ಸತ್ತಿದ್ದು ತಿಳಿದಿದ್ದು ತಿಂಗಳ ಬಳಿಕ
Team Udayavani, Oct 8, 2017, 7:35 AM IST
ಹೈದರಾಬಾದ್: ಅಪಾರ್ಟ್‌ಮೆಂಟ್‌ವೊಂದ ರಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದ ಹಿರಿಜೀವವೊಂದು ಮೃತಪಟ್ಟ ವಿಷಯ ಗೊತ್ತಾಗಿದ್ದು, ಅಮೆರಿಕದಲ್ಲಿದ್ದ ಮಗ ವಾಪಸಾದ ಬಳಿಕವೇ. ಇದು ಎರಡು ತಿಂಗಳ ಹಿಂದೆ ಮುಂಬೈನಲ್ಲಿ ನಡೆದ ಘಟನೆ.
ಇದೀಗ ಹೈದರಾಬಾದ್‌ನಲ್ಲೂ ಇಂಥದ್ದೇ ಮನ ಕಲಕುವ ಘಟನೆಯೊಂದು ನಡೆದಿದೆ. ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದ ರಿಂದ ಏಕಾಂಗಿಯಾಗಿ ಫ್ಲ್ಯಾಟ್‌ವೊಂದರಲ್ಲಿ ನೆಲೆಸಿದ್ದ ಲಕ್ಷ್ಮೀ ನಾರಾಯಣ ಮೂರ್ತಿ(75) ಎಂಬ ನಿವೃತ್ತ ಸರ್ಕಾರಿ ನೌಕರರೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ಮೃತಪಟ್ಟು 1 ತಿಂಗಳು ಕಳೆದಿದೆ. ಸ್ನಾನ ಮುಗಿಸಿ ಬರುವಾಗ ಹಲ್ಲಿಯೊಂದರ ಮೇಲೆ ಕಾಲಿಟ್ಟು, ಜಾರಿ ಬಿದ್ದು, ತಲೆಗೆ ಪೆಟ್ಟಾಗಿದ್ದರಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಬಿದ್ದಿರುವ ಜಾಗದಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿದೆ.
ತಿಂಗಳುಗಳಿಂದ ಪತಿ ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂದು ಆತಂಕಗೊಂಡ ಅವರ ಪತ್ನಿ, ತಮ್ಮ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಅಮೆರಿಕದಿಂದ ವಾಪಸಾಗಿ ನೋಡಿದಾಗಲೇ ಪತಿ ಮೃತಪಟ್ಟಿರುವುದು ಗೊತ್ತಾಗಿದೆ. ಮೂರ್ತಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರೂ ಅಮೆರಿಕದಲ್ಲಿ ನೆಲೆಸಿದ್ದಾರೆ. ಮಕ್ಕಳು ಅಮೆರಿಕಕ್ಕೆ ಬಂದು ವಾಸಿಸುವಂತೆ ಒತ್ತಾಯಿಸಿ ದರೂ ಒಪ್ಪದ ಮೂರ್ತಿ ಅವರು ಪತ್ನಿಯನ್ನು ಜುಲೈನಲ್ಲಿ ಅಮೆರಿಕಕ್ಕೆ ಕಳುಹಿಸಿದ್ದರು.
ಮೂರ್ತಿಯವರನ್ನು ಅಕ್ಕಪಕ್ಕದ ಮನೆಯವರು ನೋಡಿದ್ದು ಬಹಳ ಕಡಿಮೆ. ನೆರೆಹೊರೆಯವರು ಈ ಮನೆಗೆ ಬೀಗ ಹಾಕಿ, ಎಲ್ಲರೂ ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದೇ ಭಾವಿಸಿದ್ದರು. ಹಾಗಾಗಿ ಮೂರ್ತಿ ಅವರು ಮೃತರಾಗಿದ್ದು ತಿಂಗಳವರೆಗೂ ಯಾರಿಗೂ ಗೊತ್ತೇ ಆಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.