ಭಾರತದಲ್ಲೇ ಸಾಯುವಾಸೆ; ದೇಶ ವಿಭಜನೆಯ ದುಷ್ಪರಿಣಾಮದ ಉದಾಹರಣೆ
Team Udayavani, Jan 16, 2018, 12:16 PM IST
ರುದ್ರಾಪುರ: ಪಾಕಿಸ್ತಾನದ ಪೌರತ್ವ ಹೊಂದಿರುವ ವ್ಯಕ್ತಿಯೊಬ್ಬ ಭಾರತವೇ ತನ್ನ ತಾಯ್ನಾಡೆಂದೂ, ಇಲ್ಲೇ ತನ್ನ ಕೊನೆಯುಸಿರೆಳೆಯಬೇಕೆಂದೂ ಹಂಬಲಿಸುತ್ತಾ ತನ್ನ ಜೀವನದ ಕೊನೆಯ ದಿನಗಳನ್ನು ಎಣಿಸುತ್ತಿರುವ ಕುತೂಹಲದ ಕಥೆಯಿದು.
ಇವರ ಹೆಸರು ನಂದ ಕಿಶೋರ್. ಇವರಿಗೀಗ 80 ವರ್ಷ. ಉತ್ತರ ಪ್ರದೇಶದ ರುದ್ರಾಪುರದ ನಾರಾಯಣಪುರ ಎಂಬ ಹಳ್ಳಿಯಲ್ಲಿ 1938ರಲ್ಲಿ ಜನಿಸಿದ್ದ ಇವರನ್ನು 1946ರಲ್ಲಿ ಈತನ ತಾಯಿ, ಪಾಕಿಸ್ತಾನದ ಅಬು ಅಹ್ಮದ್ ಎಂಬ ಜಮೀನ್ದಾರರ ಮನೆಗೆಲಸಕ್ಕೆ ಕಳುಹಿಸಿದ್ದರು. ಆಗಿನ್ನೂ ಅವರಿಗೆ ಕೇವಲ 8 ವರ್ಷ.
ಪಾಕಿಸ್ತಾನಕ್ಕೆ ಹೋದ ಮರುವರ್ಷವೇ ಸ್ವತಂತ್ರ್ಯ ಬಂದು ಭಾರತ, ಪಾಕಿಸ್ತಾನಗಳು ಉದಯಿಸಿದವು. ಅಷ್ಟರಲ್ಲಿ, ಎರಡೂ ದೇಶಗಳ ನಡುವೆ ವಿಭಜನಾ ದಂಗೆಗಳು ನಡೆದಿದ್ದರಿಂದ ಅವರು ಭಾರತಕ್ಕೆ ಬರಲಾಗಲಿಲ್ಲ. ಅಷ್ಟರಲ್ಲಿ ಹಜ್ಮತ್ ಅಲಿ ಎಂಬ ಹೆಸರು ಪಡೆದಿದ್ದ ಅವರು
ಪಾಕಿಸ್ತಾನದ ಪೌರತ್ವ ಪಡೆದಿದ್ದರು.
ಆದರೆ, ದೈಹಿಕವಾಗಿ ಅಲ್ಲಿದ್ದರೂ, ಮನಸ್ಸು ಭಾರತದಲ್ಲೇ ಇತ್ತು. ಹಠ ತೊಟ್ಟು ಆತ 1965ರಲ್ಲಿ ಉತ್ತರ ಪ್ರದೇಶದ ತನ್ನ ಹಳ್ಳಿಗೆ ಹಿಂದಿರುಗಿದರು. ಇಲ್ಲೇ ಉಳಿಯಬೇಕೆಂದು ಪ್ರಯತ್ನಿಸಿದರು. ಅವರ ಪಾಕಿಸ್ತಾನಿ ಪೌರತ್ವ ಹಾಗೂ ಅವರು ಹೊಂದಿದ್ದ ಪಾಸ್‌ಪೋರ್ಟ್ ಅವರಿಗೆ ಅಡ್ಡಿಯಾಯಿತು. ಇವರ ಪರಿಸ್ಥಿತಿ ಅರ್ಥ ಮಾಡಿಕೊಂಡು ಮಾನವೀಯ ದೃಷ್ಟಿಯಿಂದ 1974ರಿಂದ 1998ರವರೆಗೆ ವೀಸಾ ಅವಧಿ ವಿಸ್ತರಿಸಲಾಗಿದೆ. ಆದರೆ, ಇಲ್ಲೇ ಶಾಶ್ವತವಾಗಿ ನೆಲೆಸಲು ಅನುಮತಿ ಸಿಕ್ಕಿಲ್ಲ. ಕೇಂದ್ರ ಕೆಂಗಣ್ಣು ಬಿಟ್ಟರೆ ನಾಳೆಯೇ ಅವರು ಜಾಗ ಖಾಲಿ ಮಾಡಬೇಕು. ಇದೇ ಆತಂಕದಲ್ಲಿ ಅವರೀಗ ದಿನದೂಡುತ್ತಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.