78,760 ಹೊಸ ಸೋಂಕಿತರು: ಭಾರತದಲ್ಲಿ 35 ಲಕ್ಷ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ
Team Udayavani, Aug 30, 2020, 11:09 AM IST
ಹೊಸದಿಲ್ಲಿ: ದೇಶದ ಕೋವಿಡ್-19 ಸೋಂಕಿತರ ಸಂಖ್ಯೆ 35 ಲಕ್ಷ ಮೀರಿದೆ. ಶನಿವಾರ ದೇಶದಲ್ಲಿ 78,760 ಹೊಸ ಸೋಂಕು ಪ್ರಕರಣಗಳು ದೃಢವಾಗಿದ್ದು, 948 ಮಂದಿ ಸಾವನ್ನಪ್ಪಿದ್ದಾರೆ.
ದೇಶದ ಸೋಂಕಿತರ ಸಂಖ್ಯೆ 35,42,733ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೆ 27,13,933 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಶನಿವಾರ ಒಂದೇ ದಿನ 948 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 63,498ಕ್ಕೇರಿದೆ.
ಶನಿವಾರ ದೇಶದಲ್ಲಿ 10,55,027 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗಿದೆ. ಅವುಗಳಲ್ಲಿ 78,760 ಸ್ಯಾಂಪಲ್ ಗಳು ಪಾಸಿಟಿವ್ ವರದಿಯಾಗಿದೆ. ದೇಶದಲ್ಲಿ ಇದುವರೆಗೆ 4,14,61,636 ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ 70 ಲಕ್ಷ ದೋಚಿದ್ದ ಅಡುಗೆ ಭಟ್ಟನ ಬಂಧನ
ಶನಿವಾರ ರಾಜ್ಯದಲ್ಲಿ 8324 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟು 8110 ಸೋಂಕಿತರು ಗುಣಮುಖರಾಗಿದ್ದು, ಮತ್ತು ಈ ಅವಧಿಯಲ್ಲಿ 115 ಸೋಂಕಿತರು ಮೃತಪಟ್ಟಿದ್ದಾರೆ.
ಸೋಂಕಿತ ಪ್ರಕರಣಗಳಲ್ಲಿ ಬೆಂಗಳೂರು ನಗರದಲ್ಲಿ (2993) ಆ ಬಳಿಕದ ಸ್ಥಾನಗಳಲ್ಲಿ ಮೈಸೂರು (309), ಬಳ್ಳಾರಿ (468), ದಕ್ಷಿಣ ಕನ್ನಡ (272), ಬೆಳಗಾವಿ (276), ಧಾರವಾಡ (290), ಉಡುಪಿ (172), ದಾವಣಗೆರೆ (319), ಕಲಬುರಗಿ (173), ಶಿವಮೊಗ್ಗ (333), ಹಾವೇರಿ (93), ಕೊಪ್ಪಳ (238), ಮಂಡ್ಯ (194 ), ಹಾಸನ (325), ಬಾಗಲಕೋಟೆ (152), ಬೆಂಗಳೂರು ಗ್ರಾಮಾಂತರ (182), ರಾಯಚೂರು (186), ಉತ್ತರ ಕನ್ನಡ (130), ಗದಗ (181) , ವಿಜಯಪುರ (130) ಮತ್ತು ಯಾದಗಿರಿ (98) ಜಿಲ್ಲೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.