, 6:15 AM IST

BJP Symbol

ಹೊಸದಿಲ್ಲಿ: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಜಯದ ಹಿಂದೆ ಆ ಶೇ.7ರಷ್ಟು ಮತಗಳು ನಿರ್ಣಾಯಕ ಪಾತ್ರ ವಹಿಸಿದ್ದವು ಎನ್ನುತ್ತವೆ ಚುನಾವಣ ಆಯೋಗದ ದತ್ತಾಂಶ!

ಹೌದು, 2018ರಲ್ಲಿ ಬಿಜೆಪಿಯು ಮಧ್ಯಪ್ರದೇಶದಲ್ಲಿ ಶೇ.41.02ರಷ್ಟು ಮತಗಳನ್ನು ಪಡೆದಿತ್ತು. ಈ ಬಾರಿ ಇದು ಶೇ.48.55ಕ್ಕೇರಿಕೆಯಾಗಿದೆ. ಅಂದರೆ ಕಮಲ ಪಕ್ಷದ ಬುಟ್ಟಿಗೆ ಹೆಚ್ಚುವರಿಯಾಗಿ ಶೇ.7ರಷ್ಟು ಮತಗಳು ಬಿದ್ದಿವೆ. ಕಾಂಗ್ರೆಸ್‌ನ ಮತ ಹಂಚಿಕೆಯನ್ನು ನೋಡಿದರೆ, 2018ಕ್ಕೆ (ಶೇ.40.89) ಹೋಲಿಸಿದರೆ ಕಾಂಗ್ರೆಸ್‌ನ ಮತಗಳ ಪ್ರಮಾಣದಲ್ಲಿ ಈ ಬಾರಿ(ಶೇ.40.40) ದೊಡ್ಡ ಮಟ್ಟದ ಬದಲಾವಣೆಯೇನೂ ಆಗಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 114 ಸೀಟುಗಳಲ್ಲಿ ಗೆದ್ದರೆ, ಈ ಬಾರಿ 66 ಸೀಟುಗಳಿಗೆ ತೃಪ್ತಿಪಟ್ಟುಕೊಂಡಿದೆ. ಬಿಜೆಪಿ 163ರಲ್ಲಿ ಗೆದ್ದು ಬೀಗಿದೆ.

ಹೆಚ್ಚುವರಿಯಾಗಿ ದೊರೆತ ಶೇ.7 ಮತಗಳೇ ಬಿಜೆಪಿಯನ್ನು 2018ರಲ್ಲಿದ್ದ 109 ಸೀಟುಗಳಿಂದ 163ಕ್ಕೆ ತಂದು ನಿಲ್ಲಿಸಿವೆ. ಗೆಲುವಿಗೆ ಅತ್ಯಂತ ನಿರ್ಣಾಯಕವಾಗಿದ್ದ ಮಾಲ್ವಾ-ನಿಮಾರ್‌ ಮತ್ತು ಗ್ವಾಲಿಯರ್‌-ಛಂಬಲ್‌ ಪ್ರದೇಶಗಳಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತಗಳು ಬಿದ್ದಿದ್ದೇ ಪಕ್ಷದ ಭರ್ಜರಿ ಯಶಸ್ಸಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಮಾಲ್ವಾ ನಿಮಾರ್‌ನಲ್ಲಿ 66 ಕ್ಷೇತ್ರಗಳ ಪೈಕಿ 48ರಲ್ಲಿ ಬಿಜೆಪಿ ಜಯ ಸಾಧಿಸಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಇಲ್ಲಿ 20 ಹೆಚ್ಚುವರಿ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಇನ್ನು, ಗ್ವಾಲಿಯರ್‌-ಛಂಬಲ್‌ನ ಒಟ್ಟು 34 ಕ್ಷೇತ್ರಗಳ ಪೈಕಿ ಅರ್ಧಕ್ಕೂ ಹೆಚ್ಚು ಕ್ಷೇತ್ರಗಳು ಕಮಲ ಪಕ್ಷದ ತೆಕ್ಕೆಗೆ ಬಿದ್ದಿವೆ. 2018ರಲ್ಲಿ ಇಲ್ಲಿ 26 ಕ್ಷೇತ್ರಗಳು ಕಾಂಗ್ರೆಸ್‌ ಪಾಲಾಗಿದ್ದವು. ಇದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪ್ರಾಬಲ್ಯವಿರುವ ಪ್ರದೇಶವಾಗಿದೆ.

