Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ
Team Udayavani, Sep 21, 2024, 9:06 AM IST
ಇಂಫಾಲ್: ಮ್ಯಾನ್ಮಾರ್ ನಿಂದ 900 ಕುಕಿ ಉಗ್ರರು ಒಳನುಸುಳಿರುವುದು ಮಣಿಪುರದಲ್ಲಿ ಬೆಳಕಿಗೆ ಬಂದಿದೆ ಎಂದು ರಾಜ್ಯ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ.
ಶುಕ್ರವಾರ (ಸೆ.20) ರಂದು ಪತ್ರಿಕಾಗೋಷ್ಠಿ ನಡೆಸಿದ ಅವರು ಕಳೆದ ಮೂರ್ನಾಲ್ಕು ದಿನಗಳಿಂದ ಮಣಿಪುರದಲ್ಲಿ ಉಗ್ರಗಾಮಿಗಳ ಚಲನವಲನದ ಬಗ್ಗೆ ವರದಿಯಾಗುತ್ತಿದೆ ಒಳನುಸುಳುವ ಉಗ್ರಗಾಮಿಗಳು ಡ್ರೋನ್‌ಗಳು, ಬಾಂಬ್‌ಗಳು, ಸ್ಪೋಟಕಗಳು, ಕ್ಷಿಪಣಿಗಳು ಮತ್ತು ಗೆರಿಲ್ಲಾ ಯುದ್ಧ ಸಾಧನಗಳನ್ನು ಬಳಸುತ್ತಿದ್ದಾರೆ, 30-30 ಜನರ ತಂಡ ವಿವಿಧ ಪ್ರದೇಶಗಳಲ್ಲಿ ಅಡಗಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 28 ರ ಒಳಗೆ ಈ ತಂಡ ಮೈತೆಯ್ ಗ್ರಾಮಗಳ ಮೇಲೆ ದಾಳಿ ನಡೆಸುವ ಮುನ್ಸೂಚನೆ ಇದ್ದು ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಚುರಾಚಂದ್‌ಪುರ, ತೆಂಗನೌಪಾಲ್, ಉಖ್ರುಲ್, ಕಾಮ್‌ಜಾಂಗ್ ಮತ್ತು ಫರ್ಜೌಲ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಮೇ 3, 2023 ರಿಂದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಮೀಸಲಾತಿಗಾಗಿ ಹಿಂಸಾಚಾರ ನಡೆಯುತ್ತಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ, ಹಿಂಸಾಚಾರದಲ್ಲಿ ಇದುವರೆಗೆ 237 ಜನರು ಸಾವನ್ನಪ್ಪಿದ್ದಾರೆ. 1500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 60 ಸಾವಿರಕ್ಕೂ ಹೆಚ್ಚು ಮಂದಿ ಮನೆ ತೊರೆದಿದ್ದಾರೆ.
ಮಣಿಪುರ ಪೊಲೀಸರು, ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್ ಜಂಟಿ ಕಾರ್ಯಾಚರಣೆಯಲ್ಲಿ ಸೆಪ್ಟೆಂಬರ್ 12 ರಂದು ಚುರಾಚಂದ್‌ಪುರದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಸೇನೆ ವಶಪಡಿಸಿಕೊಂಡಿತ್ತು.
ಇಂಫಾಲದಲ್ಲಿ ಸಚಿವರ ಆಪ್ತ ಸಹಾಯಕನ ಅಪಹರಣ:
ಶುಕ್ರವಾರ (ಸೆ.20) ರಂದು ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಮಣಿಪುರ ಸಚಿವ ಎಲ್. ಸುಸಿಂದರೊ ಅವರ ಆಪ್ತ ಸಹಾಯಕನನ್ನು ಅವರ ನಿವಾಸದಿಂದಲೇ ಬೆಳಗ್ಗೆ 8:30ರ ಸುಮಾರಿಗೆ ಅಪಹರಿಸಲಾಗಿದೆ, ಆಪ್ತ ಸಹಾಯಕನನ್ನು ಸಾರಂಗ್ತೇಂ ಸೋಮರಂದ್ರೋ(43) ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಅವರು ತಮ್ಮ ಅಧಿಕೃತ ಕೆಲಸಕ್ಕಾಗಿ ಹೋಗುತ್ತಿದ್ದರು ಈ ವೇಳೆ ತಂಡ ಹಲವು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಅಪಹರಣ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣಕ್ಕೊಳಗಾದ ವ್ಯಕ್ತಿಗಾಗಿ ಶೋಧ ನಡೆಯುತ್ತಿದೆ. ಆತನ ಅಪಹರಣದ ಹಿಂದಿನ ಕಾರಣ ತಿಳಿದುಬಂದಿಲ್ಲ. ಅಲ್ಲದೇ ಯಾವುದೇ ಬಂಡುಕೋರ ಗುಂಪು ಘಟನೆಯ ಹೊಣೆ ಹೊತ್ತುಕೊಂಡಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyclone Fengal: ತಿರುವಣ್ಣಾಮಲೈಯಲ್ಲಿ ಭೂ ಕುಸಿತ: 7 ಮಂದಿ ಪೈಕಿ ನಾಲ್ವರ ಮೃತದೇಹ ಪತ್ತೆ
Nagpura: ರಾಜಕೀಯ ಎಂದರೆ ಅತೃಪ್ತ ಆತ್ಮಗಳ ಸಮುದ್ರ: ಕೇಂದ್ರ ಸಚಿವ ನಿತಿನ್ ಗಡ್ಕರಿ
Dal Lake: ಶ್ರೀನಗರದಲ್ಲಿ ಏಷ್ಯಾದ ಮೊದಲ ಜಲ ಸಾರಿಗೆ ʼಉಬರ್ ಶಿಕಾರಾʼ ಆರಂಭ
Alappuzha: ಬಸ್ ಗೆ ಡಿಕ್ಕಿ ಹೊಡೆದ ಕಾರು; ಐವರು ವೈದ್ಯಕೀಯ ವಿದ್ಯಾರ್ಥಿಗಳ ಸಾ*ವು
New District: “ಮಹಾ ಕುಂಭಮೇಳ’ ಈಗ ಉತ್ತರಪ್ರದೇಶದ ಹೊಸ ಜಿಲ್ಲೆ!
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.