ಚೀನದಿಂದ ಬಯಲಾಯ್ತು ಮತ್ತೂಂದು ದೋಖಾ

Team Udayavani, Nov 9, 2020, 11:21 PM IST

ಚೀನದಿಂದ ಬಯಲಾಯ್ತು ಮತ್ತೂಂದು ದೋಖಾ

ನವದೆಹಲಿ: ಭಾರತ ಮತ್ತು ಚೀನ ನಡುವೆ ನಡೆದ ಎಂಟನೇ ಸುತ್ತಿನ ಮಾತುಕತೆಯಲ್ಲಿ ಲಡಾಖ್‌ನಿಂದ ಸೇನೆ ವಾಪಸ್‌ ಪಡೆವ ಬಗ್ಗೆ ಯಾವುದೇ ಒಮ್ಮತಾಭಿಪ್ರಾಯ ವ್ಯಕ್ತವಾಗಿಲ್ಲ. ಇದೇ ವೇಳೆ ಸಿಕ್ಕಿಂನ ದೋಕ್ಲಾಂ ಪ್ರದೇಶದಲ್ಲಿ ಚೀನ ಸೇನೆ ರಸ್ತೆ ನಿರ್ಮಾಣ, ಸುರಂಗ ರಚನೆಯ ಚಟುವಟಿಕೆಗಳನ್ನು ಬಿರುಸಾಗಿಯೇ ಮುಂದುವರಿಸಿದೆ. ಈ ಮೂಲಕ 2017ರಲ್ಲಿ ಎರಡೂ ದೇಶಗಳ ನಡುವೆ 73 ದಿನಗಳ ಬಿಕ್ಕಟ್ಟಿಗೆ ಕಾರಣವಾಗಿದ್ದ ಸ್ಥಳಕ್ಕೆ ಸರ್ವ ಋತು ಸಂಪರ್ಕ ಸಾಧಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಉಪಗ್ರಹ ಚಿತ್ರಗಳ ಸಹಿತ “ಎನ್‌ಡಿಟಿವಿ’ ವರದಿ ಮಾಡಿದೆ.

2019ರ ಆಗಸ್ಟ್‌ನಲ್ಲಿ ಲಭ್ಯವಾಗಿದ್ದ ಚಿತ್ರದಲ್ಲಿ ಸಣ್ಣ ರೀತಿಯ ಸುರಂಗ ಕೊರೆದದ್ದು ಪತ್ತೆಯಾಗಿತ್ತು. ಮೆರ್ಗು ಲಾ ಪಾಸ್‌ ಮೂಲಕ ಉತ್ತರ ಭಾಗಗಳಿಗೆ ತೆರಳುವ ರಸ್ತೆಗೆ ರಕ್ಷಣೆ ನೀಡಲು ಅದನ್ನು ರಚಿಸಲಾಗಿತ್ತು. ಅಕ್ಟೋಬರ್‌ನಲ್ಲಿ ಅದೇ ಟನೆಲ್‌ ಬಗ್ಗೆ ಹೊಸ ಫೋಟೋಗಳನ್ನು ಗಮನಿಸಿದಾಗ 500 ಮೀಟರ್‌ನಷ್ಟು ಮುಂದಕ್ಕೆ ಕಾಮಗಾರಿಯಲ್ಲಿ ಪ್ರಗತಿಯಾದದ್ದು ದೃಢಪಟ್ಟಿತ್ತು. ದೋಕ್ಲಾಂಗೆ ಸರ್ವ ಋತು ದಾರಿಯನ್ನು ನಿರ್ಮಾಣ ಮಾಡುವುದೇ ಈ ಟನೆಲ್‌ ನಿರ್ಮಾಣದ ಉದ್ದೇಶ ಎಂದು ರಕ್ಷಣಾ ಕ್ಷೇತ್ರದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚಳಿಗಾಲದಲ್ಲಿ ದೋಕ್ಲಾಂಗೆ ಹೋಗಲು ಅಸಾಧ್ಯ. ಆ ಸ್ಥಳದ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಈ ಕಾಮಗಾರಿ ನಡೆದಿದೆ. ಕೇಂದ್ರ ಸರಕಾರ ಚೀನ ಜತೆಗಿನ ಬಿಗುವಿನ ವಾತಾವರಣವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಯತ್ನಿಸುತ್ತಿರುವಂತೆಯೇ ಈ ಹೊಸ ಬೆಳವಣಿಗೆ ವರದಿಯಾಗಿದೆ.