ಬಿಎಸ್‌ಪಿ, ಕಾಂಗ್ರೆಸ್‌ ಭದ್ರಕೋಟೆಗೆ ನುಗ್ಗಿದ ಬಿಜೆಪಿ

ರಾಜಸ್ಥಾನದಲ್ಲಿ ಭರ್ಜರಿ ಜಯ ಗಳಿಸಿರುವ ಬಿಜೆಪಿಯು ಕಾಂಗ್ರೆಸ್‌ ಮತ್ತು ಬಿಎಸ್‌ಪಿಯ ಸಾಂಪ್ರದಾಯಿಕ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಓಟ್‌ಬ್ಯಾಂಕ್‌ಗೆ ಲಗ್ಗೆಯಿಟ್ಟಿರುವುದು ಫ‌ಲಿತಾಂಶದಿಂದ ಸ್ಪಷ್ಟವಾಗಿದೆ. 34 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ 22ರಲ್ಲಿ, ಕಾಂಗ್ರೆಸ್‌ 11ರಲ್ಲಿ ಗೆಲುವು ಸಾಧಿಸಿದೆ. ಇನ್ನೊಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಇನ್ನು, ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ 25 ಕ್ಷೇತ್ರಗಳ ಪೈಕಿ ಬಿಜೆಪಿ 12ರಲ್ಲಿ ಗೆದ್ದರೆ, ಕಾಂಗ್ರೆಸ್‌ 10 ಮತ್ತು ಭಾರತೀಯ ಆದಿವಾಸಿ ಪಾರ್ಟಿ 3ಕ್ಕೆ ತೃಪ್ತಿಪಟ್ಟುಕೊಂಡಿದೆ. ಪ್ರಚಾರದ ವೇಳೆಯೂ ಬಿಜೆಪಿ, ರಾಜಸ್ಥಾನದ ಗೆಹೊÉàಟ್‌ ಸರಕಾರದ ಅವಧಿಯಲ್ಲಿ ದಲಿತರ ಮೇಲಾದ ದೌರ್ಜನ್ಯವನ್ನು ಪ್ರಸ್ತಾವಿಸಿ, ಕಾಂಗ್ರೆಸ್‌ ವಿರುದ್ಧ ಟೀಕೆಗಳ ಸುರಿಮಳೆ ಸುರಿಸಿತ್ತು.

ಕಾಂಗ್ರೆಸ್‌ಗೆ ವರವಾದ ಶೇ.2 ಮತ!

ತೆಲಂಗಾಣದಲ್ಲಿ ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ನ ಕೇವಲ ಶೇ.2ರಷ್ಟು ಮತಗಳು ಕಾಂಗ್ರೆಸ್‌ಗೆ ಶಿಫ್ಟ್ ಆಗಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ವರದಾನವಾಯ್ತು! ಚುನಾವಣ ಆಯೋಗದ ದತ್ತಾಂಶಗಳೇ ಈ ಅಂಶವನ್ನು ಬಹಿರಂಗಪಡಿಸಿದೆ. 119 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ 64 ಸೀಟುಗಳಲ್ಲಿ ಗೆದ್ದು, ಶೇ.39.40ರಷ್ಟು ಮತಗಳನ್ನು ಗಳಿಸಿದ್ದರೆ, 39 ಕ್ಷೇತ್ರಗಳಲ್ಲಿ ಗೆದ್ದ ಬಿಆರ್‌ಎಸ್‌ ಶೇ.37.35ರಷ್ಟು ಮತಗಳನ್ನು ಗಳಿಸಿವೆ. ಬಿಆರ್‌ಎಸ್‌ನ ಮತ ಹಂಚಿಕೆಯಲ್ಲಿ ಶೇ.10ರಷ್ಟು ಇಳಿಕೆಯಾಗಿದೆ. 2018ರಲ್ಲಿ ಶೇ.47ರಷ್ಟು ಮತಗಳು ಬಿಆರ್‌ಎಸ್‌ಗೆ ಸಿಕ್ಕಿದ್ದವು.

