ಕೇರಳದಲ್ಲಿ ಇಂದಿನಿಂದ 928 ವಸ್ತುಗಳ ಬೆಲೆ ಏರಿಕೆ
ಶೇ.1ರಷ್ಟು ಪ್ರವಾಹ ಸೆಸ್ ಜಾರಿಗೊಳಿಸಿದ ಕೇರಳ ಸರಕಾರ
Team Udayavani, Aug 1, 2019, 6:43 PM IST
ತಿರುವನಂತಪುರ: ಕಳೆದ ಬಾರಿಯ ಮಹಾಮಳೆಯಿಂದಾಗಿ ಪ್ರವಾಹಕ್ಕೀಡಾಗಿರುವ ಪ್ರದೇಶಗಳಲ್ಲಿ ಮತ್ತೆ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ಕೇರಳ ಸರಕಾರ ಆ.1ರಿಂದ 928 ವಸ್ತುಗಳ ಮೇಲೆ ವಿಶೇಷ ತೆರಿಗೆ ಹೇರಿದೆ.
ಶೇ.1ರಷ್ಟು ಪ್ರವಾಹ ಸೆಸ್ ಅನ್ನು ಅದು ವಿಧಿಸಿದ್ದು, ಇದರಿಂದ ವಸ್ತುಗಳ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಈ ಸೆಸ್ ಜಿಎಸ್ಟಿ ಸ್ಲ್ಯಾಬ್ ನಲ್ಲಿರುವ ಶೇ.12ರಷ್ಟು ತೆರಿಗೆ ಹೊಂದಿದ ವಸ್ತುಗಳು, ಶೇ.18ರಷ್ಟು ಮತ್ತು ಶೇ.28ರಷ್ಟು ತೆರಿಗೆ ಹೊಂದಿದ ವಸ್ತುಗಳಿಗೂ ಅನ್ವಯವಾಗುತ್ತದೆ.
ಪೆಟ್ರೋಲ್, ಡೀಸೆಲ್ ಮತ್ತು ಮದ್ಯದ ಮೇಲೆ ಈ ಪ್ರವಾಹ ಸೆಸ್ ಹಾಕಲಾಗಿಲ್ಲ. ಅಲ್ಲದೆ ಶೇ.0ಯಿಂದ ಶೇ.5ರ ಸ್ಲ್ಯಾಬ್ನಲ್ಲಿರುವ ವಸ್ತುಗಳಿಗೂ ಕರ ಹಾಕಲಾಗಿಲ್ಲ. ಶೇ.1ರಷ್ಟು ತೆರಿಗೆ ವಿಧಿಸಿದ ಬಹುತೇಕ ವಸ್ತುಗಳ ಶೇ.12ರ ಜಿಎಸ್ಟಿ ಸ್ಲ್ಯಾಬ್ ಅಡಿಯಲ್ಲಿ ಬರುತ್ತವೆ ಎಂದು ಸರಕಾರದ ಮೂಲಗಳು ಹೇಳಿವೆ. ಕಾರು, ಬೈಕ್, ಟಿ.ವಿ. ಫ್ರಿಡ್ಜ್, ವಾಷಿಂಗ್ ಮಷೀನ್, ಮೊಬೈಲ್ ಫೋನ್, ಔಷಧ, ಸಿಮೆಂಟ್, ಪೈಂಟ್ ಇತ್ಯಾದಿಗಳಿಗೆ ವಿಶೇಷ ತೆರಿಗೆ ಅನ್ವಯವಾಗಲಿದೆ. ಇದರಿಂದ ಕಾರಿನ ಬೆಲೆ 8 ಲಕ್ಷ ರೂ. ಆಗಿದ್ದರೆ, 8 ಸಾವಿರ ರೂ.ಹೆಚ್ಚುವರಿ ತೆರಿಗೆಯಿರಲಿದೆ. ಬೈಕ್ ನ ಬೆಲೆ 80 ಸಾವಿರ ರೂ. ಆಗಿದ್ದರೆ, 800 ರೂ. ಟಿ.ವಿ.ದರ 30 ಸಾವಿರ ರೂ. ಆಗಿದ್ದರೆ 300 ರೂ. ಕರ ವಿಧಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್ಗಳು
Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ
Jharkhand Polls: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ… ಸೋರೆನ್ ಸರ್ಕಾರದ ವಿರುದ್ಧ ಕಿಡಿ
Tragedy: ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಪೌರ ಕಾರ್ಮಿಕರ ದುರಂತ ಅಂತ್ಯ
MUST WATCH
ಹೊಸ ಸೇರ್ಪಡೆ
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.