1 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಕೇಸ್ ತನಿಖೆ
Team Udayavani, Jan 5, 2019, 12:30 AM IST
ಹೊಸದಿಲ್ಲಿ: ಕ್ರೆಡಿಟ್, ಡೆಬಿಟ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ 1 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಹಣಕಾಸು ಅವ್ಯವಹಾರಗಳು ಹಾಗೂ ಮೋಸದ ಪ್ರಕರಣಗಳ ತನಿಖೆ ನಡೆಸುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಜೊತೆಗೆ ಸರಕಾರ ಮಾತು ಕತೆ ನಡೆಸುತ್ತಿದೆ ಎಂದು ರಾಜ್ಯಸಭೆಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ನೆಟ್‌ವರ್ಕಿಂಗ್ ವೆಬ್‌ಸೈಟ್‌ಗಳು ಸೇರಿದಂತೆ ಎಲ್ಲ ರೀತಿಯ ಡೇಟಾ ಕಳ್ಳತನಗಳ ಸಮಸ್ಯೆ ಯನ್ನು ನಿರ್ವಹಿಸುವುದಕ್ಕಾಗಿ ಹಣಕಾಸು ಡೇಟಾ ರಕ್ಷಣೆ ಮಸೂದೆಯನ್ನು ರೂಪಿಸಲಾಗಿದೆ.
ಕಾಲ್ ಡ್ರಾಪ್‌ಗೆ 58 ಲಕ್ಷ ದಂಡ: ಐಡಿಯಾ, ಬಿಎಸ್‌ಎನ್‌ಎಲ್ ಸೇರಿದಂತೆ ಟೆಲಿಕಾಂ ಸಂಸ್ಥೆಗಳಿಗೆ ಕಾಲ್ ಡ್ರಾಪ್‌ಗೆ ಸಂಬಂಧಿಸಿದಂತೆ 58 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. ಬಿಎಸ್‌ಎನ್‌ಎಲ್‌ಗೆ 4 ಲಕ್ಷ ಹಾಗೂ ಐಡಿಯಾಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದಿದ್ದಾರೆ.
27 ಅಪರಾಧಿಗಳು ಪರಾರಿ: ಕಳೆದ ಐದು ವರ್ಷದಲ್ಲಿ ಹಣಕಾಸು ವಿಚಾರದಲ್ಲಿ ಆರೋಪಿಗಳಾಗಿದ್ದ 27 ಜನರು ದೇಶ ತೊರೆದಿದ್ದಾರೆ ಎಂದು ಸಂಸತ್ತಿಗೆ ಶುಕ್ರವಾರ ಕೇಂದ್ರ ಸರಕಾರ ಮಾಹಿತಿ ನೀಡಿದೆ. ಈ ಪೈಕಿ 20 ಪ್ರಕರಣಗಳಲ್ಲಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಇಂಟರ್‌ಪೋಲ್ ಅನ್ನು ಸಂಪರ್ಕಿಸಲಾಗಿದ್ದು, 8 ಜನರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ವಿತ್ತ ಖಾತೆ ಸಹಾಯಕ ಸಚಿವ ಶಿವ ಪ್ರತಾಪ್ ಶುಕ್ಲಾ ಹೇಳಿದ್ದಾರೆ.
ಗೇಣಿದಾರರಿಗೂ ಸಿಗಲಿ ಪ್ರೋತ್ಸಾಹಧನ: ಕೇಂದ್ರ ಸರಕಾರ ಹೊರಡಿಸುವ ವಿವಿಧ ಕೃಷಿ ಪ್ರೋತ್ಸಾಹಧನವು ಗೇಣಿದಾರರಿಗೆ ಸಿಗುತ್ತಿಲ್ಲ ಎಂದು ಛತ್ತೀಸ್‌ಗಢದ ಕಾಂಗ್ರೆಸ್ ಸಂಸದೆ ಛಾಯಾ ವರ್ಮಾ ಲೋಕಸಭೆಯಲ್ಲಿ ಆರೋಪಿಸಿದ ಹಿನ್ನೆಲೆಯಲ್ಲಿ, ಈ ಬಗ್ಗೆ ಅಧ್ಯಯನ ನಡೆಸುವಂತೆ ಸಭಾಪತಿ ವೆಂಕಯ್ಯ ನಾಯ್ಡು ಸರಕಾರಕ್ಕೆ ಸೂಚಿಸಿದ್ದಾರೆ.
ಕಂಪನಿ ತಿದ್ದುಪಡಿ ಮಸೂದೆಗೆ ಅಸ್ತು: ಉದ್ಯಮ ಸ್ನೇಹಿ ನೀತಿಗಳು, ಎನ್‌ಸಿಎಲ್‌ಟಿ ನೀತಿ ಸರಳಗೊಳಿಸುವಿಕೆ ಮತ್ತು ನಿಯಮಕ್ಕೆ ಬದ್ಧವಾಗಿಲ್ಲದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಗಳನ್ನು ಒಳಗೊಂಡಿರುವ ಕಂಪನಿಗಳ ತಿದ್ದಪಡಿ ಮಸೂದೆಗೆ ಲೋಕಸಭೆ ಶುಕ್ರವಾರ ಅನು ಮೋದನೆ ನೀಡಿದೆ. ಲೋಕಸಭೆಯಲ್ಲಿ ಮಸೂದೆಗೆ ಧ್ವನಿಮತದಿಂದ ಅಂಗೀಕಾರ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.