ಫಿಲಿಪ್ಪೀನ್ಸ್‌ಗೆ ಭಾರತ ಹತ್ತಿರ
ಮಿತ್ರ ರಾಷ್ಟ್ರ ಫಿಲಿಪ್ಪೀನ್ಸ್‌ಗೆ ಭಾರತ ಕೋಸ್ಟಲ್‌ ಸರ್ವೇಲೆನ್ಸ್‌ ರಾಡಾರ್‌ ಸಿಸ್ಟಂ(ಕರಾವಳಿ ಕಣ್ಗಾವಲು ರಾಡಾರ್‌ ವ್ಯವಸ್ಥೆ) ಒದಗಿಸಲು ಮನಸ್ಸು ಮಾಡಿದೆ. ಈ ವಿಚಾರವಾಗಿ ಭಾರತದ ವಿದೇಶಾಂಗ ಸಚಿವ ಎಸ್‌.ಜಯಶಂಕರ್‌ ಅವರು ಫಿಲಿಪಿನ್ಸ್‌ ಆಡಳಿತದೊಂದಿಗೆ ವರ್ಚುವಲ್‌ ಸಭೆ ನಡೆಸಿದ್ದಾರೆ. ಈ ರಾಡಾರ್‌ ವ್ಯವಸ್ಥೆಯಿಂದಾಗಿ ಇನ್ಮುಂದೆ ಫಿಲಿಪ್ಪೀನ್ಸ್‌ಗೆ ಸಾಗರ ಭಾಗದಲ್ಲಿ ಚೀನದ ಚಲನವಲನಗಳ ಮೇಲೆ ಹದ್ದಿನಗಣ್ಣಿಡಲು ಸಾಧ್ಯವಾಗಲಿದೆ.ದಕ್ಷಿಣ ಚೀನ ಸಮುದ್ರದಲ್ಲಿ ದಶಕಗಳಿಂದ ಫಿಲಿಪ್ಪೀನ್ಸ್‌ ಮತ್ತು ಚೀನ ನಡುವೆ ಬಿಕ್ಕಟ್ಟು ಮುಂದುವರಿದೇ ಇದೆ. ಈ ಕಾರಣಕ್ಕಾಗಿಯೇ, ಭಾರತದ ಈ ನಿರ್ಣಯ ನಿಸ್ಸಂಶಯವಾಗಿಯೂ ಮಾಸ್ಟರ್‌ಸ್ಟ್ರೋಕ್‌ ಆಗಿ ಬದಲಾಗಲಿದೆ ಎನ್ನುವುದು ರಕ್ಷಣಾ ಪರಿಣತರ ಅಭಿಪ್ರಾಯ. ಭಾರತವೆಂದಷ್ಟೇ ಅಲ್ಲ, ಆಗಸ್ಟ್‌ ತಿಂಗಳಲ್ಲಿ ಜಪಾನ್‌ ಸಹ ಫಿಲಿಪ್ಪೀನ್ಸ್‌ಗೆ ಬಹುಆಯಾಮದ ರಾಡಾರ್‌ ವ್ಯವಸ್ಥೆಯನ್ನು ಒದಗಿಸಿತ್ತು.

ಟಾಪ್ ನ್ಯೂಸ್

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

death

Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು

arrested

Kasaragod: ಪತ್ನಿಯ ಹಂತಕನಿಗೆ 10 ವರ್ಷ ಕಠಿನ ಸಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.