ರಾಜಮನೆತನದವರೇ ಇಲ್ಲದ ಮೊದಲ ವಿಧಾನಸಭೆ

ಹೊಸ ಅಸೆಂಬ್ಲಿಯಲ್ಲಿ ರಾಜಮನೆತನದ ಯಾವೊಬ್ಬ ಸದಸ್ಯನೂ ಇಲ್ಲದೇ ಇರುವುದು ಛತ್ತೀಸ್‌ಗಢದ ಇತಿಹಾಸದಲ್ಲಿ ಇದೇ ಮೊದಲು. ಏಕೆಂದರೆ ಕಾಂಗ್ರೆಸ್‌, ಬಿಜೆಪಿ ಮತ್ತು ಆಪ್‌ನಿಂದ ಕಣಕ್ಕಿಳಿದಿದ್ದ ರಾಜಮನೆತನದ ಎಲ್ಲ 7 ಅಭ್ಯರ್ಥಿಗಳೂ ಈ ಬಾರಿ ಸೋಲುಂಡಿದ್ದಾರೆ. ಈ ಪೈಕಿ ಪ್ರಮುಖರೆಂದರೆ ಕಾಂಗ್ರೆಸ್‌ ಹಿರಿಯ ನಾಯಕ, ನಿರ್ಗಮಿತ ಡಿಸಿಎಂ ಟಿಎಸ್‌ ಸಿಂಗ್‌ ದೇವ್‌, ಅಂಬಿಕಾ ಸಿಂಗ್‌ ದೇವ್‌, ದೇವೇಂದ್ರ ಬಹಾದೂರ್‌ ಸಿಂಗ್‌.

ಮಹಿಳೆಯರಿಗಿಲ್ಲ ಮನ್ನಣೆ

ಇತ್ತೀಚೆಗಷ್ಟೇ ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದ್ದರೂ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಧ್ಯಪ್ರದೇಶ ವಿಧಾನಸಭೆಗಳಲ್ಲಿ ಮಹಿಳಾ ಶಾಸಕರ ಸಂಖ್ಯೆ ತೀರಾ ಕಡಿಮೆಯಿದೆ ಎಂದು ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರಿಸರ್ಚ್‌ನ ದತ್ತಾಂಶಗಳು ತಿಳಿಸಿವೆ. ಈ 3 ರಾಜ್ಯಗಳಲ್ಲಿ ಶಾಸಕಿಯರ ಸಂಖ್ಯೆ ಮೂರನೇ ಒಂದರಷ್ಟೂ ಇಲ್ಲ. ಆದರೆ 4 ರಾಜ್ಯಗಳ ಪೈಕಿ ಛತ್ತೀಸ್‌ಗಢದಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರ ಪೈಕಿ ಅತೀಹೆಚ್ಚು ಅಂದರೆ ಶೇ.21ರಷ್ಟು ಮಂದಿ ಮಹಿಳೆಯರಿದ್ದಾರೆ. 2018ರಲ್ಲಿ ಇಲ್ಲಿ ಈ ಪ್ರಮಾಣ ಶೇ.14ರಷ್ಟಿತ್ತು. ತೆಲಂಗಾಣದಲ್ಲಿ ಶಾಸಕಿಯರ ಪ್ರಮಾಣ ಶೇ.8ರಷ್ಟಿದೆ.

