Andhra Pradesh: ಆಟವಾಡುತ್ತಾ ನಿಂಬೆಹಣ್ಣು ನುಂಗಿ 9 ತಿಂಗಳ ಮಗು ಮೃತ್ಯು
ಮದುವೆಯಾಗಿ 7 ವರ್ಷದ ಬಳಿಕ ಜನಿಸಿದ್ದ ಮಗು
Team Udayavani, Jan 11, 2024, 6:53 PM IST
ಆಂಧ್ರ ಪ್ರದೇಶ: ಮನೆಯಲ್ಲಿ ಆಟವಾಡುತ್ತಾ ಮಗುವೊಂದು ನಿಂಬೆಹಣ್ಣು ನುಂಗಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಆಂಧ್ರಪ್ರದೇಶದ ಅನಂತಪುರಂನಲ್ಲಿ ನಡೆದಿದೆ.
ಅನಂತಪುರ ಜಿಲ್ಲೆಯ ಪೆದ್ದವಡುಗೂರು ಮಂಡಲ ಮಲ್ಲೇನಿಪಲ್ಲಿಯದ ಸಾಕಿದೀಪ ಮತ್ತು ಗೋವಿಂದರಾಜ್ ದಂಪತಿಯ ಜಸ್ವಿತಾ (9 ತಿಂಗಳು) ಮೃತ ಮಗು.
ಎಂದಿನಂತೆ ಮನೆಯಲ್ಲಿ ಆಡುತ್ತಾ ಮನೆಯಲ್ಲಿತ್ತು. ತಾಯಿ ಮಗುವನ್ನು ನೋಡುತ್ತಾ , ಮತ್ತೊಂದು ಕಡೆ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಮಗು ಜಗಲಿಯಲ್ಲಿದ್ದ ನಿಂಬೆಹಣ್ಣನ್ನು ಹಿಡಿದು ನುಂಗಿದೆ. ಆ ಬಳಿಕ ಮಗುವಿನ ಉಸಿರಾಟದಲ್ಲಿ ತೊಂದರೆ ಆಗಿದೆ. ಕೂಡಲೇ ತಾಯಿ ಗಂಟಲಿನಲ್ಲಿ ಸಿಲುಕಿದ್ದ ನಿಂಬೆಹಣ್ಣನ್ನು ತೆಗೆಯಲು ಯತ್ನಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಪರಿಕ್ಷೀಸಿದ ಬಳಿಕ ಆದಾಗಲೇ ಮಗು ಮೃತಪಟ್ಟಿದೆ ಎಂದಿದ್ದಾರೆ. ಸಾಕಿದೀಪ ಮತ್ತು ಗೋವಿಂದರಾಜ್ ದಂಪತಿಗೆ ಮದುವೆಯಾದ 7 ವರ್ಷದ ಬಳಿಕ ಮಗು ಜನಿಸಿತ್ತು. ಆದರೆ ಇಂತಹ ಆಕಸ್ಮಿಕ ದುರಂತದಲ್ಲಿ ಮಗು ಮೃತಪಟ್ಟಿರುವುದಕ್ಕೆ ಇಡೀ ಕುಟುಂಬವೇ ಶೋಕದಲ್ಲಿ ಮುಳುಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.