ವೀರ್ಯ ಬಲೂನ್‌ ವೈದ್ಯಕೀಯವಾಗಿ ಅಸಾಧ್ಯ: Good Doctor tweet

Team Udayavani, Mar 2, 2018, 4:31 PM IST

Semen-balloon-700.jpg

ಹೊಸದಿಲ್ಲಿ : ಬಲೂನ್‌ಗಳಲ್ಲಿ ವೀರ್ಯ ತುಂಬುವುದು ವೈದ್ಯಕೀಯವಾಗಿ ಅಸಾಧ್ಯ ಎಂದು @Kaalatheetham ಟ್ವಿಟರ್‌ ಹ್ಯಾಂಡಲ್‌ನಡಿ “ದಿ ಗುಡ್‌ ಡಾಕ್ಟರ್‌’ ಓರ್ವರು ಮಾಡಿರುವ ಸರಣಿ ಟ್ವೀಟ್‌ ಈಗ ವೈರಲ್‌ ಆಗಿದೆ. 

ಸರ್ಜಿಕಲ್‌ ಕ್ಯಾಪ್‌ ತೊಟ್ಟ  ಪ್ರೊಫೈಲ್‌ ಫೋಟೋ ಇರುವ ಈ ಟ್ವೀಟಿಗನ ವೈಯಕ್ತಿಕ ಮಾಹಿತಿ ಪ್ರಕಾರ ಇವರು ಒಬ್ಬ ವೈದ್ಯರಾಗಿದ್ದು ಬಹುತೇಕ ಕರ್ನಾಟಕದವರೆಂದು ತಿಳಿಯಲಾಗಿದೆ. 

ಹೋಳಿ ಹಬ್ಬಕ್ಕೆ ಎರಡು ದಿನಗಳಿರುವಾಗ ದಿಲ್ಲಿ ವಿವಿ ಮತ್ತು ದಿಲ್ಲಿಯ ಇತರ ಕಾಲೇಜುಗಳ ವಿದ್ಯಾರ್ಥಿನಿಗಳ ಮೇಲೆ ವೀರ್ಯ ತುಂಬಿದ ಬಲೂನ್‌ ಎಸೆಯಲಾತೆಂಬ ವಿಷಯ ಭಾರೀ ಕೋಪಾಟೋಪದ ಪ್ರತಿಭಟನೆಗೆ ಕಾರಣವಾಗಿತ್ತು.

ದಿಲ್ಲಿಯ ಪೊಲೀಸ್‌ ಪ್ರಧಾನ ಕಾರ್ಯಲಯದ ಮುಂದೆ ದಿಲ್ಲಿ ವಿವಿ ಮತ್ತು ಇತರ ಕಾಲೇಜುಗಳ ವಿದ್ಯಾರ್ಥಿನಿಯರು ಹಾಗೂ ಆವರ ಶಿಕ್ಷಕರು ಪ್ರತಿಭಟನೆ ನಡೆಸಿ ಹುಡುಗಿಯರಿಗೆ ಕಾಲೇಜಿನೊಳಗೆ ಮತ್ತು ಹೊರಗೆ ರಕ್ಷಣೆ ನೀಡುವಂತೆ ಆಗ್ರಹಿಸಿದ್ದರು. ದಿಲ್ಲಿ ಮಹಿಳಾ ಆಯೋಗ ಕೂಡ ಈ ಪ್ರತಿಭಟನೆಗೆ ಧ್ವನಿಗೂಡಿಸಿತ್ತು. 

ಟ್ವಿಟರ್‌ನಲ್ಲಿ “ಗುಡ್‌ ಡಾಕ್ಟರ್‌’  ‘ವೀರ್ಯ ಬಲೂನ್‌’ ಕುರಿತಾಗಿ ಹೀಗೆ ಬರೆದಿದ್ದಾರೆ: 

