![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jan 20, 2022, 8:10 AM IST
ಹೊಸದಿಲ್ಲಿ: 2020ರಲ್ಲಿ ಕೊರೊನಾ ಸೋಂಕಿನಿಂದಾಗಿ ಸಾಲದ ಕಂತು ಮರು ಪಾವತಿ ಅವಧಿ ವಿಸ್ತರಣೆಗಾಗಿ ಗ್ರಾಹಕರಿಗೆ ನೆರವು ನೀಡಿದ ಎಸ್‌ಬಿಐಗೆ ಕೇಂದ್ರ ಸಂಪುಟ 973.74 ಕೋಟಿ ರೂ. ನೀಡಲು ಪರಿಹಾರ ನೀಡಲು ನಿರ್ಧರಿಸಲಾಗಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಬಿಡುಗಡೆ ಮಾಡಿದ ಈ ಮೊತ್ತದಲ್ಲಿ ಇತರ ಬ್ಯಾಂಕ್‌ಗಳಿಗೂ ಪಾಲು ಸಿಗಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ನಿಗದಿತ ಸಾಲ ಪಡೆದವರಿಗೆ ಬಡ್ಡಿ ಪಾವತಿಸಲು ನೆರವಾ ಗಲು 5,500 ಕೋಟಿ ರೂ. ಮೊತ್ತವನ್ನು ಸರಕಾರ ನೀಡಿದೆ. ಈ ಪೈಕಿ 4,626.93 ಕೋಟಿ ರೂ.ಗಳನ್ನು 2020-21ನೇ ಸಾಲಿನಲ್ಲಿ ನೀಡಲಾಗಿದೆ ಎಂದರು. ಇದ ರಿಂದಾಗಿ 2020 ಮಾ.1ರಿಂದ ಆ.31ರ ಅವಧಿಯಲ್ಲಿ ವಿತರಿಸಲಾಗಿರುವ ಸಾಮಾನ್ಯ ಬಡ್ಡಿ ಹಾಗೂ ಚಕ್ರಬಡ್ಡಿ ನಡುವಿನ ವ್ಯತ್ಯಾಸದ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗಿದೆ.
ವಿಸ್ತರಣೆ: ರಾಷ್ಟ್ರೀಯ ಸಫಾಯಿ ಕರ್ಮ ಚಾರಿಗಳ ಆಯೋಗದ (ಎನ್‌ಸಿಎಸ್‌ಕೆ) ಅಧಿಕಾರಾವಧಿಯನ್ನು ಈ ವರ್ಷದ ಮಾ. 31ರ ಅನಂತರದಿಂದ ಮೂರು ವರ್ಷಗಳವರೆಗೆ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ. ಅದರಂತೆ, ಆಯೋಗದ ಅಧಿಕಾರಾವಧಿ 2025ರ ಮಾ. 31ಕ್ಕೆ ಕೊನೆಗೊಳ್ಳುತ್ತದೆ. ಜತೆಗೆ ಐಆರ್‌ಇಡಿಎ’ಗೆ 1,500 ಕೋಟಿ ರೂ.ಗಳ ಅನುದಾನ ನೀಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.