ನಾಳೆಯಿಂದ ಏನೇನು ಬದಲಾವಣೆ?
Team Udayavani, Aug 31, 2021, 6:40 AM IST
ಸೆ.1ರಿಂದ ವಿತ್ತೀಯ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆಗಲಿವೆ. ಹೀಗಾಗಿ ನಿಮ್ಮ ವ್ಯವಹಾರಗಳನ್ನು ನಡೆಸುವ ಮುನ್ನ ಯಾವ ಕ್ಷೇತ್ರದಲ್ಲಿ ಏನು ಬದಲಾವಣೆಯಾಗಲಿದೆ ಎಂಬುದರ ಬಗ್ಗೆ ಪಕ್ಷಿ ನೋಟ ಇಲ್ಲಿದೆ.
ಪಿಎಫ್ – ಆಧಾರ್ ಲಿಂಕ್ :
ವೇತನ ಪಡೆಯುವ ವರ್ಗಕ್ಕೆ ಈ ಅಂಶ ಪ್ರಧಾನವಾದದ್ದು. ಒಂದು ವೇಳೆ ಲಿಂಕ್ ಮಾಡಿಲ್ಲದೇ ಇದ್ದರೆ ಉದ್ಯೋಗದಾತರು ಉದ್ಯೋಗಿಗಳ ಖಾತೆಗೆ ತಮ್ಮ ಪಾಲಿನ ಪಿಎಫ್ ಜಮೆ ಅಸಾಧ್ಯ.
ಸಿಲಿಂಡರ್ ದರ ಹೆಚ್ಚಳ :
ಪ್ರತೀ ತಿಂಗಳ ಆರಂಭದಲ್ಲಿ ಸರಕಾರ ಅಡುಗೆ ಅನಿಲ ಪರಿಷ್ಕರಿಸುತ್ತದೆ. ಈಗಾಗಲೇ ಸಬ್ಸಿಡಿ ರಹಿತ ಸಿಲಿಂಡರ್ ದರವನ್ನು 25 ರೂ.ಗಳನ್ನು ಹೆಚ್ಚಿಸಲಾಗಿದೆ.
ಪಾನ್- ಆಧಾರ್ ಲಿಂಕ್ :
ವಿಶೇಷವಾಗಿ ಎಸ್‌ಬಿಐನಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದವರಿಗೆ ಈ ನಿಯಮ ಅನ್ವಯ. ಪಾನ್ ಮತ್ತು ಆಧಾರ್ ಲಿಂಕ್ ಮಾಡದೇ ಇದ್ದರೆ ವಿತ್ತೀಯ ವಹಿವಾಟು ನಡೆಸಲು ಅಸಾಧ್ಯ. ಹೀಗಾಗಿ ಪಾನ್- ಆಧಾರ್ ಲಿಂಕ್‌ಗೆ ಕ್ರಮ ಕೈಗೊಳ್ಳಬೇಕು.
ಚೆಕ್ ಕ್ಲಿಯರೆನ್ಸ್ :
ಪಾಸಿಟಿವ್ ಪೇ ಸಿಸ್ಟಮ್ ಮೂಲಕ ಚೆಕ್‌ಗಳನ್ನು ಕ್ಲಿಯರೆನ್ಸ್‌ಗೆ ಕಳುಹಿಸಲಾಗುತ್ತದೆ. 50 ಸಾವಿರ ರೂ.ಗಳಿಗಿಂತ ಹೆಚ್ಚು ಮೊತ್ತ ಅಥವಾ 5 ಲಕ್ಷ ರೂ.ಗಳಿಗಿಂತ ಹೆಚ್ಚು ಮೊತ್ತದ ಚೆಕ್ ಅನ್ನು ನೀಡುವುದಿದ್ದರೆ, ಮುಂಚಿತವಾಗಿಯೇ ಬ್ಯಾಂಕ್ ಶಾಖೆಗೆ ಮಾಹಿತಿ ನೀಡಬೇಕು. ಬ್ಯಾಂಕ್ ಶಾಖೆಯ ಅಧಿಕಾರಿಗಳು ಮಾಹಿತಿಯನ್ನು ಆಧರಿಸಿ ಚೆಕ್ ಅನ್ನು ಕ್ಲಿಯರೆನ್ಸ್‌ಗೆ ಕಳುಹಿಸುತ್ತಾರೆ. ಮುಂಚಿತ ಮಾಹಿತಿ ನೀಡದೇ ಇದ್ದರೆ, ಚೆಕ್ ಬೌನ್ಸ್ ಆಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.