ಅತೀ ಹೆಚ್ಚು ಅಂತರ 1,07,047

ಮಧ್ಯಪ್ರದೇಶದ ಇಂದೋರ್‌-2 ಕ್ಷೇತ್ರದ ಬಿಜೆಪಿ ನಾಯಕ ರಮೇಶ್‌ ಮೆಂಡೋಲಾ ಅವರು ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದವರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಚಿಂಟು ಅವರನ್ನು 1,07,047 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇನ್ನು, ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಬಿಜೆಪಿಯ ಕೃಷ್ಣಾ ಗೌರ್‌ ಅವರೂ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಇದೇ ವೇಳೆ, ಬಿಜೆಪಿಯ ಅರುಣ್‌ ಭೀಮವಾದ್‌ ಅವರು ಶಜಾಪುರ ಕ್ಷೇತ್ರದಲ್ಲಿ ಅತೀ ಕಡಿಮೆ ಅಂದರೆ ಕೇವಲ 28 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಛತ್ತೀಸ್‌ಗಢದಲ್ಲಿ 9 ಸಚಿವರಿಗೆ ಸೋಲು

ಛತ್ತೀಸ್‌ಗಢದಲ್ಲಿ ನಿರ್ಗಮಿತ ಸಿಎಂ ಭೂಪೇಶ್‌ ಬಘೇಲ್‌ ಸಂಪುಟದ 9 ಮಂದಿ ಸಚಿವರು ಈ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಒಟ್ಟು 13 ಸಚಿವರು ಕಣಕ್ಕಿಳಿದಿದ್ದರು. ಇನ್ನು ಉಪಮುಖ್ಯಮಂತ್ರಿ ಸಿಂಗ್‌ ದೇವ್‌ ಅವರು ಕೇವಲ 94 ಮತಗಳ ಅಂತರದಿಂದ ಸೋಲುಂಡಿದ್ದಾರೆ. ಮಿಜೋರಾಂನಲ್ಲೂ ಆಡಳಿತಾರೂಢ ಎಂಎನ್‌ಎಫ್ನ 11 ಸಚಿವರ ಪೈಕಿ 9 ಮಂದಿ ಸೋಲಿನ ರುಚಿ ಕಂಡಿದ್ದಾರೆ.

ಛತ್ತೀಸ್‌ಗಢದ ಬುಡಕಟ್ಟು ಕ್ಷೇತ್ರಗಳಲ್ಲಿ ಬಿಜೆಪಿ, ಎಸ್‌ಸಿ ಸೀಟುಗಳಲ್ಲಿ ಕಾಂಗ್ರೆಸ್‌ ಮೇಲುಗೈ

2018ರ ವಿಧಾನಸಭೆ ಚುನಾವಣೆಯಲ್ಲಿ ಛತ್ತೀಸ್‌ಗಢದ ಬುಡಕಟ್ಟು ಬಾಹುಳ್ಯದ ಕ್ಷೇತ್ರಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಬಿಜೆಪಿ, ಈ ಬಾರಿ ಉತ್ತಮ ಸಾಧನೆ ಮಾಡಿದೆ. 29 ಎಸ್‌ಟಿ ಮೀಸಲು ಕ್ಷೇತ್ರಗಳ ಪೈಕಿ 17ರಲ್ಲಿ ಕಮಲ ಪಕ್ಷ ಜಯಭೇರಿ ಬಾರಿಸಿದೆ. ಪ್ರಧಾನಿ ಮೋದಿ, ಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರವರ ರ್ಯಾಲಿಗಳು, ಬುಡಕಟ್ಟು ಪ್ರದೇಶಗಳಲ್ಲಿ ನಡೆಸಿದ 2 ಪರಿವರ್ತನ ಯಾತ್ರೆಗಳು ಹಾಗೂ ಬಿಜೆಪಿ ನೀಡಿದ್ದ ಆಶ್ವಾಸನೆಗಳು ಆದಿವಾಸಿ ವಲಯದಲ್ಲಿ ಕೇಸರಿ ಪಕ್ಷಕ್ಕೆ ಹೆಚ್ಚಿನ ಲಾಭ ತಂದುಕೊಟ್ಟಿವೆ. ಏತನ್ಮಧ್ಯೆ, ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರಗಳು ಈ ಬಾರಿಯೂ ಕಾಂಗ್ರೆಸ್‌ನ ಕೈಬಿಟ್ಟಿಲ್ಲ ಎನ್ನುವುದು ಫ‌ಲಿತಾಂಶದಿಂದ ಸ್ಪಷ್ಟವಾಗಿದೆ. ಒಟ್ಟು 10 ಎಸ್‌ಸಿ ಅಭ್ಯರ್ಥಿಗಳ ಮೀಸಲು ಕ್ಷೇತ್ರಗಳ ಪೈಕಿ 6ರಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದ್ದು, 2018ಕ್ಕೆ ಹೋಲಿಸಿದರೆ ಒಂದು ಕ್ಷೇತ್ರವನ್ನಷ್ಟೇ ಇಲ್ಲಿ ಕಳೆದುಕೊಂಡಿದೆ.