“ವೀರ್ಯವನ್ನು ಬಲೂನ್‌ನಲ್ಲಿ ತುಂಬುವುದು ವೈದ್ಯಕೀಯವಾಗಿ ಅಸಾಧ್ಯ. ವೀರ್ಯವು ವಾತಾವರಣಕ್ಕೆ ಮುಕ್ತವಾದಾಗ ಅದು ಕೇವಲ ಐದೇ ನಿಮಿಷಗಳಲ್ಲಿ  ಒಣಗಿ ಗಟ್ಟಿಯಾಗುತ್ತದೆ. ಆದುದರಿಂದಲೇ ವೀರ್ಯ ಬ್ಯಾಂಕುಗಳು ವಿಶೇಷವಾಗಿ ಮಾಡಿದಂತಹ ಟ್ಯೂಬ್‌ಗಳಲ್ಲಿ ವೀರ್ಯವನ್ನು ಸಂಗ್ರಹಿಸುತ್ತವೆ’

“ಸಾಮಾನ್ಯವಾಗಿ ಪ್ರಾಯ ಪ್ರಬುದ್ಧ ವ್ಯಕ್ತಿಯೋರ್ವ ಮೊದಲ ಸಲ ಸ್ಖಲನ ಮಾಡುವಾಗ 5 ಎಂಎಲ್‌ ವೀರ್ಯವನ್ನು ಹೊರ ಹಾಕುತ್ತಾನೆ. ಅನಂತರದ ಸ್ಖಲನಗಳಲ್ಲಿ ವೀರ್ಯದ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಪುರುಷರಲ್ಲಿ ವೀರ್ಯವು ಶಾಂಪೇನ್‌ ಬಾಟಲ್‌ನ ಹಾಗೆ ತುಂಬಿರುವುದಿಲ್ಲ’

“ಈ ವೈದ್ಯಕೀಯ ನಿಜಾಂಶಗಳನ್ನು ಗಮನಿಸಿದಾಗ ಒಂದು ಬಲೂನ್‌ನಲ್ಲಿ ವೀರ್ಯ ತುಂಬಲು 100 + ಪುರುಷರು (ಅದೇ ಬಲೂನ್‌ನಲ್ಲಿ) ವೀರ್ಯ ಸ್ಖಲನ ಮಾಡಬೇಕಾಗುತ್ತದೆ ! ವೀರ್ಯದ ಬಲೂನ್‌ನಲ್ಲಿ ನೀರು ಅಥವಾ ಬೇರಾವುದೇ ದ್ರಾವಣ ಹಾಕಿದರೆ ವೀರ್ಯವು ನಾಶವಾಗಿ ಹೋಗುತ್ತದೆ. ನೀರಿನಲ್ಲಿ ವೀರ್ಯವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಿಲ್ಲ’

“ಬಿಟಿಡಬ್ಲ್ಯು ವೀರ್ಯವನ್ನು 0.5-1 ಎಂಎಲ್‌ ಸ್ಟ್ರಾಗಳಲ್ಲಿ ಸಂಗ್ರಹಿಸಿ ದ್ರವೀಕೃತ ನೈಟ್ರೋಜನ್‌ ಇರುವ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಹಾಗಿರುವಾಗ ವೀರ್ಯ ಮತ್ತು ದ್ರವೀಕೃತ ನೈಟ್ರೋಜನ್‌ ಅನ್ನು ಬಲೂನ್‌ನಲ್ಲಿ ತುಂಬಿಡುವುದು ಸಾಧ್ಯವಿಲ್ಲ. ವೀರ್ಯ ತುಂಬಿದ ಬಲೂನ್‌ ಬಗ್ಗೆ ಟ್ಟಿಟರ್‌ನಲ್ಲಿ ಬರೆಯುವ ಮುನ್ನ ನೀವು ಸ್ವಲ್ಪಮಟ್ಟಿನ ವೈದ್ಯಕೀಯ ಹಿನ್ನೆಲೆಯನ್ನು ತಿಳಿಯುವ ಪ್ರಯತ್ನ ಮಾಡಬೇಕು’.  

ಟಾಪ್ ನ್ಯೂಸ್

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

1-wwwe

NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Daily Horoscope

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

Belthangady: ಅಪಘಾತದಲ್ಲಿ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಸಾವು

Belthangady: 14 ವರ್ಷ ಜೀವನ್ಮರಣ ಸ್ಥಿತಿಯಲ್ಲಿದ್ದ ಶಿಕ್ಷಕಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.