ದೆಹಲಿಗೆ 700 ಟನ್ ಆಕ್ಸಿಜನ್ ಪೂರೈಸಿ : ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ
Team Udayavani, May 6, 2021, 7:03 PM IST
ನವ ದೆಹಲಿ : ದೆಹಲಿಯಲ್ಲಿನ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವಷ್ಟು ಆಮ್ಲಜನಕವನ್ನು ಪೂರೈಸಲು ದೆಹಲಿ ಸರ್ಕಾರವು ಕೋರಿದಂತೆ ರಾಷ್ಟ್ರ ರಾಜಧಾನಿಗೆ ಪ್ರತಿದಿನ ಕನಿಷ್ಠ 700 ಟನ್ ಆಮ್ಲಜನಕವನ್ನು ಪೂರೈಸಬೇಕೆಂದು ಸುಪ್ರೀಂ ಕೋರ್ಟ್ ಇಂದು(ಮೇ. 06) ಕೇಂದ್ರಕ್ಕೆ ತಿಳಿಸಿದೆ.
ನೀವು ದೆಹಲಿಗೆ 700 ಟನ್ ನೀಡಬೇಕಾಗುತ್ತದೆ (700 ಟನ್ ದೇನಾ ಹೈ ಪಡೇಗಾ)” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಏನನ್ನೂ ಮರೆಮಾಡಲು ಸಾಧ್ಯವಾಗದಿದ್ದರೆ, ಕೇಂದ್ರದಿಂದ ಹಂಚಿಕೆ ಮತ್ತು ವಿತರಣೆಯನ್ನು ಹೇಗೆ ಪಾರದರ್ಶಕವಾಗಿ ಮಾಡಲಾಗುತ್ತದೆ ಎಂಬುದನ್ನು ರಾಷ್ಟ್ರದ ಮುಂದೆ ಬರಲಿ”, “ದೆಹಲಿಗೆ 700 ಟನ್ ಆಮ್ಲಜನಕವನ್ನು ಸರಬರಾಜಿನ ಬಗ್ಗೆ ಕೇಂದ್ರವು ತಿರಸ್ಕಾರದಲ್ಲಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಓದಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವ ಶ್ರೀನಿವಾಸ ಪೂಜಾರಿ ಸೂಚನೆ
ಇನ್ನು, ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ, ಕೇಜ್ರಿವಾಲ್ ಸರ್ಕಾರವು ಸುಪ್ರೀಂಕೋರ್ಟ್ ಕೇಂದ್ರದ ವಿರುದ್ಧ ಮಾತನಾಡಲು ಬಳಸುತ್ತಿದೆ ಎಂದು ಹೇಳಿದೆ.
ವೈದ್ಯಕೀಯ ಸೌಲಭ್ಯಗಳ ಪೂರೈಕೆಯಲ್ಲಿ ವೈಫಲ್ಯ ಇರುವುದರಿಂದ ಲೆಕ್ಕಪರಿಶೋಧನೆ ನಡೆಯಬೇಕಿದೆ, ಆದರೆ ಅದು ರಾಜಕೀಯ ನಾಯಕತ್ವ ಅಥವಾ ಅಧಿಕಾರಿಗಳಿಗೆ ವಿರುದ್ಧವಾಗಿಲ್ಲ. ನಾವು ದೆಹಲಿ ಕೇಂದ್ರಿತರಾಗಲು ಸಾಧ್ಯವಿಲ್ಲ ಎಂದು ಹೇಳಿದರು ಕೇಂದ್ರಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ, ದೆಹಲಿಯಲ್ಲಿ ಸಮಸ್ಯೆಯುಂಟಾಗಿರುವುದು ಕೇಂದ್ರದಿಂದ ಪುರೈಕೆಯಾಗುತ್ತಿರುವುದರಿಂದಲ್ಲ. ಅಲ್ಲಿನ ಸರ್ಕಾರದ ವೈಫಲ್ಯದಿಂದ ಎಂದು ಆರೋಪಿಸಿದೆ.
ಇನ್ನು, ಇಂದು(ಗುರುವಾರ, ಮೇ.06) ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರ ಸರ್ಕಾರದಿಂದ ಪ್ರತಿದಿನ ದೆಹಲಿಗೆ 700 ಟನ್ ಆಕ್ಸಿಜನ್ ಪೂರೈಕೆಯಾದರೆ ಆಮ್ಲಜನಕದ ಕೊರತೆಯಿಂದ ಸಾವಿನ ಪ್ರಶ್ನೆಯೇ ಬರುವುದಿಲ್ಲವೆಂದು ಹೇಳಿದ್ದರು.
ಓದಿ : ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಉಚಿತ ವಾಹನ ಸೇವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.