Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ
Team Udayavani, Jan 16, 2025, 8:37 PM IST
ನವದೆಹಲಿ: ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ ಪರಿಷ್ಕರಣೆಗಾಗಿ 8ನೇ ವೇತನ ಆಯೋಗ ರಚನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಬಗ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ(ಜ16) ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಸಂಪುಟ ಸಭೆ ಒಪ್ಪಿಗೆ ನೀಡಿದ್ದರೂ ಆಯೋಗ ರಚನೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ.
8 ನೇ ವೇತನ ಆಯೋಗ ರಚಿಸಲು ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದು, ಸುಮಾರು 50 ಲಕ್ಷ ಕೇಂದ್ರ ಸರಕಾರಿ ನೌಕರರ ವೇತನ ಮತ್ತು 65 ಲಕ್ಷ ಪಿಂಚಣಿದಾರರ ಭತ್ಯೆಗಳ ಪರಿಷ್ಕರಣೆಯಾಗಲಿದೆ.
ಈ ಬೆಳವಣಿಗೆಯು ಕೇಂದ್ರ ಬಜೆಟ್ ಗಿಂತ ಸ್ವಲ್ಪ ಮುಂಚಿತವಾಗಿ ಬಂದಿದ್ದು, ಸರಕಾರಿ ನೌಕರರ ಸಂಬಳ ಮತ್ತು ನಿವೃತ್ತರ ಪಿಂಚಣಿ ಹೆಚ್ಚಿಸುವ ನಿರೀಕ್ಷೆಯಿದೆ.
8 ನೇ ವೇತನ ಆಯೋಗದಲ್ಲಿ ಜನವರಿ 2016 ರಲ್ಲಿ ಜಾರಿಗೆ ತರಲಾದ 7 ನೇ ವೇತನ ಆಯೋಗಕ್ಕಿಂತ ಹೆಚ್ಚಿನ ಸುಧಾರಣೆಗಳನ್ನು ನಿರೀಕ್ಷಿಸಲಾಗಿದೆ. ಅನುಷ್ಠಾನದ ಮೇಲ್ವಿಚಾರಣೆಗಾಗಿ ಕೇಂದ್ರ ಸರಕಾರವು ಸಮಿತಿಯನ್ನು ರಚಿಸಿದೆ.
ಬದಲಾವಣೆ ಜಾರಿಗೆ ಬಂದರೆ ಸರಕಾರಿ ನೌಕರರ ಮೂಲ ವೇತನದಲ್ಲಿ ಏರಿಕೆಯಾಗಲಿದೆ. ಪರಿಷ್ಕೃತ ವೇತನಗಳು ಮತ್ತು ಪಿಂಚಣಿಗಳನ್ನು ಲೆಕ್ಕಾಚಾರ ಮಾಡಲು ಮೂಲ ವೇತನವನ್ನು ಎಷ್ಟು ಏರಿಕೆ ಮಾಡಲಾಗುತ್ತದೆ ಎಂಬುದನ್ನು ಫಿಟ್ಮೆಂಟ್ ಅಂಶವು ನಿರ್ಧರಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅವಕಾಶ: ಸಿಎಂ
Sukma; ಭೀಕರ ಗುಂಡಿನ ಕಾಳಗದಲ್ಲಿ 12 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ
Saif Ali Khan: ನಟ ಸೈಫ್ ಅಲಿಖಾನ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ
ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ
MUST WATCH
ಹೊಸ ಸೇರ್ಪಡೆ
Uppinangady: ಗಾಂಜಾ ಸಹಿತ ಓರ್ವನ ಬಂಧನ
Kasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡ
ಸ್ಕೂಟಿಯಲ್ಲಿಟ್ಟಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಮೃತ್ಯು!
Saif; ಸೈಫ್ ಅಲಿ ಖಾನ್ ಮೇಲೆ ದಾಳಿಗೂ ಮೊದಲು 1 ಕೋಟಿ ರೂ.ಗೆ ಬೇಡಿಕೆ
Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.