ಕ್ಷಾಂತರಿಗಳಿಗೆ ಪಾಠ

ಮಧ್ಯಪ್ರದೇಶದ ಗ್ವಾಲಿಯರ್‌- ಛಂಬಲ್‌ ವಲಯದಲ್ಲಿ 34ರ ಪೈಕಿ ಅರ್ಧಕ್ಕೂ ಹೆಚ್ಚು ಸೀಟುಗಳಲ್ಲಿ ಜಯ ಸಾಧಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆದರೆ 2020ರಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಬಂಡಾಯವೆದ್ದು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ 6 ಶಾಸಕರು ಪರಾಭವಗೊಂಡಿದ್ದಾರೆ. 22 ಶಾಸಕರ ಬಂಡಾಯದಿಂದಾಗಿ ಕಾಂಗ್ರೆಸ್‌ನ ಕಮಲ್‌ನಾಥ್‌ ಸರಕಾರ ಪತನಗೊಂಡಿತ್ತು.

ಗೆದ್ದ 70+ ಟಿಕೆಟ್‌ ತಂತ್ರ

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 70 ವರ್ಷ ದಾಟಿದ 14 ಮಂದಿಯನ್ನು ಬಿಜೆಪಿ ಕಣಕ್ಕಿಳಿಸಿತ್ತು ಆ ಪೈಕಿ 80 ವರ್ಷದ  ಓರ್ವ ಅಭ್ಯರ್ಥಿಯೂ  ಸೇರಿದಂತೆ 11 ಮಂದಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 2018ರ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಮಣೆಹಾಕಿದ್ದರಿಂದ ಕೆಲವು ಮತಗಳು ಬಿಜೆಪಿ ಕೈ ತಪ್ಪಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿ ಹಳೆಯ ಮುಖಗಳು, ರಾಜಕೀಯ ನಿಪುಣರಾದ ಹಿರಿಯರಿಗೆ ಬಿಜೆಪಿ ಟಿಕೆಟ್‌ ನೀಡಿದೆ ಎಂದು ರಾಜಕೀಯ ವಿಶ್ಲೇಷಕ ಜೈ ರಾಮ್‌ ಶುಕ್ಲಾ ಹೇಳಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಗೆಲ್ಲುವ ನಿರೀಕ್ಷೆಯಿತ್ತು. ಆದರೂ ಸೋಲುಂಡಿದ್ದೇವೆ. ಸೋಲಿಗೆ ಕಾರಣವೇನು ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಇಂಡಿಯಾ ಮೈತ್ರಿಕೂಟದ ನಾಯಕರ ದೂರುಗಳಿಗೂ ಸ್ಪಂದಿಸುತ್ತೇವೆ.

ಕೆ.ಸಿ. ವೇಣುಗೋಪಾಲ್‌, ಕಾಂಗ್ರೆಸ್‌ ಸಂಘಟನ ಪ್ರಧಾನ ಕಾರ್ಯದರ್ಶಿ

2024ರ ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡಿದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲ. ಪಂಚರಾಜ್ಯಗಳ ಚುನಾವಣೆಯ ಸೋಲು ಜನರ ಸೋಲಲ್ಲ, ಅದು ಕಾಂಗ್ರೆಸ್‌ನ ಸೋಲು.

ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕಿ

ಟಾಪ್ ನ್ಯೂಸ್

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

dw

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

8

Kasaragod: ಟ್ಯಾಂಕರ್‌ ಲಾರಿಯಿಂದ ರಸ್ತೆಗೆ ಹರಿದ ಎಣ್ಣೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.